Just In
Don't Miss!
- News
ನಮ್ಮನ್ನು ಬಿಟ್ಟು ಓಡುತ್ತಿವೆ 500 ನಕ್ಷತ್ರಗಳು, ವಿಜ್ಞಾನಿಗಳಿಂದ ರಹಸ್ಯ ರಿವೀಲ್..!
- Lifestyle
"ಗುರುವಾರದ ರಾಶಿಫಲ: ಮೇಷ-ಮೀನದವರೆಗಿನ ದಿನ ಭವಿಷ್ಯ"
- Sports
ಐಎಸ್ಎಲ್: ಬೆಂಗಳೂರಿಗೆ ಸೋಲಿನ ಆಘಾತ ನೀಡಿದ ಕೇರಳ ಬ್ಲಾಸ್ಟರ್ಸ್
- Education
WAPCOS Recruitment 2021: 11 ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Finance
ಇಪ್ಪತ್ತು ದಿನದಲ್ಲಿ 47 ಪರ್ಸೆಂಟ್ ನಷ್ಟು ಏರಿಕೆ ಕಂಡ ಟಾಟಾ ಮೋಟಾರ್ಸ್ ಷೇರು
- Automobiles
ಡ್ಯುಯಲ್ ಟೋನ್ ಬಣ್ಣದ ಆಯ್ಕೆಯೊಂದಿಗೆ ರೋಡ್ ಟೆಸ್ಟಿಂಗ್ ನಡೆಸಿದ ಸಿಟ್ರನ್ ಸಿ5 ಏರ್ಕ್ರಾಸ್ ಕಾರು
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಮದುವೆ ಆಗುವುದಕ್ಕೂ ಮೊದಲು ಗರ್ಭಿಣಿಯಾದ ಸೆಲೆಬ್ರಿಟಿಗಳು
ಸಿನಿಮಾ ರಂಗ ಅಂದ್ರೆನೇ ಹೀಗೆ...ಗಾಸಿಪ್, ಲವ್ವು, ಅಫೇರ್, ಸಕ್ಸಸ್, ಫೆಲ್ಯೂರ್, ಬ್ರೇಕ್ ಎಲ್ಲವೂ ಇದೆ. ಬಾಲಿವುಡ್ ಇಂಡಸ್ಟ್ರಿಯಲ್ಲಿ ಇದೆಲ್ಲವೂ ಸ್ವಲ್ಪ ಹೆಚ್ಚಾಗಿಯೇ ಕಾಣಬಹುದು. ತಾರಾ ಜೋಡಿಗಳು ವಿವಾಹ ಅಂತ ನೋಡುದ್ರು ಬಿಟೌನ್‌ನಲ್ಲಿ ಹೆಚ್ಚು ಮಂದಿ ಕಣ್ಣಿಗೆ ಬೀಳ್ತಾರೆ.
ಈ ವಿಷ್ಯ ಏನಪ್ಪಾ ಅಂದ್ರೆ ಮದುವೆ ಆಗುವುದಕ್ಕೂ ಮುಂಚೆನೇ ಕೆಲವು ಸೆಲೆಬ್ರಿಟಿಗಳು ಗರ್ಭಿಣಿಯಾಗಿದ್ದಾರೆ. ಪ್ರಗ್ನೆಂಟ್ ಆದ್ಮೇಲೆ ಮದುವೆಯಾಗಿರುವ ಅಥವಾ ಜೊತೆಯಾಗಿ ಜೀವನ ನಡೆಸುತ್ತಿರುವ ಕೆಲವು ಮಂದಿ ಇದ್ದಾರೆ. ವಿವಾಹವಾಗುವುದಕ್ಕೂ ಮುಂಚೆಯೇ ತಾಯಿಯಾದವರ ಪಟ್ಟಿಯಲ್ಲಿ ಬಾಲಿವುಡ್ ಸ್ಟಾರ್ಸ್ ಹೆಚ್ಚು. ಹಾಗಾದ್ರೆ, ಈ ಪಟ್ಟಿಯಲ್ಲಿ ಯಾರೆಲ್ಲಾ ಇದ್ದಾರೆ? ಮುಂದೆ ಓದಿ...
ಈ ವರ್ಷ ಅತಿ ಹೆಚ್ಚು ಟ್ರೋಲ್ ಆದ ಸಿನಿಮಾಗಳು ಯಾವುವು ಗೊತ್ತೆ!?

