For Quick Alerts
  ALLOW NOTIFICATIONS  
  For Daily Alerts

  ಮುಂಬೈ ಬಿಟ್ಟು ಹೋದ ಮಗ: ನಟಿ ಮಲೈಕಾ ಆರೋರ ಭಾವುಕ ಪೋಸ್ಟ್

  |

  ಬಾಲಿವುಡ್ ನಟಿ ಮಲೈಕಾ ಆರೋರ ತನ್ನ ಮಗನ ಕುರಿತು ಇನ್ಸ್ಟಾಗ್ರಾಂನಲ್ಲಿ ಭಾವನಾತ್ಮಕ ಪೋಸ್ಟ್ ಹಾಕುವ ಮೂಲಕ ಚರ್ಚೆಯಲ್ಲಿದ್ದಾರೆ. ಮಗ ಅರ್ಹಾನ್ ಹೆಚ್ಚಿನ ಶಿಕ್ಷಣಕ್ಕಾಗಿ ಮುಂಬೈ ನಗರ ಬಿಟ್ಟು ಹೋಗುತ್ತಿರುವ ಬಗ್ಗೆ ಭಾವುಕರಾಗಿರುವ ಮಲೈಕಾ ಬೇಸರದಿಂದ ಪೋಸ್ಟ್ ಹಾಕಿದ್ದಾರೆ.

  ತನ್ನ ಮಗ ಹೊಸ ಜರ್ನಿ ಆರಂಭಿಸಿದ್ದಾನೆ, ಅವನಿಗೆ ಒಳ್ಳೆಯದಾಗಲಿ ಎಂದು ಪೋಸ್ಟ್ ಹಾಕಿರುವ ಮಲೈಕಾ, ಅರ್ಹಾನ್ ಹೊಸ ಜರ್ನಿಯ ಬಗ್ಗೆ ಸ್ಪಷ್ಟವಾದ ಮಾಹಿತಿ ಕೊಟ್ಟಿಲ್ಲ. ಇದು ಸಹಜವಾಗಿ ನೆಟ್ಟಿಗರಲ್ಲಿ ಕುತೂಹಲವಾಗಿ ಉಳಿದುಕೊಂಡಿದೆ.

  ನನಗೆ ಮಗಳು ಬೇಕು: ಹೆಣ್ಣು ಮಗು ಪಡೆಯುವ ಬಯಕೆ ವ್ಯಕ್ತಪಡಿಸಿದ ಅರ್ಜುನ್ ಗೆಳತಿ ಮಲೈಕಾನನಗೆ ಮಗಳು ಬೇಕು: ಹೆಣ್ಣು ಮಗು ಪಡೆಯುವ ಬಯಕೆ ವ್ಯಕ್ತಪಡಿಸಿದ ಅರ್ಜುನ್ ಗೆಳತಿ ಮಲೈಕಾ

  "ನಾವಿಬ್ಬರೂ ಹೊಸ ಪ್ರಯಾಣಕ್ಕೆ ಹೊರಟಾಗ, ಒಬ್ಬರಲ್ಲಿ ಆತಂಕ, ಭಯ, ಉತ್ಸಾಹ, ದೂರ, ಹೊಸ ಅನುಭವಗಳು ತುಂಬಿವೆ ... ನಿನ್ನ ಬಗ್ಗೆ ನಾನು ಸೂಪರ್ ಡೂಪರ್ ಆಗಿ ಹೆಮ್ಮೆ ಇದೆ. ಇದು ನೀನು ಹಾರಾಡುವ ಸಮಯ. ನಿನ್ನ ಕನಸುಗಳಲ್ಲಿ ಜೀವಿಸಲು ರೆಕ್ಕೆಗಳನ್ನು ಬಿಚ್ಚಿ ಹಾರಾಡು ....ಮಿಸ್ ಯೂ ಅರ್ಹಾನ್'' ಎಂದು ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

  12ನೇ ತರಗತಿ ಮುಗಿಸಿದ ಬಳಿಕ ಮಗ ಅರ್ಹಾನ್ ಒಂದು ವರ್ಷ ಅಂತರ ಕಾಯ್ದುಕೊಂಡಿದ್ದಾನೆ ಎಂದು ವರ್ಷದ ಆರಂಭದಲ್ಲಿ ಮಲೈಕಾ ಬಹಿರಂಗಪಡಿಸಿದ್ದರು. ''ಅವನು ತನ್ನ ಸಮಯವನ್ನು ಚೆನ್ನಾಗಿ ಬಳಸಿಕೊಳ್ಳಬೇಕು ಎಂದು ನಾನು ಸಲಹೆ ಕೊಟ್ಟಿರುವೆ. ತನ್ನನ್ನು ತಾನು ವಿವಿಧ ವಿಷಯಗಳಲ್ಲಿ ತೊಡಗಿಸಿಕೊಳ್ಳಬೇಕು, ಹೊಸದನ್ನು ಕಲಿಯಬೇಕು ಮತ್ತು ಸಮಯವನ್ನು ವ್ಯರ್ಥಮಾಡುತ್ತಾ ಕುಳಿತುಕೊಳ್ಳಬಾರದು." ಎಂದು ಹೇಳಿರುವುದಾಗಿ ಮಾಹಿತಿ ನೀಡಿದ್ದರು.

