For Quick Alerts
  ALLOW NOTIFICATIONS  
  For Daily Alerts

  ಸಾವಿರಾರು ಕೋಟಿ ಗಳಿಕೆ ನಿರೀಕ್ಷೆಯಲ್ಲಿ ಕ್ರಿಶ್ 3

  By ಜೇಮ್ಸ್ ಮಾರ್ಟಿನ್
  |

  ಹೃತಿಕ್ ರೋಷನ್, ಪ್ರಿಯಾಂಕಾ ಛೋಪ್ರಾ ಹಾಗೂ ಕಂಗನಾ ರಾನೌತ್ ಅಭಿನಯದ ಬಹುನಿರೀಕ್ಷಿತ ಚಿತ್ರ ಕ್ರಿಶ್ 3 ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಬೆಳ್ಳಿತೆರೆಗೆ ಬರಲಿದ್ದು ಸಾವಿರಾರು ಕೋಟಿ ರು ಗಳಿಕೆ ನಿರೀಕ್ಷೆ ಹೊತ್ತಿದೆ. ದುಷೃ ಶಿಕ್ಷಣ ಶಿಷ್ಟ ರಕ್ಷಣ ಥೀಮ್ ಹೊಂದಿರುವ ಈ ಚಿತ್ರ ಹಬ್ಬದ ಸಂದರ್ಭದಲ್ಲಿ ಬಿಡುಗಡೆಗೊಳ್ಳುತ್ತಿರುವುದರಿಂದ ಚಿತ್ರದ ಗಳಿಕೆ ಬಗ್ಗೆ ಹೆಚ್ಚಿನ ನಿರೀಕ್ಷೆಗಳಿವೆ.

  ಬಿಡುಗಡೆಗೊಂಡ ವಾರದೊಳಗೆ ಒಂದು ಸಾವಿರ ಕೋಟಿ ರೂ. ಬಾಕ್ಸ್ ಆಫೀಸ್ ಗಳಿಕೆಯನ್ನು ದಾಖಲಿಸುವ ವಿಶ್ವಾಸಹೊತ್ತಿದೆ ಎನ್ನಲಾಗಿದೆ. ನವೆಂಬರ್ 1ರಂದು ಬೆಳ್ಳಿತೆರೆಗೆ ಬಿಡುಗಡೆಗೊಳ್ಳಲಿರುವ ವೈಜ್ಞಾನಿಕ ಕಥಾ ವಸ್ತುವನ್ನು ಒಳಗೊಂಡ ಕ್ರಿಶ್ 3, ಈ ಮೊದಲಿನ ಕೊಯಿ ಮಿಲ್ ಗಯಾ ಮತ್ತು ಕ್ರಿಶ್ ಚಿತ್ರಗಳ 3ನೇ ಕಂತಿನ ರೂಪವಾಗಿದೆ.

  ರಾಕೇಶ್ ರೋಷನ್ ನಿರ್ಮಾಣ, ನಿರ್ದೇಶನದ ಈ ಚಿತ್ರದಲ್ಲಿ ಹೃತಿಕ್ ರೋಶನ್, ವಿವೇಕ್ ಒಬೆರಾಯ್, ಪ್ರಿಯಾಂಕಾ ಚೋಪ್ರಾ ಮತ್ತು ಕಂಗನಾ ರಾನೌತ್ ಪ್ರಧಾನ ಭೂಮಿಕೆಯಲ್ಲಿದ್ದಾರೆ. ಹಾಲಿವುಡ್ ಎಕ್ಸ್ ಮೆನ್ ಚಿತ್ರವನ್ನು ಹೋಲುವ ಈ ಚಿತ್ರವು ಬಾಕ್ಸ್ ಆಫೀಸ್ ನಲ್ಲಿ ದಾಖಲೆ ನಿರ್ಮಿಸುವುದರ ಬಗ್ಗೆ ವಿಶ್ವಾಸವಿದ್ದರೂ ಜನರಿಗೆ ಅದರಲ್ಲೂ ಮಕ್ಕಳಿಗೆ ಮೆಚ್ಚುಗೆ ಆಗುವಂತೆ ನಿರ್ಮಿಸಲಾಗಿದೆ ಎಂದು ರಾಕೇಶ್ ರೋಷನ್ ಹೇಳಿದ್ದಾರೆ.

  ಕ್ರಿಶ್ 3ಚಿತ್ರದ ಪೋಸ್ಟರ್ ಗಳು, ಟ್ರೇಲರ್ ಅಭಿಮಾನಿಗಳಿಗೆ ಹುಚ್ಚೆಬ್ಬಿಸಿದೆ. ಮಕ್ಕಳಿಗೆ ಕ್ರೇಜ್ ಹುಟ್ಟಿಸಲು ಬೆಂಗಳೂರಿನಲ್ಲಿ ಕ್ರಿಶ್ 3 ಗೇಮ್ಸ್ ಅನ್ನು ಹೃತಿಕ್ ಬಿಡುಗಡೆ ಮಾಡಿದ್ದರು. ಇಲ್ಲಿ ಕ್ರಿಶ್ 3 ಪೋಸ್ಟರ್ ಗಳು ಇಲ್ಲಿವೆ ನೋಡಿ...