ನೇಹಾ ಕಕ್ಕರ್
ಬಾಲಿವುಡ್‌ನ ಜನಪ್ರಿಯ ಗಾಯಕಿ ನೇಹಾ ಕಕ್ಕರ್ ಇತ್ತೀಚಿಗಷ್ಟೆ ರೋಹನ್ ಪ್ರೀತ್ ಸಿಂಗ್ ಜೊತೆ ವೈವಾಹಿಕ ಜೀವನ ಆರಂಭಿಸಿದ್ದರು. ಮದುವೆಗೆ ಕೆಲವೇ ವಾರಗಳ ನಂತರ ತಾನು ಗರ್ಭಿಣಿ ಎಂದು ದೃಢಪಡಿಸಿದ್ದಾರೆ. ನೇಹಾ ಕಕ್ಕರ್ ಅವರ ಪ್ರಗ್ನೆನ್ಸಿ ವಿಚಾರ ಬಹಿರಂಗವಾಗುತ್ತಿದ್ದಂತೆ ಮದುವೆಗೂ ಮುಂಚೆ ಗರ್ಭ ಧರಿಸಿದ ಸೆಲೆಬ್ರಿಟಿಗಳ ಹೆಸರು ಚರ್ಚೆಯಾಗ್ತಿದೆ.

ನೀನಾ ಗುಪ್ತಾ
ಮದ್ವೆಗೆ ಮುಂಚೆ ಗರ್ಭಿಣಿಯಾದವರು ಎಂಬ ವಿಚಾರ ಚರ್ಚೆಯಾಗುತ್ತಿದ್ದಂತೆ ಮೊದಲು ಬರು ಹೆಸರು ನೀನಾ ಗುಪ್ತಾ. ಕ್ರಿಕೆಟರ್ ವಿವಿಯನ್ ರಿಚರ್ಡ್ಸ್ ಜೊತೆ ಡೇಟಿಂಗ್‌ನಲ್ಲಿದ್ದ ನೀನಾ ಗುಪ್ತಾ ಗರ್ಭಿಣಿಯಾಗಿದ್ದರು. ಆದ್ರೆ, ಮೊದಲ ಪತ್ನಿ ಜೊತೆಗೆ ಮುಂದುವರಿಯಲು ನಿರ್ಧರಿಸಿ ರಿಚರ್ಡ್ಸ್ ಮದುವೆಗೆ ನಿರಾಕರಿಸಿದ್ದರು. ಬಳಿಕ, ತನ್ನ ಮಗುವನ್ನು ತಾನೇ ಬೆಳೆಸುವ ನೀನಾ ನಿರ್ಧಾರಕ್ಕೆ ಬಂದರು.
2020: ಈ ವರ್ಷ ಅತಿ ಹೆಚ್ಚು ಹಣ ಗಳಿಸಿದ ನಟ-ನಟಿಯರು

ಕಲ್ಕಿ ಕೋಚ್ಲಿನ್
ನಟಿ ಕಲ್ಕಿ ಕೋಚ್ಲಿನ್ ತನ್ನ ಪ್ರಗ್ನೆನ್ಸಿ ಸುದ್ದಿಯನ್ನು ಘೋಷಿಸಿದಾಗ ಗೆಳೆಯ ಗೈ ಹರ್ಷ್‌ಬರ್ಗ್ ಜೊತೆ ಸಂಬಂಧದಲ್ಲಿದ್ದಳು. ಗರ್ಭಿಣಿ ಎಂದು ತಿಳಿದ ತಕ್ಷಣ ತನ್ನ ಪ್ರಗ್ನೆನ್ಸಿ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು.

ನೇಹಾ ಧೂಪಿಯಾ
ಗೆಳೆಯ ಅಂಗದ್ ಬೇಡಿ ಜೊತೆ ವಿವಾಹವಾದ ಸಂದರ್ಭದಲ್ಲಿ ನಟಿ ನೇಹಾ ಧೂಪಿಯಾ ಮೂರು ತಿಂಗಳು ಗರ್ಭಿಣಿ ಎಂದು ಹೇಳಲಾಗಿದೆ. ಈ ದಂಪತಿಗೆ ಈಗ ಮಂಚ್ಕಿನ್ ಮೆಹರ್ ಎಂಬ ಪುಟ್ಟ ಮಗು ಇದೆ.