  ''ಅರ್ಹಾನ್ ಆನ್‌ಲೈನ್ ತರಗತಿಗೆ ಸೇರಿಕೊಂಡಿದ್ದಾನೆ. ದೈಹಿಕ ದೃಢತೆ ಬಗ್ಗೆ ಹೆಚ್ಚು ಕಾಳಜಿ ತೋರುತ್ತಿದ್ದಾನೆ. ಇದಕ್ಕೂ ಮುಂಚೆ ಅವನು ಹೀಗೆ ಇರಲಿಲ್ಲ. ಆದ್ರೀಗ, ಊಟದ ವಿಚಾರ ಇರಬಹುದು ಅಥವಾ ಇನ್ಯಾವುದೇ ಇರಬಹುದು ಶಿಸ್ತಾಗಿ ನಡೆದುಕೊಳ್ಳುತ್ತಿರುವುದನ್ನು ನಾನು ಗಮನಿಸಿದ್ದೇನೆ. ಸದಾ ವರ್ಕೌಟ್ ಮಾಡ್ತಾನೆ. ಸಾಂಕ್ರಾಮಿಕ ರೋಗಗಳು ಬಂದಾಗ ಅದರ ವಿರುದ್ಧ ಹೋರಾಡಲು ಮಕ್ಕಳು ಆರೋಗ್ಯಕರವಾಗಿಬೇಕು ಎಂದು ನಾನು ಹೇಳಲು ಬಯಸುತ್ತೇನೆ'' ಎಂದು ಈ ಹಿಂದೆ ಹೇಳಿದ್ದರು.

  ಗೆಳತಿ ಮಲೈಕಾ ಮನೆ ಸಮೀಪದಲ್ಲೇ ವಿಲ್ಲಾ ಖರೀದಿಸಿದ ಅರ್ಜುನ್ ಕಪೂರ್; ಬೆಲೆ ಎಷ್ಟು?ಗೆಳತಿ ಮಲೈಕಾ ಮನೆ ಸಮೀಪದಲ್ಲೇ ವಿಲ್ಲಾ ಖರೀದಿಸಿದ ಅರ್ಜುನ್ ಕಪೂರ್; ಬೆಲೆ ಎಷ್ಟು?

  ಇತ್ತೀಚಿಗಷ್ಟೆ ಮಲೈಕಾ ಆರೋರ, ಮಾಜಿ ಪತಿ ಅರ್ಬಾಜ್ ಖಾನ್ ಹಾಗು ಮಗ ಅರ್ಹಾನ್ ಸೇರಿದಂತೆ ಕುಟುಂಬ ಸದಸ್ಯರು ಡಿನ್ನರ್‌ಗಾಗಿ ರೆಸ್ಟೋರೆಂಟ್‌ನಲ್ಲಿ ಸೇರಿದ್ದರು. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ಮಾಜಿ ಪತ್ನಿ ಜೊತೆ ರೆಸ್ಟೋರೆಂಟ್‌ನಲ್ಲಿ ಸಲ್ಮಾನ್ ಖಾನ್ ಸಹೋದರ ಕಾಣಿಸಿಕೊಂಡ ನಂತರ ಅವರಿಬ್ಬರು ಮತ್ತೆ ಒಂದಾಗುತ್ತಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದರು. ಮಗನಿಗಾಗಿ ಮಾಜಿ ದಂಪತಿಗಳು ಮತ್ತೆ ಒಟ್ಟಿಗೆ ಜೀವನ ನಡೆಸಲು ನಿರ್ಧರಿಸಿರಬಹುದು ಎಂದು ಚರ್ಚೆಗಳು ನಡೆದವು. ಆದರೆ, ಆ ಗೆಟ್‌ ಟು ಗೆದರ್ ಮಗನ ಕಾರಣಕ್ಕಾಗಿ ಎನ್ನುವುದು ತಡವಾಗಿ ತಿಳಿದಿದೆ.

  Malaika Arora pen an emotional note for her son Arhaan

  ಮಲೈಕಾ ಹಾಗೂ ಅರ್ಬಾಜ್ ದಂಪತಿಯ ಮಗ ಅರ್ಹಾನ್ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ಹೋಗುತ್ತಿದ್ದು, ಅದಕ್ಕೂ ಮುಂಚೆ ಒಮ್ಮೆ ಕುಟುಂಬ ಸದಸ್ಯರೆಲ್ಲ ಸೇರಿ ಮಗನಿಗೆ ಬೀಳ್ಕೊಡುಗೆ ನೀಡಿದ್ದಾರೆ ಎಂದು ವರದಿಯಾಗಿದೆ.

  ಮಲೈಕಾ ಆರೋರ ಮತ್ತು ಅರ್ಬಾಜ್ 1998ರಲ್ಲಿ ವಿವಾಹವಾಗಿದ್ದರು. 2002ರಲ್ಲಿ ಈ ದಂಪತಿಗೆ ಅರ್ಹಾನ್ ಹುಟ್ಟಿದ. 19 ವರ್ಷಗಳ ದಾಂಪತ್ಯವನ್ನು 2017ರಲ್ಲಿ ಮುರಿದುಕೊಂಡರು. ಡಿವೋರ್ಸ್ ಬಳಿಕ ಮಗನನ್ನು ತಾಯಿಯ ಜೊತೆ ಹೋಗಲು ಸೂಚಿಸಿದ ಕೋರ್ಟ್, ಆಗಾಗ ಮಗನನ್ನು ನೋಡಲು ಅನುಮತಿ ನೀಡಿತ್ತು.

  ಮತ್ತೊಂದೆಡೆ ಅರ್ಬಾಜ್ ಖಾನ್‌ನಿಂದ ದೂರವಾದ ಬಳಿಕ ಮಲೈಕಾ ಆರೋರ, ನಟ ಅರ್ಜುನ್ ಕಪೂರ್ ಜೊತೆ ಲೀವ್-ಇನ್-ರಿಲೇಶನ್‌ಷಿಪ್‌ನಲ್ಲಿದ್ದಾರೆ ಎಂದು ಹೇಳಲಾಗಿದೆ.

  English summary
  Bollywood actress Malaika Arora took to social media to pen an emotional note for her son Arhaan, who is set to embark on his new journey.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X