For Quick Alerts
  ALLOW NOTIFICATIONS  
  For Daily Alerts

  ಪತಿ ರಾಜ್ ಕೌಶಲ್ ನಿಧನದ ಬಳಿಕ ಮೊದಲ ಪೋಸ್ಟ್ ಹಂಚಿಕೊಂಡ ಮಂದಿರಾ ಬೇಡಿ

  |

  ಬಾಲಿವುಡ್ ಖ್ಯಾತ ನಟಿ ಮಂದಿರ ಬೇಡಿ ಪತಿ ಹಾಗೂ ಚಲನಚಿತ್ರ ನಿರ್ದೇಶಕ ಮತ್ತು ನಿರ್ಮಾಪಕ ರಾಜ್ ಕೌಶಲ್ ಹಠಾತ್ ನಿಧನ ಇಡೀ ಬಾಲಿವುಡ್‌ಗೆ ಶಾಕ್ ನೀಡಿದೆ. 49 ವರ್ಷದ ರಾಜ್ ಕೌಶಲ್ ಹೃದಯಾಘಾತದಿಂದ ಇತ್ತೀಚಿಗಷ್ಟೆ ಕೊನೆಯುಸಿರೆಳೆದರು.

  ಪತಿಯ ಅಗಲಿಕೆಯ ನೋವಿನಲ್ಲಿರುವ ನಟಿ ಮಂದಿರಾ ಬೇಡಿ ಸಾಮಾಜಿಕ ಜಾಲತಾಣದಲ್ಲಿ ಮೊದಲ ಪೋಸ್ಟ್ ಹಂಚಿಕೊಂಡಿದ್ದಾರೆ. ರಾಜ್ ಕೌಶಲ್ ನಿಧನದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿರುವ ಮಂದಿರ ಬೇಡಿ ಪತಿ ಜೊತೆ ಇರುವ ಸುಂದರ ಫೋಟೋವನ್ನು ಶೇರ್ ಮಾಡಿ ಭಾವುಕರಾಗಿದ್ದಾರೆ.

  ಮಂದಿರ ಬೇಡಿ ತನ್ನ ಪ್ರೀತಿಯ ಪತಿ ರಾಜ್ ಕೌಶಲ್ ಜೊತೆ ಯಾವುದೋ ಈವೆಂಟ್‌ನಲ್ಲಿ ಕುಳಿತಿರುವ ಫೋಟೋ ಹಾಗೆ ಇದೆ. ಇಬ್ಬರೂ ನಗುತ್ತ ಕ್ಯಾಮರಾಗೆ ಪೋಸ್ ನೀಡಿರುವ ಈ ಫೋಟೋ ಶೇರ್ ಮಾಾಡಿ ಹಾರ್ಟ್ ಇಮೋಜಿ ಹಾಕಿದ್ದಾರೆ. ಫೋಟೋ ಮೂಲಕ ಪತಿಯ ಮೇಲಿನ ಪ್ರೀತಿ ವ್ಯಕ್ತಪಡಿಸಿರುವ ಮಂದಿರಾ ಪೋಸ್ಟ್‌ಗೆ ಅನೇಕರು ಕಾಮೆಂಟ್ ಮಾಡಿದ್ದಾರೆ.

  ಹಾರ್ಟ್ ಇಮೋಜಿ ಹಾಕಿ ಸಾಂತ್ವನ ಹೇಳುತ್ತಿದ್ದಾರೆ. ನಟಿ ಮಂದಿರಾ ಬೇಡಿ ತಾನೆ ಮುಂದೆ ನಿಂತು ಪತಿಯ ಅಂತ್ಯ ಸಂಸ್ಕಾರದ ವಿಧಿವಿಧಾನಗಳನ್ನು ಮಾಡುವ ಮೂಲಕ ಗಮನ ಸೆಳೆದಿದ್ದರು. ಹಿಂದೂ ಸಂಪ್ರದಾಯದ ಪ್ರಕಾರ ಪುರುಷರು ಅಂತ್ಯಕ್ರಿಯೆಯ ವಿಧಿವಿಧಾನಗಳನ್ನು ಮಾಡುತ್ತಾರೆ. ಶವದ ಮಂದೆ ಹೊತ್ತು ಸಾಗುವ ಮಡಿಕೆಯನ್ನು ಮಹಿಳೆಯರು ಸ್ಪರ್ಶಿಸುವುದಿಲ್ಲ. ಆದರೆ ಮಂದಿರಾ ಬೇಡಿ ಸಂಪ್ರದಾಯ ಮೀರಿ ತಾವೆ ಮಡಿಕೆ ಹೊತ್ತು ಸಾಗುವ ಮೂಲಕ ಪತಿಯ ಅಂತಿಮ ವಿಧಿವಿಧಾನಗಳನ್ನು ಮಾಡಿದ್ದರು.

  Dr Shiva Rajkumar Biography | ಶಿವರಾಜ್ ಕುಮಾರ್ ಹುಟ್ಟಿದ ದಿನ ಅಣ್ಣಾವ್ರು ಏನ್ ಮಾಡಿದ್ರು ಗೊತ್ತಾ? | Filmibeat Kannada

  1999ರಲ್ಲಿ ಮಂದಿರಾ ಬೇಡಿ, ರಾಜ್ ಕೌಶಲ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಮಂದಿರ 2011ರಲ್ಲಿ ಮೊದಲ ಮಗುವಿಗೆ ಜನ್ಮ ನೀಡಿದರು. ನಂತರ ಎರಡನೇ ಮಗುವನ್ನು ದತ್ತು ಪಡೆದರು.

  English summary
  Actress Mandira Bedi remembers late husband Raj Kaushal; shared happy pictures with him.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X