»   » ಸೀರೆ ಅಂದ್ರೆ ಮೂಗು ಮುರಿಯುವವರು ಸ್ವಲ್ಪ ಮಂದಿರಾ ಬೇಡಿ ಕಡೆ ನೋಡಿ...

ಸೀರೆ ಅಂದ್ರೆ ಮೂಗು ಮುರಿಯುವವರು ಸ್ವಲ್ಪ ಮಂದಿರಾ ಬೇಡಿ ಕಡೆ ನೋಡಿ...

Posted By:
Subscribe to Filmibeat Kannada

ಇಂದಿನ ಪೀಳಿಗೆಯ ಹೆಣ್ಮಕ್ಕಳಿಗೆ ''ಸೀರೆ ಅಂದ್ರೆ ಇಷ್ಟನಾ.?'' ಅಂತ ಕೇಳುವುದಕ್ಕಿಂತ, ''ಸೀರೆಯುಡಲು ಬರುತ್ತಾ.?'' ಎಂಬ ಪ್ರಶ್ನೆ ಕೇಳಬೇಕು. ಯಾಕಂದ್ರೆ, ಈಗಿನ ಯುವತಿಯರಿಗೆ ಜೀನ್ಸ್ ಪ್ಯಾಂಟ್, ಸಲ್ವಾರ್ ಅಂದ್ರೇನೇ ಹೆಚ್ಚು ಖುಷಿ. ಕಾರಣ ಏನಪ್ಪಾ ಅಂದ್ರೆ, 'ಕಮ್ಫರ್ಟ್'.

ಸೀರೆಯುಟ್ಟರೆ ಮೇನ್ಟೇನ್ ಮಾಡೋದೇ ಕಷ್ಟ ಅಂತ ಎಷ್ಟೋ ಜನ ಸೀರೆ ನೋಡಿದ ಕೂಡಲೆ ಮೂಗು ಮುರಿಯುತ್ತಾರೆ. ಇದಕ್ಕೆ ನೋಡಿ, ಹಲವರಿಗೆ ಸೀರೆ ಅಂತ ಹೇಳಿದ ಕೂಡಲೆ ಅಲರ್ಜಿ.

ಆದ್ರೆ, ಇಲ್ನೋಡಿ... ಖ್ಯಾತ ಮಾಡೆಲ್, ನಟಿ, ಟಿವಿ ಪ್ರೆಸೆಂಟರ್ ಮಂದಿರಾ ಬೇಡಿ ಸೀರೆಯುಟ್ಟು ಪುಶ್ ಅಪ್ ಮಾಡಿದ್ದಾರೆ. ಪುಶ್ ಅಪ್ ಮಾಡುವುದು ಎಲ್ಲ ಹೆಣ್ಮಕ್ಕಳಿಗೆ ಸುಲಭ ಅಲ್ಲ. ಅದರಲ್ಲೂ ಸೀರೆಯುಟ್ಟು ಪುಶ್ ಅಪ್ ಮಾಡಿ ಅಂದ್ರೆ ಹೇಗಾಗಬೇಡ..?

Mandira Bedi doing pushup's in Saree

ನಿನ್ನೆ ನಡೆದ ಕಾರ್ಯಕ್ರಮವೊಂದರಲ್ಲಿ ಮಂದಿರಾ ಬೇಡಿಗೆ ಎದುರಾದ ಪರಿಸ್ಥಿತಿ ಇದು. ಸೀರೆಯುಟ್ಟಿದ್ದರೂ, ಇತರೆ ಹೆಣ್ಮಕ್ಕಳಂತೆ ಪರದಾಡದೆ ಪುಶ್ ಅಪ್ ಮಾಡಿ ಎಲ್ಲರಿಂದ ಚಪ್ಪಾಳೆ ಗಿಟ್ಟಿಸಿಕೊಂಡಿದ್ದಾರೆ ಮಂದಿರಾ ಬೇಡಿ.

ಸೀರೆಯುಟ್ಟರೆ ನಡೆದಾಡಲು ಕಷ್ಟ ಪಡುವ ಹೆಣ್ಮಕ್ಳು ಒಮ್ಮೆ ಮಂದಿರಾ ಬೇಡಿ ಕಡೆ ನೋಡಿ..

English summary
Actress, Model, TV Presenter Mandira Bedi does push-up's in Saree.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada