For Quick Alerts
  ALLOW NOTIFICATIONS  
  For Daily Alerts

  'ಮಣಿಕರ್ಣಿಕಾ' ಸುತ್ತ ವಿವಾದದ ಭೂತ: ಕಂಗನಾ-ಸೋನು ಕೆಸರೆರಚಾಟ

  By Harshitha
  |

  ಝಾನ್ಸಿ ರಾಣಿ ಲಕ್ಷ್ಮಿ ಬಾಯಿ ಜೀವನಚರಿತ್ರೆ ಆಧಾರಿತ 'ಮಣಿಕರ್ಣಿಕಾ: ದಿ ಕ್ವೀನ್ ಆಫ್ ಝಾನ್ಸಿ' ಎಂಬ ಶೀರ್ಷಿಕೆ ಅಡಿ ಹಿಂದಿ ಚಿತ್ರ ತಯಾರಾಗುತ್ತಿರುವುದು ನಿಮಗೆಲ್ಲ ಗೊತ್ತೇ ಇದೆ. ಝಾನ್ಸಿ ರಾಣಿ ಆಗಿ ಈ ಸಿನಿಮಾದಲ್ಲಿ ಕಂಗನಾ ಅಭಿನಯಿಸುತ್ತಿದ್ದಾರೆ.

  2017, ಮೇ ತಿಂಗಳಲ್ಲಿ 'ಮಣಿಕರ್ಣಿಕಾ: ದಿ ಕ್ವೀನ್ ಆಫ್ ಝಾನ್ಸಿ' ಚಿತ್ರ ಸೆಟ್ಟೇರಿತ್ತು. ನಿರ್ಮಾಪಕರ ಪ್ಲಾನ್ ಪ್ರಕಾರ, 2019, ಜನವರಿ 25 ರಂದು ಈ ಸಿನಿಮಾ ತೆರೆಗೆ ಬರಬೇಕು. ಚಿತ್ರ ಬಿಡುಗಡೆಗೆ ನಾಲ್ಕು ತಿಂಗಳು ಬಾಕಿ ಇರುವಾಗಲೇ 'ಮಣಿಕರ್ಣಿಕಾ: ದಿ ಕ್ವೀನ್ ಆಫ್ ಝಾನ್ಸಿ' ವಿವಾದಕ್ಕೆ ಗ್ರಾಸವಾಗಿದೆ.

  'ಮಣಿಕರ್ಣಿಕಾ: ದಿ ಕ್ವೀನ್ ಆಫ್ ಝಾನ್ಸಿ' ಚಿತ್ರದ ಚಿತ್ರೀಕರಣ ಇನ್ನೂ ಕಂಪ್ಲೀಟ್ ಆಗಿಲ್ಲ. ಕೆಲ ಪ್ಯಾಚ್ ವರ್ಕ್ ಇನ್ನೂ ಬಾಕಿ ಇದೆ. ಹೀಗಿದ್ದರೂ, ಈ ಚಿತ್ರವನ್ನ ಬಿಟ್ಟು

  ನಿರ್ದೇಶಕ ಕ್ರಿಶ್ ಇದೀಗ ತೆಲುಗಿನ 'ಎನ್.ಟಿ.ಆರ್' ಸಿನಿಮಾದ ಶೂಟಿಂಗ್ ನಲ್ಲಿ ಬಿಜಿಯಾಗಿದ್ದಾರೆ.

  ಏನೇ ಆದರೂ, ಜನವರಿಯಲ್ಲಿ ಈ ಚಿತ್ರವನ್ನ ಬಿಡುಗಡೆ ಮಾಡಬೇಕು ಅಂತ ನಿರ್ಮಾಪಕರು ಪಣ ತೊಟ್ಟಿದ್ದಾರೆ. ಹೀಗಾಗಿ, ನಿರ್ದೇಶಕರ ಜಾಗಕ್ಕೆ ನಟಿ ಕಂಗನಾ ರಣೌತ್ ರನ್ನ ನಿರ್ಮಾಪಕರು ತಂದು ಕೂರಿಸಿದ್ದಾರೆ. ನಿರ್ದೇಶಕರ ಕುರ್ಚಿ ಮೇಲೆ ಕಂಗನಾ ಕೂತ ಮೇಲೆ ಸ್ಕ್ರಿಪ್ಟ್ ನಲ್ಲಿ ಬದಲಾವಣೆ ಆಗಿದೆ. ಕೆಲ ಸೀನ್ ಗಳನ್ನ ರೀ ಶೂಟ್ ಮಾಡಲು ಕಂಗನಾ ಮುಂದಾಗಿದ್ದಾರೆ. ಇದರಿಂದ ಸಿಟ್ಟಾಗಿರುವ ಸೋನು ಸೂದ್ 'ಮಣಿಕರ್ಣಿಕಾ: ದಿ ಕ್ವೀನ್ ಆಫ್ ಝಾನ್ಸಿ' ಚಿತ್ರದಿಂದ ಹೊರಬಂದಿದ್ದಾರೆ. ಸಂಪೂರ್ಣ ಮಾಹಿತಿ ಫೋಟೋ ಸ್ಲೈಡ್ ಗಳಲ್ಲಿ ಓದಿರಿ...

