For Quick Alerts
  ALLOW NOTIFICATIONS  
  For Daily Alerts

  ಲೈಫ್ ಬಾಯ್ ಜಾಹೀರಾತಿನ ಮುದ್ದು ಹುಡುಗಿ ಈಗ ಹೇಗಿದ್ದಾಳೆ ಗೊತ್ತೆ?

  |

  'ಬಂಟಿ ನಿನ್ನ ಸಾಬೂನು ಸ್ಲೋ ನಾ' ಈ ಡೈಲಾಗ್ ಬಹುತೇಕ ಎಲ್ಲರಿಗೂ ನೆನಪಿದ್ದೇ ಇರುತ್ತದೆ. ಲೈಫ್ ಬಾಯ್ ಸಾಬೂನಿನ ಜಾಹೀರಾತಿನಲ್ಲಿ ಮುದ್ದು ಮುಖದ ಹುಡುಗಿಯೊಬ್ಬಳು ಹೇಳುವ ಸಂಭಾಷಣೆ ಇದು.

  DK Shivakumar meets Shivarajkumar | Filmibeat Kannada

  ಬಂಟಿ ಕೈ ತೊಳೆಯುವ ಲೈಫ್ ಬಾಯ್‌ ನ ಈ ಜಾಹೀರಾತಂತೂ ಕೊರೊನಾ ಕಾಲದಲ್ಲಿ ಹೆಚ್ಚಾಗಿಯೇ ಹರಿದಾಡಿತು. ಮೀಮ್ ಆಗಿಯೂ ಸಾಮಾಜಿಕ ಜಾಲತಾಣದಲ್ಲಿ ನಗೆ ಉಕ್ಕಿಸಿತು.

  ಆ ಜಾಹಿರಾತಿನಲ್ಲಿ ಬಂಟಿಯನ್ನು ಅವನ ಸಾಬೂನಿನ ಕಾರಣಕ್ಕೆ ತಮಾಷೆ ಮಾಡುವ ಆ ಮುದ್ದು ಮುಖದ ಹುಡುಗಿ ನೆನಪಿದೆಯಲ್ಲವೆ? ಆಕೆ ಈಗ ಹೇಗಿದ್ದಾಳೆ ಗೊತ್ತಾ? ಏಳು ವರ್ಷದಲ್ಲಿ ಆ ಮುದ್ದು ಮುಖದ ಹುಡುಗಿ ಪೂರ್ಣ ಬದಲಾಗಿ ಹೋಗಿದ್ದಾಳೆ.

  ಆಕೆಯ ಹೆಸರು ಅವನೀತ್ ಕೌರ್

  ಆಕೆಯ ಹೆಸರು ಅವನೀತ್ ಕೌರ್

  ಲೈಫ್ ಬಾಯ್ ಸಾಬೂನಿನ ಜಾಹೀರಾತಿನಲ್ಲಿ ನಟಿಸಿದ್ದ ಆ ಪುಟ್ಟ ಬಾಲಕಿಯ ಹೆಸರು ಅವನೀತ್ ಕೌರ್. ಆ ಜಾಹೀರಾತು ಚಿತ್ರೀಕರಣವಾಗಿದ್ದು 2013 ರಲ್ಲಿ. ಏಳು ವರ್ಷದಲ್ಲಿ ಅವನೀತ್ ಕೌರ್ ಪೂರ್ಣ ಬದಲಾಗಿ ಬಿಟ್ಟಿದ್ದಾಳೆ.

