Don't Miss!
- Sports
ರಿಷಭ್ ಪಂತ್ ಆರೋಗ್ಯದಲ್ಲಿ ಭಾರೀ ಚೇತರಿಕೆ: ಈ ವಾರವೇ ಆಸ್ಪತ್ರೆಯಿಂದ ಡಿಶ್ಚಾರ್ಜ್ ಸಾಧ್ಯತೆ
- News
Mangaluru cooker blast: ಸುಟ್ಟಗಾಯಗಳಿಂದ ಚೇತರಿಸಿಕೊಂಡ ಆರೋಪಿಯನ್ನು ವಶಕ್ಕೆ ಪಡೆಯಲಿರುವ ಎನ್ಐಎ
- Finance
ಹೊಸ ಆಫರ್: ಗೃಹ ಸಾಲದ ಬಡ್ಡಿದರ ಇಳಿಸಿದ ಎಸ್ಬಿಐ!
- Lifestyle
Horoscope Today 30 Jan 2023: ಸೋಮವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Technology
ಬಜೆಟ್ ಬೆಲೆಯಲ್ಲಿ ಈ ಸ್ಮಾರ್ಟ್ಫೋನ್ಗಳು ಬೆಸ್ಟ್ ಎನಿಸಿಲಿವೆ! ಜಬರ್ದಸ್ತ್ ಫೀಚರ್ಸ್!
- Automobiles
ಬೆಲೆ ಏರಿಕೆ ಪಡೆದುಕೊಂಡ ಪರ್ಫಾಮೆನ್ಸ್ ಕಾರು ಪ್ರಿಯರ ಮೆಚ್ಚಿನ ಹ್ಯುಂಡೈ ಐ20 ಎನ್ ಲೈನ್
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಬ್ರೇಕಪ್ ಬಳಿಕ ಲಲಿತ್ ಮೋದಿ ಜೊತೆ ಸುಶ್ಮಿತಾ ಸೇನ್ ಡೇಟಿಂಗ್: ಮದುವೆ ಬಗ್ಗೆ ಹೇಳಿದ್ದೇನು?
ಮಾಜಿ ಭುವನ ಸುಂದರಿ ಹಾಗೂ ಬಾಲಿವುಡ್ ನಟಿ ಸುಶ್ಮಿತಾ ಸೇನ್ ಇತ್ತೀಚೆಗೆ ಸುದ್ದಿಯಲ್ಲಿದ್ದರು. ಬಹುದಿನದ ಗೆಳೆಯನೊಂದಿಗೆ ಸುಶ್ಮಿತಾ ಸೇನ್ ಬ್ರೇಕಪ್ ಮಾಡಿಕೊಂಡಿದ್ದರು. ಇದೇ ವಿಚಾರವಾಗಿ ಇತ್ತೀಚೆಗೆ ಸುಶ್ಮಿತಾ ಸೇನ್ ಮುಕ್ತವಾಗಿ ಮಾತಾಡಿದ್ದರು.
ಈಗ ನಟಿ ಸುಶ್ಮಿತಾ ಸೇನ್ ಐಪಿಎಲ್ ಮೊದಲ ಆವೃತ್ತಿಯ ಚೇರ್ಮನ್ ಲಲಿತ್ ಮೋದಿ ಜೊತೆ ಡೇಟಿಂಗ್ ಮಾಡುತ್ತಿರುವ ಸುದ್ದಿ ಹೊರಬಿದ್ದಿದೆ. ಮೊದಲು ಲಲಿತ್ ಮೋದಿ ತನ್ನ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಸುಶ್ಮಿತಾ ಸೇನ್ ತನ್ನ 'ಬೆಟರ್ ಹಾಫ್' ಎಂದು ಬರೆದುಕೊಂಡಿದ್ದಲ್ಲದೆ ಅವರ ಫೋಟೊಗಳನ್ನು ಶೇರ್ ಮಾಡಿಕೊಂಡಿದ್ದರು. ಈ ಟ್ವೀಟ್ ಬಳಿಕ ಸುಶ್ಮಿತಾ ಸೇನ್ ಹಾಗೂ ಲಲಿತ್ ಮೋದಿ ವಿವಾಹವಾಗಿದ್ದಾರೆ ಎಂದೇ ನಂಬಲಾಗಿತ್ತು.