  ಕೊನೆಯ ಕ್ಷಣದಲ್ಲಿ ಎಲ್ಲವೂ ಬದಲಾವಣೆ

  ಕೊನೆಯ ಕ್ಷಣದಲ್ಲಿ ಎಲ್ಲವೂ ಬದಲಾವಣೆ

  ನಟಿ ಕಂಗನಾ ಡೈರೆಕ್ಟರ್ ಕ್ಯಾಪ್ ತೊಟ್ಟ ಮೇಲೆ ಸ್ಕ್ರಿಪ್ಟ್ ಹಾಗೂ ಪಾತ್ರಗಳಲ್ಲಿ ಬದಲಾವಣೆ ಆಗಿದೆ. ಸೋನು ಸೂದ್ ನಿರ್ವಹಿಸಿದ್ದ ರಾಜನ ಪಾತ್ರದಲ್ಲೂ ಚೇಂಜಸ್ ಮಾಡಲಾಗಿದ್ದು, ಕೆಲ ಸೀನ್ ಗಳನ್ನು ರೀ ಶೂಟ್ ಮಾಡಲು ಕಂಗನಾ ಮುಂದಾಗಿದ್ದರಂತೆ. ಇದಕ್ಕಾಗಿ ಸೋನು ಸೂದ್ ಕಾಲ್ ಶೀಟ್ ಬೇಕಾಗಿತ್ತು.

  ಆಕ್ಷನ್ ಮಾಡಲು ಹೋಗಿದ್ದ ನಟಿ ಕಂಗನಾ ಕಾಲಿಗೆ ಗಾಯಆಕ್ಷನ್ ಮಾಡಲು ಹೋಗಿದ್ದ ನಟಿ ಕಂಗನಾ ಕಾಲಿಗೆ ಗಾಯ

  'ಸಿಂಬಾ' ತಯಾರಿಯಲ್ಲಿ ತೊಡಗಿದ್ದ ಸೋನು ಸೂದ್

  'ಸಿಂಬಾ' ತಯಾರಿಯಲ್ಲಿ ತೊಡಗಿದ್ದ ಸೋನು ಸೂದ್

  'ಮಣಿಕರ್ಣಿಕಾ: ದಿ ಕ್ವೀನ್ ಆಫ್ ಝಾನ್ಸಿ' ಚಿತ್ರದ ತಮ್ಮ ಭಾಗದ ಶೂಟಿಂಗ್ ಮುಗಿದ ಮೇಲೆ 'ಸಿಂಬಾ' ಚಿತ್ರದ ತಯಾರಿಯಲ್ಲಿ ಸೋನು ಸೂದ್ ತೊಡಗಿದ್ದರು. ಸಿಂಬಾ ಚಿತ್ರಕ್ಕಾಗಿ ಸೋನು ಮೀಸೆ ಹಾಗೂ ಗಡ್ಡ ಬೆಳೆಸಿದ್ದಾರೆ. ಈ ನಡುವೆ ಏಕಾಏಕಿ ''ಮಣಿಕರ್ಣಿಕಾ: ದಿ ಕ್ವೀನ್ ಆಫ್ ಝಾನ್ಸಿ' ರೀ ಶೂಟ್ ಗಾಗಿ ನಿರ್ಮಾಪಕರು ಸೋನು ಕಾಲ್ ಶೀಟ್ ಕೇಳಿದ್ದಾರೆ. ಅಲ್ಲದೇ, ಸೋನು ಸೂದ್ ಕ್ಲೀನಾಗಿ ಶೇವ್ ಮಾಡಿಕೊಂಡು ಬರಲು ಸೂಚಿಸಿದ್ದಾರೆ.

  ಝಾನ್ಸಿ ರಾಣಿಯಾಗಿ ಅಬ್ಬರಿಸಿದ 'ಮಣಿಕರ್ಣಿಕಾ' ಕಂಗನಾಝಾನ್ಸಿ ರಾಣಿಯಾಗಿ ಅಬ್ಬರಿಸಿದ 'ಮಣಿಕರ್ಣಿಕಾ' ಕಂಗನಾ

  ಸಡನ್ ಆಗಿ ಹೇಳಿದರೆ ಹೇಗೆ.?

  ಸಡನ್ ಆಗಿ ಹೇಳಿದರೆ ಹೇಗೆ.?