  ಜಲಂಧರ್‌ ನಲ್ಲಿ ಹುಟ್ಟಿದ ಅವನೀತ್ ಕೌರ್

  ಜಲಂಧರ್‌ ನಲ್ಲಿ ಹುಟ್ಟಿದ ಅವನೀತ್ ಕೌರ್

  2002 ರಲ್ಲಿ ಜಲಂಧರ್‌ ನಲ್ಲಿ ಹುಟ್ಟಿದ ಅವನೀತ್ ಕೌರ್. ಎಳವೆಯಲ್ಲೇ ಡಾನ್ಸ್ ಇಂಡಿಯಾ ಡಾನ್ಸ್ ಲಿಟಲ್‌ ಮಾಸ್ಟರ್ಸ್ ನಲ್ಲಿ ಭಾಗವಹಿಸಿದ್ದ ಅವರು, 50 ಕ್ಕೂ ಹೆಚ್ಚು ಟಿವಿ ಜಾಹೀರಾತುಗಳಲ್ಲಿ ಅಭಿನಯಿಸಿದ್ದಾರೆ.

  ಹಲವು ಸಿನಿಮಾಗಳಲ್ಲಿ ನಟನೆ

  ಹಲವು ಸಿನಿಮಾಗಳಲ್ಲಿ ನಟನೆ

  ಸಿನಿಮಾಗಳಲ್ಲಿಯೂ ನಟಿಸಿರುವ ಕೌರ್, ಮರ್ದಾನಿ, ಬ್ರೂನಿ, ಖರೀಬ್ ಖರೀಬ್ ಸಿಂಗಲ್, ಬ್ರೂನಿ, ಮರ್ದಾನಿ 2 ಸಿನಿಮಾಗಳಲ್ಲಿ ನಟಿಸಿದ್ದಾರೆ. ಎರಡು ವೆಬ್ ಸೀರೀಸ್ ಹಾಗೂ ಹಲವು ಧಾರಾವಾಹಿಗಳಲ್ಲಿ ಸಹ ನಟಿಸಿದ್ದಾರೆ ಅವನೀತ್ ಕೌರ್.

  ಇನ್‌ಸ್ಟಾಗ್ರಾಂ ನಲ್ಲಿ ಸಖತ್ ಫೇಮಸ್ ಸೆಲೆಬ್ರಿಟಿ

  ಇನ್‌ಸ್ಟಾಗ್ರಾಂ ನಲ್ಲಿ ಸಖತ್ ಫೇಮಸ್ ಸೆಲೆಬ್ರಿಟಿ

  18 ವರ್ಷದ ಅವನೀತ್ ಕೌರ್ ಇನ್‌ಸ್ಟಾಗ್ರಾಂ ನಲ್ಲಿ ಸಖತ್ ಫೇಮಸ್ ಸೆಲೆಬ್ರಿಟಿ. ಇನ್‌ಸ್ಟಾಗ್ರಾಂ ನಲ್ಲಿ 1 ಕೋಟಿಗೂ ಹೆಚ್ಚು ಮಂದಿ ಫಾಲೋವರ್ಸ್ ಇದ್ದಾರೆ ಅವನೀತ್ ಕೌರ್‌ ಗೆ.

  ಈಕೆಯೇನಾ ಆ ಮುದ್ದು ಹುಡುಗಿ

  ಈಕೆಯೇನಾ ಆ ಮುದ್ದು ಹುಡುಗಿ

  ಅವನೀತ್ ಕೌರ್ ತಮ್ಮ ಹಾಟ್ ಚಿತ್ರಗಳನ್ನು ಇನ್‌ಸ್ಟಾಗ್ರಾಂ ನಲ್ಲಿ ಪೋಸ್ಟ್ ಮಾಡುತ್ತಿರುತ್ತಾರೆ. ಆ ಚಿತ್ರಗಳನ್ನು ನೋಡಿ 'ಲೈಫ್‌ ಬಾಯ್ ಜಾಹೀರಾತಿನ ಆ ಮುದ್ದು ಹುಡುಗಿ ಇವಳೇನಾ?' ಎಂಬ ಅನುಮಾನ ಬರದೇ ಇರದು.

  English summary
  Lifebuoy ad's cute girl Avaneet Kaur changed drastically now. Ad was shoot in 2013 now she is a Instagram celebrity.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X