For Quick Alerts
  ALLOW NOTIFICATIONS  
  For Daily Alerts

  ಮದುವೆಗೆಂದು ಉಳಿಸಿದ್ದ ಹಣ ದಾನ ಮಾಡಿದ ನಟಿ

  |

  ಭಾರಿ ಹಣ ವ್ಯಯಿಸಿ ದೊಡ್ಡ-ದೊಡ್ಡ ಸೆಟ್‌ಗಳನ್ನು ಹಾಕಿ ಮದುವೆ ಆಗುವುದು ನಟ-ನಟಿಯರಿಗೆ ಫ್ಯಾಷನ್ ಆಗಿದೆ. ಅದರಲ್ಲೂ ವಿದೇಶಗಳಲ್ಲಿ ಮದುವೆ ಆಗುವುದು ಈಗಂತೂ ಅಂತಸ್ಥಿನ ವಿಷಯ.

  ಆದರೆ ಇದೀಗ ಕೊರೊನಾ ಕಾರಣಕ್ಕೆ ಮದುವೆಗಳಲ್ಲಿ ಹೆಚ್ಚು ಜನ ಸೇರುವುದನ್ನು ನಿರ್ಬಂಧಿಸಲಾಗಿದೆ. ಹಾಗಾಗಿ ಎಷ್ಟೇ ಉಳ್ಳವರಾದರೂ ಸರಳವಾಗಿಯೇ ವಿವಾಹವಾಗುವುದು ಅನಿವಾರ್ಯ.

  ಹಲವು ಸಿನಿಮಾ ಸೆಲೆಬ್ರಿಟಿಗಳು ಲಾಕ್‌ಡೌನ್ ಅವಧಿಯಲ್ಲಿ ಸರಳವಾಗಿ ವಿವಾಹವಾದರು. ಮರಾಠಿ ಸಿನಿಮಾಗಳಲ್ಲಿ ನಟಿಸುವ ನಟಿ ಸೊನಾಲಿ ಕುಲಕರ್ಣಿ ಸಹ ಕೆಲವು ದಿನಗಳ ಹಿಂದಷ್ಟೆ ಸರಳವಾಗಿ ವಿವಾಹವಾಗಿದ್ದಾರೆ. ಮದುವೆಗೆಂದು ದೊಡ್ಡ ಮೊತ್ತದ ಹಣವನ್ನು ಸೊನಾಲಿ ಎತ್ತಿಟ್ಟಿದ್ದರು. ಆದರೆ ಅದ್ಧೂರಿ ವಿವಾಹ ಆಗಲಿಲ್ಲವಾದ್ದರಿಂದ ಸೊನಾಲಿ ಮದುವೆಗೆಂದು ತಾವು ಎತ್ತಿಟ್ಟಿದ್ದ ಹಣವನ್ನು ಕೊರೊನಾ ವಿರುದ್ಧ ಹೋರಾಟಕ್ಕೆ ದಾನವಾಗಿ ನೀಡುತ್ತಿದ್ದಾರೆ.

  ಮೇ 07ರಂದು ವಿವಾಹವಾಗಿರುವ ಸೊನಾಲಿ

  ಮೇ 07ರಂದು ವಿವಾಹವಾಗಿರುವ ಸೊನಾಲಿ

  'ನಟರಂಗ್' ಸೇರಿ ಹಲವು ಮರಾಠಿ ಸಿನಿಮಾಗಳಲ್ಲಿ ನಟಿಸಿರುವ ಸೊನಾಲಿ ಕುಲಕರ್ಣಿ, ಮೇ 07ರಂದು ದುಬೈನಲ್ಲಿ ಸಣ್ಣ ದೇವಸ್ಥಾನವೊಂದರಲ್ಲಿ ಕುನಾಲ್ ಬೆನೋಡ್ಕರ್ ಜೊತೆಗೆ ಮದುವೆಯಾಗಿದ್ದಾರೆ. ವಧು-ವರರ ಪೋಷಕರು ಸಹ ಮದುವೆಯನ್ನು ವಿಡಿಯೋ ಕಾಲ್ ಮೂಲಕ ಮದುವೆಗೆ ಸಾಕ್ಷಿಯಾಗಿದ್ದಾರೆ. ಭಾರತದಲ್ಲಿ ವಿವಾಹ ನೊಂದಣಿ ಮಾಡಿಸಿದ್ದಾರೆ.

  ಅದ್ಧೂರಿಯಾಗಿ ವಿವಾಹವಾಗುವ ಆಸೆ ಸೊನಾಲಿಗಿತ್ತು

  ಅದ್ಧೂರಿಯಾಗಿ ವಿವಾಹವಾಗುವ ಆಸೆ ಸೊನಾಲಿಗಿತ್ತು

  ಅದ್ಧೂರಿಯಾಗಿ ವಿವಾಹವಾಗುವ ಆಸೆ ಸೊನಾಲಿಗೆ ಇತ್ತು ಅದಕ್ಕೆಂದೇ ಹಲವಾರು ಲಕ್ಷ ರೂಪಾಯಿ ಹಣವನ್ನು ತೆಗೆದಿಟ್ಟಿದ್ದರು. ಆದರೆ ಕೊರೊನಾ ಕಾರಣಕ್ಕೆ ಸರಳವಾಗಿ ವಿವಾಹವಾಗಿರುವ ಸೋನಲ್ ಆ ಹಣವನ್ನೆಲ್ಲ ದಾನ ಮಾಡುತ್ತಿದ್ದಾರೆ. ಸೊನಾಲಿ ಮಾತ್ರವೇ ಅಲ್ಲದೆ ಅವರ ಪತಿ ಕುನಾಲ್ ಸಹ ಹಣ ದಾನ ಮಾಡುತ್ತಿದ್ದಾರೆ.