  ಚಿತ್ರದ ಪೋಸ್ಟರ್

  ಚಿತ್ರದ ಪೋಸ್ಟರ್

  ಕ್ರಿಶ್ 3ಚಿತ್ರದ ಪೋಸ್ಟರ್

  ವಿಭಿನ್ನ ಪಾತ್ರಧಾರಿಗಳು

  ವಿಭಿನ್ನ ಪಾತ್ರಧಾರಿಗಳು

  ಕ್ರಿಶ್ 3 ಚಿತ್ರದ ವಿಭಿನ್ನ ಪಾತ್ರಧಾರಿಗಳು

  ಹಳೆ ನೆನಪು

  ಹಳೆ ನೆನಪು

  ಕೋಯಿ ಮಿಲ್ ಗಯಾ ಚಿತ್ರದ ನೆನಪು ಮೂಡಿಸುವ ದೃಶ್ಯ ಕ್ರಿಶ್ 3 ನಲ್ಲಿದೆ

   ಫೇಸ್ ಬುಕ್ ಪ್ರಚಾರ

  ಫೇಸ್ ಬುಕ್ ಪ್ರಚಾರ

  ಫೇಸ್ ಬುಕ್ ನಲ್ಲಿ ಚಿತ್ರದ ಪಾತ್ರಗಳ emoticons ಸೃಷ್ಟಿಸಿ ಪ್ರಚಾರ ಕೈಗೊಳ್ಳಲಾಗಿದೆ.

  ಕಂಗಾನಾ ಸ್ಟೈಲ್

  ಕಂಗಾನಾ ಸ್ಟೈಲ್

  ಲೇಡಿ ಗಾಗಾ ಹೋಲುವ ಹೇರ್ ಸ್ಟೈಲ್ ಹೊಂದಿರುವ ಕಂಗನಾ ರಾನೌತ್ ಚಿತ್ರದಲ್ಲಿ ಪ್ರಧಾನ ಪಾತ್ರದಲ್ಲಿದ್ದಾರೆ. ಹೃತಿಕ್ ಗೆ ಪ್ರಿಯಾಂಕಾ ಜೋಡಿಯಾಗಿದ್ದಾರೆ.

  ಕಾಲ್

  ಕಾಲ್

  ವಿವೇಕ್ ಒಬೆರಾಯ್ ಅವರು ಕಾಲ್ ನೆಗಟಿವ್ ಛಾಯೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

  ಕಾಯಾ

  ಕಾಯಾ

  ಕಾಯಾ ನೆಗಟಿವ್ ಪಾತ್ರದಲ್ಲಿ ಕಂಗನಾ ವಿವಿಧ ವರ್ಣಗಳಲ್ಲಿ ಕಾಣಿಸಿಕೊಳ್ಳುವ ಊಸರವಳ್ಳಿ ರೀತಿ ಪಾತ್ರವಂತೆ

  ಅಂತ್ ಮನ್

  ಅಂತ್ ಮನ್

  ಇರುವೆಗಳು ತಮ್ಮ ತೂಕಕ್ಕಿಂತ 60 ಪಟ್ಟು ತೂಕ ಹೊರಬಲ್ಲದ್ದಂತೆ ಇದರ ಛಾಯೆ antman ಪಾತ್ರಧಾರಿಯಲ್ಲಿದೆ.

  ಫ್ರಾಗ್ ಮ್ಯಾನ್

  ಫ್ರಾಗ್ ಮ್ಯಾನ್

  ಕಪ್ಪೆ ರೀತಿ ಪಾತ್ರ ನಾಲಗೆ ಚಾಚಿ ಎಲ್ಲರನ್ನು ಕೊಲ್ಲುವ ಶಕ್ತಿ ಇದೆಯಂತೆ

  ರೈನೊ ಮ್ಯಾನ್

  ರೈನೊ ಮ್ಯಾನ್

  ಖಡ್ಗಮೃಗದ ರೀತಿಯ ಶಕ್ತಿಯುಳ್ಳ ಪಾತ್ರಧಾರಿ

  English summary
  This Diwali (Deepavali) is not just about lights and crackers but we will also get to see a fight between the good and the evil on the big screen as Krrish 3 releases this Friday, November 1. This superhero film starring Hrithik Roshan in the title role is a sequel to Krrish 2 and is the third installment to the Krrish series produced by Rakesh Roshan.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X