»   » ಕುನಾಲ್ ಗೆ ಜೋಡಿಯಾದ ಬಚ್ಚನ್ ಮಗಳು

ಕುನಾಲ್ ಗೆ ಜೋಡಿಯಾದ ಬಚ್ಚನ್ ಮಗಳು

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಹಿಂದಿ ಚಿತ್ರರಂಗದ ಪ್ರತಿಭಾವಂತ ನಟ, ಮದುವೆಗೆ ಸಿದ್ಧವಾಗಿರುವ ಸೂಕ್ತ ವರ ಎನಿಸಿರುವ ಕುನಾಲ್ ಕಪೂರ್ ಮದುವೆ ಫಿಕ್ಸ್ ಆಗಿದೆ. ಮೇರು ನಟ ಅಮಿತಾಬ್ ಬಚ್ಚನ್ ಅವರ ಮಗಳನ್ನು ಕುನಾಲ್ ವರಿಸುತ್ತಿದ್ದಾರೆ. ಅರೇ ಇದು ಯಾರು ಬಚ್ಚನ್ ಮಗಳು ಎಂದು ಹುಬ್ಬೇರಿಸಬೇಡಿ..

ಕುನಾಲ್ ಕಪೂರ್ ವರಿಸುತ್ತಿರುವುದು ಅಮಿತಾಬ್ ಬಚ್ಚನ್ ಅವರ ಸೋದರ ಅಜಿತಾಬ್ ಅವರ ಪುತ್ರಿ ನೈನಾ ಬಚ್ಚನ್. ಬಿಗ್ ಬಿ ನೈನಾ ಕಂಡರೆ ಎಲ್ಲಿಲ್ಲದ ಅಕ್ಕರೆ, ಅಭಿಷೇಕ್, ಶ್ವೇತಾ ಬಚ್ಚನ್ ನಂದಾ ರಂತೆ ನೈನಾರನ್ನು ಬಿಗ್ ಬಿ ಕಾಣುತ್ತಾರೆ. ಹೀಗಾಗಿ ಕುನಾಲ್ ಜತೆ ನೈನಾ ಮದುವೆಗೆ ಬಿಗ್ ಬಿ ಒಪ್ಪಿಗೆ ಕೂಡಾ ಮಹತ್ವ ಪಾತ್ರ ವಹಿಸಿತ್ತು.

ಇನ್ವೆಸ್ಟ್ ಮೆಂಟ್ ಬ್ಯಾಂಕರ್ ಆಗಿ ಕಾರ್ಯನಿರ್ವಹಿಸುತ್ತಿರುವ ನೈನಾ ಬಚ್ಚನ್ ಅವರು ಅಜಿತಾಬ್ ಹಾಗೂ ರಮೋಲ್ ಬಚ್ಚನ್ ದಂಪತಿಯ ಮೂರನೇ ಮಗಳು. ಕುನಾಲ್ ಹಾಗೂ ನೈನಾ ಕಳೆದ ಎರಡು ಮೂರು ವರ್ಷಗಳಿಂದ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದರು. ಆದರೆ, ಮದುವೆ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿರಲಿಲ್ಲ. ಈಗ ಬಿಗ್ ಬಿ ಸಲಹೆ ಮೇರೆಗೆ ಮದುವೆ ನಿಶ್ಚಿತಾರ್ಥ ನೆರವೇರಿಸಿಕೊಂಡಿದ್ದಾರೆ.

Kunal Kapoor Gets Engaged To Naina Bachchan

ಲಂಡನ್ ನಲ್ಲಿ ಬ್ಯಾಂಕರ್ ಆಗಿ ಕಾರ್ಯ ನಿರ್ವಹಿಸಿರುವ ಅನುಭವವಿರುವ ನೈನಾ ದೆಹಲಿಗೆ ಶಿಫ್ಟ್ ಆಗಿ ನಾಟಕ ರಂಗದಲ್ಲಿ ತನಗಿರುವ ಆಸಕ್ತಿ ಹಾಗೂ ಪ್ರತಿಭೆಯನ್ನು ಒರೆಗೆ ಹಚ್ಚಿದ್ದರು. ನಾಟಕ ರಂಗದ ಪ್ರತಿಭೆಯಾದ ಕುನಾಲ್ ಅವರು ನೈನಾರನ್ನು ಮೊದಲಿಗೆ ನೋಡಿದ್ದು ಪ್ರೀತಿಸಿದ್ದು ಎಲ್ಲವೂ ರಂಗ ಮಂಚದ ಮೇಲೆ.

ಅನುರಾಗ್ ಕಶ್ಯಪ್ ಅವರ ಲವ್ ಶುವ್ ತೇ ಚಿಕನ್ ಖುರಾನಾ ಚಿತ್ರಕ್ಕಾಗಿ ಲಂಡನ್ ಗೆ ಹೋಗಿದ್ದಾಗ ಮತ್ತೆ ನೈನಾ ಸಂಪರ್ಕ ಸಿಕ್ಕಿ ಇಬ್ಬರ ನಡುವೆ ಸಂಬಂಧ ಪಕ್ಕಾ ಆಗಿತ್ತು. ಬಚ್ಚನ್ ಕುಟುಂಬದ ಜತೆ ದೀಪಾವಳಿ ಹಬ್ಬ ಆಚರಿಸಿಕೊಂಡ ಕುನಾಲ್ ಚಿತ್ರಗಳು ಮಾಧ್ಯಮದವರ ಕಣ್ಣಿಗೂ ಬಿದ್ದಿತ್ತು.

ನಾನು ನೈನಾ ಬಹುದಿನಗಳಿಂದ ಒಟ್ಟಿಗೆ ಕಲೆತು ಬೆರೆತಿದ್ದೇವೆ. ಈಗ ಅಧಿಕೃತವಾಗಿ ನಿಶ್ಚಿತಾರ್ಥ ನೆರವೇರಿದೆ. ಎರಡೂ ಕುಟುಂಬ ಇದರಿಂದ ಸಂತೋಷವಾಗಿದ್ದಾರೆ ಎಂದು ಕುನಾಲ್ ಪ್ರತಿಕ್ರಿಯಿಸಿದ್ದಾರೆ.

English summary
Kunal Kapoor, the last eligible bachelor standing, is also taken away, that too by a member of prestigious Bachchan family. Kunal is engaged to Amitabh Bachchan's niece Naina Bachchan who also has been his long time sweetheart. In a private ceremony which is attended only by close relatives and friends, the couple got engaged.
Please Wait while comments are loading...