  ಅವಶ್ಯಕತೆ ಇರುವವರಿಗೆ ಸಹಾಯ ಮಾಡಬೇಕಿದೆ: ಸೊನಾಲಿ

  ಅವಶ್ಯಕತೆ ಇರುವವರಿಗೆ ಸಹಾಯ ಮಾಡಬೇಕಿದೆ: ಸೊನಾಲಿ

  ಈ ಬಗ್ಗೆ ಮಾತನಾಡಿರುವ ಸೊನಾಲಿ, 'ದೇವರ ದಯದಿಂದ ನಾವು ತುಸು ಸ್ಥಿತಿವಂತರಾಗಿದ್ದೇವೆ. ನಮ್ಮ ತಟ್ಟೆಯಲ್ಲಿ ಊಟವಿದೆ. ಹಣವನ್ನು ಉಳಿಸಿದ್ದೇವೆ. ಆದರೆ ಇದಾವುದೂ ಇಲ್ಲದ ಜನರು ದೇಶದಲ್ಲಿ ಬಹಳಷ್ಟಿದ್ದಾರೆ. ಅವರಿಗೆ ಈಗ ನಮ್ಮ ಸಹಾಯ ಬೇಕಾಗಿದೆ. ಈ ಸಂಕಷ್ಟದ ಸಮಯದಲ್ಲಿ ಜನರಿಗೆ ಸಹಾಯ ಮಾಡುತ್ತಿರುವ ಕೆಲವು ಸಂಸ್ಥೆಗಳನ್ನು ನಾವು ಗುರುತಿಸಿದ್ದು ಅವುಗಳ ಮೂಲಕ ನಾವು ಅವಶ್ಯಕತೆ ಇರುವವರಿಗೆ ಸಹಾಯ ಮಾಡಲಿದ್ದೇವೆ' ಎಂದಿದ್ದಾರೆ.

  ತೆಲುಗಿನಲ್ಲಿ ಪ್ರಶಾಂತ್ ನೀಲ್ ಗೆ ಸಿಕ್ತಿದೆ ಕೋಟಿ ಕೋಟಿ ಸಂಭಾವನೆ | Filmibeat Kannada
  ಹಿಂದಿ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ

  ಹಿಂದಿ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ

  ಸೊನಾಲಿ ಅವರು ಲಾಕ್‌ಡೌನ್ ಅವಧಿಯಲ್ಲಿ ನಿರುದ್ಯೋಗ ಸೃಷ್ಟಿಯಾಗುತ್ತಿರುವ ಬಗ್ಗೆ ತೀವ್ರ ಆತಂಕವನ್ನು ವ್ಯಕ್ತಪಡಿಸುತ್ತಲೇ ಬಂದಿದ್ದರು. ಅದರಲ್ಲಿಯೂ ಆರ್ಕೆಸ್ಟ್ರಾ ಕಲಾವಿದರು, ಸ್ಟೇಜ್‌ ಡ್ಯಾನ್ಸರ್‌ಗಳು, ನಾಟಕ ಕಲಾವಿದರು. ಸಿನಿಮಾದ ಪೋಷಕ ಕಲಾವಿದರುಗಳ ಬಗ್ಗೆ ಚಿಂಚಿತರಾಗಿದ್ದರು. ಈಗ ಅವರೇ ಹೇಳಿರುವಂತೆ ಅಂಥಹಾ ಕಲಾವಿದರಿಗೆ ನೆರವಿನ ಹಸ್ತ ಚಾಚುವುದಾಗಿ ಹೇಳಿದ್ದಾರೆ. 2006ರಿಂದಲೂ ಸಿನಿಮಾಗಳಲ್ಲಿ ನಟಿಸುತ್ತಿರುವ ಸೊನಾಲಿ ಕುಲಕರ್ಣಿ ಈವರೆಗೆ 50 ಕ್ಕೂ ಹೆಚ್ಚು ಮರಾಠಿ ಸಿನಿಮಾಗಳಲ್ಲಿ ನಟಿಸಿದ್ದಾರೆ. ಹಿಂದಿಯ 'ಗ್ರ್ಯಾಂಡ್ ಮಸ್ತಿ', 'ಸಿಂಘಂ ರಿಟರ್ನ್ಸ್' ಸಿನಿಮಾಗಳಲ್ಲಿಯೂ ನಟಿಸಿದ್ದಾರೆ.

  English summary
  Marathi actress Sonalee Kulkarni donating money which she saved for her marriage. She married Kunal in a simple ceremony in Dubai on May 07.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X