twitter
    For Quick Alerts
    ALLOW NOTIFICATIONS  
    For Daily Alerts

    ಶಾರುಖ್ ಖಾನ್ ಮನೆಗೆ ಬಾಂಬ್ ಬೆದರಿಕೆ ಕರೆ ಮಾಡಿದ್ದವನ ಬಂಧನ

    |

    ಶಾರುಖ್ ಖಾನ್‌ರ ಮುಂಬೈನ ಐಷಾರಾಮಿ ಮನೆ 'ಮನ್ನತ್‌' ಬಳಿ ಬಾಂಬ್ ಇರುವುದಾಗಿ ಬೆದರಿಕೆ ಕರೆಯೊಂದು ಗುರುವಾರ ಮುಂಬೈ ಪೊಲೀಸ್‌ಗೆ ಬಂದಿತ್ತು. ತನಿಖೆ ಬಳಿಕ ಇದೊಂದು ಸುಳ್ಳು ಕರೆ ಎಂಬುದು ಗೊತ್ತಾಗಿತ್ತು.

    ಶಾರುಖ್ ಖಾನ್ ನಿವಾಸದ ಬಳಿ ಬಾಂಬ್ ಇಟ್ಟಿರುವುದಾಗಿ ಸುಳ್ಳು ಕರೆ ಮಾಡಿದ ವ್ಯಕ್ತಿಯನ್ನು ಮಧ್ಯ ಪ್ರದೇಶ ರಾಜ್ಯದಲ್ಲಿ ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ ಇಂದು ಮುಂಬೈ ಪೊಲೀಸರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

    ಗುರುವಾರ ಸಂಜೆ 6:22 ರ ವೇಳೆಗೆ ಮುಂಬೈ ಪೊಲೀಸರಿಗೆ ಕರೆಯೊಂದು ಬಂದಿದ್ದು, ಶಾರುಖ್ ಖಾನ್ ಮನೆಯ ಬಳಿ ಬಾಂಬ್ ಇಟ್ಟಿರುವುದಾಗಿ ಕರೆ ಮಾಡಿದ ವ್ಯಕ್ತಿ ತಿಳಿಸಿದ್ದ. ಕರೆ ಬಂದ ಕೂಡಲೇ ಶಾರುಖ್ ಖಾನ್ ನಿವಾಸ ಹಾಗೂ ಅದರ ಸುತ್ತ ಮುತ್ತ ಶ್ವಾನ ದಳ ಹಾಗೂ ಬಾಂಬ್ ನಿಷ್ಕ್ರಿಯ ದಳ ಪರಿಶೀಲನೆ ನಡೆಸಿತು. ಛತ್ರಪತಿ ಶಿವಾಜಿ ಟರ್ಮಿನಲ್‌ನಲ್ಲಿಯೂ ಪರಿಶೀಲನೆ ನಡೆಸಲಾಯಿತು. ಆದರೆ ಯಾವುದೇ ಅನುಮಾನಸ್ಪದ ವಸ್ತುಗಳು ಪತ್ತೆಯಾಗಲಿಲ್ಲ.

    Man Arrested Who Claims Bomb Planted Near Shah Rukh Khans House
    ತನ್ನನ್ನು ತಾನು ಜಿತೇಶ್ ಠಾಕೂರ್ ಎಂದು ಪರಿಚಯಿಸಿಕೊಂಡಿದ್ದ ವ್ಯಕ್ತಿಯೊಬ್ಬ ಗುರುವಾರ ಸಂಜೆ ಕರೆ ಮಾಡಿ, ಮುಂಬೈಗೆ ಬಾಂಬ್ ಬೆದರಿಕೆ ಇರುವುದಾಗಿ ಹೇಳಿದ್ದ. ಛತ್ರಪತಿ ಶಿವಾಜಿ ಟರ್ಮಿನಲ್, ಶಾರುಖ್ ಖಾನ್ ಮನೆ, ಖಾರ್‌ಗರ್ ಬಳಿಯ ಗುರುದ್ವಾರ ಹಾಗೂ ಇತರ ಕಡೆಗಳಲ್ಲಿ ಬಾಂಬ್ ದಾಳಿ ಆಗಲಿದೆಯೆಂದು ಹೇಳಿದ್ದ. ತಾನು ಸೈನ್ಯದಲ್ಲಿರುವುದಾಗಿಯೂ ತನಗೆ ಮಾಹಿತಿ ಮೊದಲೇ ಗೊತ್ತಾಗಿದೆಯೆಂದು ಆತ ಹೇಳಿದ್ದ.