ಕೊಂಕನಾ ಸೇನ್ ಶರ್ಮಾ
ಕೊಂಕನಾ ಸೇನ್ ಶರ್ಮಾ ಸಹ ರಣವೀರ್ ಶೋರೆ ಅವರನ್ನು ಮದುವೆಯಾದ ಕೆಲವು ತಿಂಗಳ ನಂತರ ತನ್ನ ಗರ್ಭಧಾರಣೆಯನ್ನು ಘೋಷಿಸಿದರು. ಮದುವೆಗೂ ಮುಂಚೆಯೇ ಗರ್ಭಿಣಿಯಾಗಿದ್ದ ಕೊಂಕನಾ ನಂತರ ಮಗುವಿಗೆ ಜನ್ಮ ನೀಡಿದರು ಎಂದು ವರದಿಯಾಗಿದೆ.

ನತಾಶಾ ಸ್ಟಾಂಕೋವಿಕ್
ಕ್ರಿಕೆಟರ್ ಹಾರ್ದಿಕ್ ಪಾಂಡ್ಯ ಜೊತೆ ವರ್ಷದ ಆರಂಭದಲ್ಲಿ ನಟಿ ನತಾಶಾ ಸ್ಟಾಂಕೋವಿಕ್ ನಿಶ್ಚಿತಾರ್ಥ ಮಾಡಿಕೊಂಡರು. ಆ ಬಳಿಕ ಜುಲೈ ತಿಂಗಳಲ್ಲಿ ಮಗು ಜನಿಸಿತು. ಮದುವೆಗೆ ಮುನ್ನವೇ ನತಾಶಾ ಗರ್ಭ ಧರಿಸಿದ್ದರು ಎಂದು ನಂಬಲಾಗಿದೆ.

ಅಮಿ ಜಾಕ್ಸನ್
ಬ್ರಿಟಿಷ್ ಬ್ಯೂಟಿ ಆಮಿ ಜಾಕ್ಸನ್ ಜಾರ್ಜ್ ಪನಾಯೊಟೊಗೆ ನಿಶ್ಚಿತಾರ್ಥ ಮಾಡಿಕೊಂಡರು. ಆ ನಂತರ ಗರ್ಭಿಣಿ ಎಂದು ಘೋಷಿಸಿದರು. ಈಗ ಮುಗುವಿಗೆ ಜನ್ಮ ಸಹ ನೀಡಿದ್ದಾರೆ. ಅಧಿಕೃತವಾಗಿ ಮದುವೆಯಾಗಲು ನಿರ್ಧರಿಸಿದ್ದಾರೆ.

ಅಮೃತಾ ಆರೋರ
ಶಕೀಲ್ ಆರೋರ ಅವರೊಂದಿಗೆ ಅಮೃತಾ ಆರೋರ ಮದುವೆಯಾದಾಗ ಎಲ್ಲರಿಗೂ ಅಚ್ಚರಿ ತಂದಿತ್ತು. ಯಾವುದೇ ಸುಳಿವು ನೀಡದೆ ದಿಢೀರ್ ಅಂತ ಮದುವೆ ಘೋಷಿಸಿದರು. ನಂತರ ತಿಳಿದ್ದೇನಂದರೆ ಮದುವೆಗೆ ಮುಂಚೆ ಆಕೆ ಗರ್ಭಿಣಿಯಾಗಿದ್ದರು ಎಂದು.

ಶ್ರೀದೇವಿ
ಬಾಲಿವುಡ್ ಎವರ್‌ಗ್ರೀನ್ ನಟಿ ಶ್ರೀದೇವಿ ಸಹ ನಿರ್ಮಾಪಕ ಬೋನಿ ಕಪೂರ್ ಅವರನ್ನು ವಿವಾದವಾದ ಸಂದರ್ಭದಲ್ಲಿ ಏಳು ತಿಂಗಳ ಗರ್ಭಿಣಿ. ಪ್ರಗ್ನೆನ್ಸಿ ಘೋಷಿಸಿದ ನಂತರವೇ ವಿವಾಹವಾಗಿದ್ದರು.