  ನಿರ್ದೇಶಕರು ಚೇಂಜ್ ಆದ್ಮೇಲೆ, ಕೊನೆಯ ಕ್ಷಣದಲ್ಲಿ ಕೆಲವು ಭಾಗಗಳನ್ನು ರೀ ಶೂಟ್ ಮಾಡುವ ಐಡಿಯಾ ಸೋನು ಸೂದ್ ಗೆ ಸರಿ ಎನಿಸಿಲ್ಲ. ಆದರೂ, ನಿರ್ಮಾಪಕರ ಮಾತಿಗೆ ಬೆಲೆ ಕೊಟ್ಟು, ''ಸಿಂಬಾ' ಶೆಡ್ಯೂಲ್ ಮುಗಿದ ಮೇಲೆ ರೀ ಶೂಟ್ ಮಾಡೋಣ. ಇಲ್ಲಾಂದ್ರೆ, 'ಸಿಂಬಾ' ಚಿತ್ರದ ನನ್ನ ಲುಕ್ ನಲ್ಲಿ ಹೆಚ್ಚು ಕಮ್ಮಿ ಆಗುತ್ತೆ'' ಎಂದು ಸೋನು ಸೂದ್ ಕೇಳಿಕೊಂಡಿದ್ದರು. ಇದೇ ವಿಚಾರವಾಗಿ ಸೋನು ಹಾಗೂ ಚಿತ್ರತಂಡ ನಡುವೆ ಭಿನ್ನಾಭಿಪ್ರಾಯ ಭುಗಿಲೆದ್ದು, ಚಿತ್ರದಿಂದ ಸೋನು ಹೊರಬಂದಿದ್ದಾರೆ.

  ರಾಣಿ ಲಕ್ಷ್ಮೀಬಾಯಿ ಅವತಾರದಲ್ಲಿ 'ಕ್ವೀನ್' ಕಂಗನಾ: ಫೋಟೋ ವೈರಲ್ರಾಣಿ ಲಕ್ಷ್ಮೀಬಾಯಿ ಅವತಾರದಲ್ಲಿ 'ಕ್ವೀನ್' ಕಂಗನಾ: ಫೋಟೋ ವೈರಲ್

  ಸೋನು ಹೊರಬರಲು ಕಂಗನಾ ಕಾರಣ.?

  ಸೋನು ಹೊರಬರಲು ಕಂಗನಾ ಕಾರಣ.?

  'ಮಣಿಕರ್ಣಿಕಾ: ದಿ ಕ್ವೀನ್ ಆಫ್ ಝಾನ್ಸಿ' ಚಿತ್ರದಿಂದ ಸೋನು ಸೂದ್ ಹೊರಬರಲು ಕಂಗನಾ ಕಾರಣ ಎಂಬ ಗುಸುಗುಸು ಬಿಟೌನ್ ನಲ್ಲಿ ಕೇಳಿಬಂತು. ಇದರಿಂದ ಈ ವಿವಾದ ಬೇರೆಯದ್ದೇ ತಿರುವು ಪಡೆಯಿತು.

  ಸೋನು ಸೀನ್ ಗಳು ಕಟ್ ಆಗಿದ್ದವು.!

  ಸೋನು ಸೀನ್ ಗಳು ಕಟ್ ಆಗಿದ್ದವು.!

  ಕಂಗನಾಗೆ ನಿರ್ದೇಶಕಿ ಸ್ಥಾನ ಸಿಕ್ಕ ಮೇಲೆ, ಸಿನಿಮಾದಲ್ಲಿ ಸೋನು ಪಾತ್ರ ತುಂಬಾ ಚಿಕ್ಕದಾಯಿತಂತೆ. ಸೋನು ಅವರ ಎಷ್ಟೋ ಸೀನ್ ಗಳನ್ನ ಕಟ್ ಮಾಡಲಾಯಿತಂತೆ. ಇದನ್ನೆಲ್ಲ ನೋಡಿ ಬೇಸೆತ್ತ ಸೋನು ಸೂದ್ ಚಿತ್ರದಿಂದ ಹೊರಬಂದಿದ್ದಾರೆ ಎಂಬ ಗುಲ್ಲೆದ್ದಿತ್ತು.

  ಕಂಗನಾ ಕೊಟ್ಟ ಹೇಳಿಕೆ ಏನು.?

  ಕಂಗನಾ ಕೊಟ್ಟ ಹೇಳಿಕೆ ಏನು.?