ಸುಶ್ಮಿತಾ ಸೇನ್ ಬೆಟರ್ ಹಾಫ್ ಎಂದಿದ್ದ ಲಲಿತ್ ಮೋದಿ
ಲಲಿತ್ ಮೋದಿ ಟ್ವಿಟರ್ ಹಾಗೂ ಇನ್‌ಸ್ಟಾಗ್ರಾಂ ಸುಶ್ಮಿತಾ ಸೇನ್ ಬಗ್ಗೆ ಹೀಗೆ ಪ್ರಸ್ತಾಪ ಮಾಡಿದ್ದರು." ಕುಟುಂಬದೊಂದಿಗೆ ಮಾಲ್ಡೀವ್ಸ್ ಹಾಗೂ ಸರ್ದೀನಿಯಾ ಟೂರ್ ಮುಗಿಸಿ ಈಗತಾನೇ ಲಂಡನ್‌ಗೆ ಮರಳಿದ್ದೇನೆ. ನನ್ನ ಅರ್ಧಾಂಗಿ ಸುಶ್ಮಿತಾ ಸೇನ್. ಕೊನೆಗೂ ನನ್ನ ಬದುಕಿನಲ್ಲಿ ಹೊಸ ಅಧ್ಯಾಯ ಶುರುವಾಗಿದೆ." ಎಂದು ಲಲಿತ್ ಮೋದಿ ನಟಿ ಸುಶ್ಮಿತಾ ಸೇನ್‌ರೊಂದಿಗೆ ಫೋಟೊಗಳನ್ನು ಶೇರ್ ಮಾಡಿದ್ದರು.
ಈ ಟ್ವೀಟ್ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿ ಹರಿದಾಡಲು ಶುರುವಾಗಿತ್ತು. ಲಲಿತ್ ಮೋದಿ ಹಾಗೂ ಸುಶ್ಮಿತಾ ಸೇನ್ ಇಬ್ಬರೂ ಮದುವೆ ಆಗಿದ್ದಾರೆ ಎಂಬ ಸುದ್ದಿಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಲು ಆರಂಭ ಆಗಿತ್ತು. ಬಳಿಕ ಲಲಿತ್ ಮೋದಿ ಈ ಬಗ್ಗೆ ಕ್ಲಾರಿಟಿ ನೀಡಿದ್ದಾರೆ.
ಕೇವಲ ಡೇಟಿಂಗ್.. ಶೀಘ್ರದಲ್ಲಿಯೇ ಮದುವೆ
ಸೋಶಿಯಲ್ ಮೀಡಿಯಾದಲ್ಲಿ ಇಬ್ಬರ ಸುದ್ದಿ ಹಲ್‌ಚಲ್ ಎಬ್ಬಿಸುತ್ತಿದ್ದಂತೆ ಲಲಿತ್ ಮೋದಿ ಕ್ಲಾರಿಟಿಯನ್ನು ನೀಡಿದ್ದಾರೆ. " ಇದು ಕೇವಲ ಕ್ಲಾರಿಟಿ ನೀಡುವುದಕ್ಕಾಗಿ. ಇಬ್ಬರೂ ಡೇಟಿಂಗ್ ಮಾಡುತ್ತಿದ್ದೇವೆ. ಮದುವೆ ಕೂಡ ಶೀಘ್ರದಲ್ಲಿಯೇ ನೆರೆವೇರುತ್ತದೆ." ಎಂದು ಮೋದಿ ಮತ್ತೆ ಟ್ವೀಟ್ ಮಾಡಿ ಸಮಜಾಯಿಷಿ ನೀಡಿದ್ದಾರೆ.
Just back in london after a whirling global tour #maldives # sardinia with the families - not to mention my #betterhalf @sushmitasen47 - a new beginning a new life finally. Over the moon. 🥰😘😍😍🥰💕💞💖💘💓 pic.twitter.com/Vvks5afTfz
— Lalit Kumar Modi (@LalitKModi) July 14, 2022
ಲಲಿತ್ ಮೋದಿ ಡೇಟಿಂಗ್ ವಿಚಾರವನ್ನು ತಿಳಿಸಿದ್ದಷ್ಟೇ ಅಲ್ಲದೆ, ಸುಶ್ಮಿತಾ ಸೇನ್ ಜೊತೆಗಿನ ಹಳೆಯ ನೆನಪುಗಳನ್ನು ಫೋಟೊಗಳೊಂದಿಗೆ ಶೇರ್ ಮಾಡಿಕೊಂಡಿದ್ದಾರೆ. ಲಲಿತ್ ಮೋದಿ ಐಪಿಎಲ್ ಮೊದಲ ಆವೃತ್ತಿಯಲ್ಲಿ ಚೇರ್ಮನ್ ಆಗಿ ಕಾರ್ಯನಿರ್ವಹಿಸಿದ್ದರು. ಅವ್ಯವಹಾರ ಎಸಗಿದೆ ಆರೋಪದ ಮೇರೆಗೆ ಲಲಿತ್ ಮೋದಿ ಭಾರತದಿಂದ ಲಂಡನ್‌ಗೆ ಪಾಲಾಯನ ಮಾಡಿದ್ದರು. ಈಗ ಲಂಡನ್‌ನಲ್ಲಿಯೇ ಲಲಿತ್ ಮೋದಿ ನೆಲೆಸಿದ್ದಾರೆ.