    ಕರೆ ಮಾಡಿದಾತ ಮಧ್ಯಪ್ರದೇಶದ ಜಬಲ್‌ಪುರದಿಂದ ಕರೆ ಮಾಡಿದ್ದ. ಅಲ್ಲಿನ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿ ಆತನನ್ನು ಬಂಧಿಸಲಾಗಿದೆ. ಇದೀಗ ಮುಂಬೈ ರೈಲ್ವೆ ಪೊಲೀಸ್ ಹಾಗೂ ಮುಂಬೈ ಪೊಲೀಸ್‌ ಇಲಾಖೆಯ ಕೆಲ ಸಿಬ್ಬಂದಿ ಜೀನತ್ ಠಾಕೂರ್ ಅನ್ನು ತಮ್ಮ ವಶಕ್ಕೆ ಪಡೆದು ಮುಂಬೈಗೆ ಕರೆತರಲು ಮಧ್ಯ ಪ್ರದೇಶಕ್ಕೆ ಹೋಗಿದ್ದಾರೆ.

    ಶಾರುಖ್ ಖಾನ್ ನಿವಾಸಕ್ಕೆ ಹೀಗೆ ಬೆದರಿಕೆ ಕರೆಗಳು ಬರುವುದು ಮಾಮೂಲು. ಈ ಹಿಂದೆಯೂ ಹಲವು ಬಾರಿ ಶಾರುಖ್ ಖಾನ್ ನಿವಾಸಕ್ಕೆ ಬಾಂಬ್ ಬೆದರಿಕೆ ಕರೆಗಳು ಬಂದಿವೆ. ಮುಂಬೈನಲ್ಲಿರುವ ಐಶಾರಾಮಿ ಹಾಗೂ ದುಬಾರಿ ಮನೆಗಳಲ್ಲಿ ಶಾರುಖ್ ಒಡೆತನದ 'ಮನ್ನತ್' ಸಹ ಒಂದು. ಶಾರುಖ್ ಖಾನ್‌ರ 'ಮನ್ನತ್' ಮನೆಯನ್ನು ನೋಡಲು ಪ್ರತಿದಿನ ಹಲವು ಮಂದಿ ಬರುತ್ತಾರೆ. ಶಾರುಖ್ ಹುಟ್ಟುಹಬ್ಬದಂದು 'ಮನ್ನತ್' ಮುಂದೆ ಜನ ಜಾತ್ರೆಯೇ ನಡೆದಿರುತ್ತದೆ. ಶಾರುಖ್‌ ಖಾನ್‌ರ ಮನೆಯ ಪ್ರಸ್ತುತ ಮೌಲ್ಯ 500 ಕೋಟಿಗೂ ಹೆಚ್ಚು ಎಂದು ಅಂದಾಜಿಸಲಾಗಿದೆ. ಮನ್ನತ್ ಕಾಂಪೌಂಡ್‌ನ ಒಳಗೆ ಶಾರುಖ್ ಖಾನ್‌ರ ಮನೆ, ಕಚೇರಿ ಎರಡೂ ಇದೆ. ಆಟದ ಮೈದಾನ, ಜಿಮ್, ದೊಡ್ಡ ಪಾರ್ಕಿಂಗ್ ಸ್ಥಳ, ಈಜುಕೊಳ ಇನ್ನೂ ಹಲವು ಸವಲತ್ತುಗಳು 'ಮನ್ನತ್'ನಲ್ಲಿವೆ.

    ತಮಿಳು ಸಿನಿಮಾ ಉದ್ಯಮದ ಸ್ಟಾರ್ ನಟರಿಗೂ ಈ ಹುಸಿ ಬಾಂಬ್ ಬೆದರಿಕೆ ಆಗಾಗ್ಗೆ ಕಾಡುತ್ತಿರುತ್ತದೆ. ರಜನೀಕಾಂತ್, ವಿಜಯ್, ಸೂರ್ಯ, ಧನುಶ್, ವಿಕ್ರಂ ಇವರಿಗೆಲ್ಲ ಹಲವು ಬಾರಿ ಬಾಂಬ್ ಬೆದರಿಕೆ ಕರೆಗಳು ಬಂದಿವೆ. ತಮಿಳಿನ ಜನಪ್ರಿಯ ಸಿನಿಮಾ ನಿರ್ದೇಶಕ ಮಣಿರತ್ನಂ ಅವರ ಚೆನ್ನೈ ನಿವಾಸದ ಮೇಲೆ ಒಮ್ಮೆ ನಿಜವಾಗಿಯೂ ಬಾಂಬ್ ದಾಳಿ ನಡೆದಿತ್ತು. ಹಾಗಾಗಿ ಎಲ್ಲ ಬೆದರಿಕೆ ಕರೆಗಳನ್ನು ತಮಿಳುನಾಡು ಪೊಲೀಸರು ಗಂಭೀರವಾಗಿ ಪರಿಗಣಿಸಿ ತಪ್ಪದೆ ತಪಾಸಣೆ ಮತ್ತು ತನಿಖೆ ಮಾಡುತ್ತಾರೆ.

    English summary
    A Man arrested in Madhya Pradesh who claims a bomb is placed near Shah Rukh Khan's house.
    Tuesday, January 11, 2022, 17:06
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X