  ''ಸೋನು ಮತ್ತು ನಾನು ಭೇಟಿಯಾಗಿದ್ದು ಕಳೆದ ವರ್ಷ. ಈಗ ಸೋನು 'ಸಿಂಬಾ' ಚಿತ್ರೀಕರಣದಲ್ಲಿ ಬಿಜಿಯಾಗಿದ್ದಾರೆ. ಅವರು ನಮಗೆ ಕಾಲ್ ಶೀಟ್ ಕೊಡಲಿಲ್ಲ. ಅವರು ನನ್ನನ್ನ ಭೇಟಿ ಮಾಡಲು ನಿರಾಕರಿಸಿದರು. ಮಹಿಳಾ ನಿರ್ದೇಶಕಿ ಜೊತೆ ಕೆಲಸ ಮಾಡಲು ಸೋನು ಸೂದ್ ಹಿಂದೇಟು ಹಾಕಿದರು. ಸೋನು ನನಗೆ ಆತ್ಮೀಯ ಗೆಳೆಯ. ಆದರೂ, ಅವರ ಈ ನಡವಳಿಕೆ ನನಗೆ ಆಶ್ಚರ್ಯ ತಂದಿದೆ'' ಅಂತಾರೆ ನಟಿ, ನಿರ್ದೇಶಕಿ ಕಂಗನಾ

  ನಾನು ಕಾರಣನಾ.?

  ನಾನು ಕಾರಣನಾ.?

  ''ಸ್ಕ್ರಿಪ್ಟ್ ನಲ್ಲಿ ಅವಶ್ಯಕತೆ ಇಲ್ಲದ ಸೀನ್ ಗಳನ್ನ ಸೋನು ಸೂದ್ ಖುದ್ದಾಗಿ ಸೇರಿಸಿದ್ದರು. ಸ್ಕ್ರಿಪ್ಟ್ ನಲ್ಲಿ ಇಲ್ಲದ ಕುಸ್ತಿ ಸನ್ನಿವೇಶ ಕೂಡ ಇತ್ತು. ಕಡೆಗೂ ಸಿನಿಮಾ ನೋಡಿದ್ಮೇಲೆ, ಈ ಸೀನ್ ಗಳೆಲ್ಲ ಬೇಡ ಅಂತ ರೈಟರ್ ಹಾಗೂ ನಿರ್ಮಾಪಕರು ತೀರ್ಮಾನ ಮಾಡಿದರು. ಇದು ನನ್ನ ತಪ್ಪಾ.?'' ಅಂತ ಪ್ರಶ್ನಿಸುತ್ತಾರೆ ಕಂಗನಾ ರಣೌತ್.

  ತಿರುಗೇಟು ಕೊಟ್ಟ ಸೋನು ಸೂದ್

  ತಿರುಗೇಟು ಕೊಟ್ಟ ಸೋನು ಸೂದ್

  ''ಮಹಿಳಾ ನಿರ್ದೇಶಕಿ ಜೊತೆಗೆ ಕೆಲಸ ಮಾಡಲು ಸೋನು ಸೂದ್ ನಿರಾಕರಿಸಿದರು'' ಅಂತ ಕಂಗನಾ ಹೇಳಿದ್ಮೇಲೆ, ಸೋನು ಸೂದ್ ತಿರುಗೇಟು ಕೊಟ್ಟಿದ್ದಾರೆ. ''ಕಂಗನಾ ಪ್ರತಿ ಬಾರಿ ಲಿಂಗ ತಾರತಮ್ಯದ ಅಸ್ತ್ರ ಬಳಸುತ್ತಾರೆ. ಅಸಲಿಗೆ, ಸಮಸ್ಯೆಗೆ ಕಾರಣ ನಿರ್ದೇಶಕರ ಲಿಂಗ ಅಲ್ಲ.. ಅವರ ಸಾಮರ್ಥ್ಯ. ನಾನು ನಿರ್ದೇಶಕಿ ಫರಾ ಖಾನ್ ಜೊತೆಗೂ ಕೆಲಸ ಮಾಡಿರುವೆ'' ಎಂದಿದ್ದಾರೆ ಸೋನು ಸೂದ್.

  ಸೋನು ಜಾಗಕ್ಕೆ ಬೇರೆಯವರು.!

  ಸೋನು ಜಾಗಕ್ಕೆ ಬೇರೆಯವರು.!

  'ಮಣಿಕರ್ಣಿಕಾ: ದಿ ಕ್ವೀನ್ ಆಫ್ ಝಾನ್ಸಿ' ಚಿತ್ರದಿಂದ ಸೋನು ಸೂದ್ ಹೊರಗೆ ಬಂದಿದ್ದಾರೆ. ಸೋನು ಜಾಗಕ್ಕೆ ಬೇರೆಯವರನ್ನ ಕರೆತರಲು ಕಂಗನಾ ಪ್ರಯತ್ನ ಪಡುತ್ತಿದ್ದಾರೆ. ಇತ್ತ ಸೋನು 'ಸಿಂಬಾ' ಚಿತ್ರೀಕರಣದಲ್ಲಿ ತೊಡಗಿದ್ದಾರೆ.

  English summary
  'Manikarnika: The Queen of Jhansi' controversy: Bollywood Actor Sonu Sood walks out of the Film.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X