Don't Miss!
- Sports
ಬಾರ್ಡರ್-ಗವಾಸ್ಕರ್ ಟ್ರೋಫಿ: ರೋಹಿತ್ ಬಳಗದ ಅಭ್ಯಾಸಕ್ಕೆ ಭಾನುವಾರ ರಜೆ ನೀಡಿದ ಕೋಚ್ ದ್ರಾವಿಡ್
- Lifestyle
Horoscope Today 6 Feb 2023: ಸೋಮವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- News
ರಾಜ್ಯ ರಾಜಕೀಯದ ಮುಂದಿನ ರಹಸ್ಯವೊಂದನ್ನು ಬೇಧಿಸಿದ ಎಚ್ಡಿಕೆ
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Technology
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
"ಬಾಡಿಗೆ ಕೊಡೋಕೆ ಹೋದರೆ ಮಂಚಕ್ಕೆ ಕರೆದ": ಕಹಿ ಅನುಭವ ಬಿಚ್ಚಿಟ್ಟ ನಟಿ
ಮೀಟು ಅಭಿಯಾನದ ಅಡಿಯಲ್ಲಿ ಸಾಕಷ್ಟು ನಟಿಯರು ಚಿತ್ರರಂಗದಲ್ಲಿ ತಮಗಾದ ಕಹಿ ಅನುಭವಗಳನ್ನು ಬಿಚ್ಚಿಟ್ಟಿದ್ದಾರೆ. ಕಾಸ್ಟಿಂಗ್ ಕೌಚ್ ಹೆಸರಿನಲ್ಲಿ ಮಂಚಕ್ಕೆ ಕರೆಯುವ ಚಿತ್ರರಂಗದ ಕರಾಳ ಮುಖದ ಬಗ್ಗೆ ಮಾತನಾಡಿದ್ದಾರೆ. ಚಿತ್ರರಂಗದಲ್ಲಿ ಮಾತ್ರವಲ್ಲದೇ ಬೇರೆ ಕಡೆಗಳಲ್ಲೂ ತಮಗೆ ಎದುರಾದ ಇಂತಹ ಸಮಸ್ಯೆಗಳ ಬಗ್ಗೆ ದನಿ ಎತ್ತಿದ್ದಾರೆ.
ಚಿತ್ರರಂಗದಲ್ಲಿ ಮಾತ್ರವಲ್ಲದೇ ಎಲ್ಲಾ ಕ್ಷೇತ್ರಗಳಲ್ಲೂ ಇಂತಹ ಕಾಮುಕರು ಇರುತ್ತಾರೆ ಎಂದು ಕೆಲ ನಟಿಯರು ಹೇಳಿದ್ದಾರೆ. ಇದೀಗ ಮರಾಠಿ ನಟಿ ತೇಜಸ್ವಿನಿ ಪಂಡಿತ್ ದಶಕದ ಹಿಂದೆ ತಮಗಾದ ಕಹಿ ಅನುಭವ ಬಿಚ್ಚಿಟ್ಟಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿರುವ ನಟಿ, "ನಾನು ಸಿನಿಮಾ ನಟಿ, ನನ್ನ ಬಳಿ ಹಣ ಇಲ್ಲ ಎನ್ನುವ ಕಾರಣಕ್ಕೆ ನನ್ನನ್ನು ಕೆಟ್ಟದಾಗಿ ನೋಡಿದ್ದರು" ಎಂದು ಅಂದಿನ ಘಟನೆ ವಿವರಿಸಿದ್ದಾರೆ.
ಕೇಸರಿ
ಬಿಕಿನಿ
ವಿವಾದ:
ಕೇಂದ್ರ
ಸಚಿವೆ
ಸ್ಮೃತಿ
ಇರಾನಿಯ
ತುಂಡುಡುಗೆ
ವಿಡಿಯೋ
ವೈರಲ್!
2009-10ರ ಸಮಯದಲ್ಲಿ ನಾನು ಪುಣೆಯ ಅಪಾರ್ಟ್‌ಮೆಂಟ್ ಒಂದರಲ್ಲಿ ವಾಸ ಇದ್ದೆ. ಆ ಸಮಯದಲ್ಲಿ ಈ ಘಟನೆ ನಡೆದಿತ್ತು ಎಂದು ಅಂದು ತೇಜಸ್ವಿನಿ ಪಂಡಿತ್ ಘಟನೆ ಬಗ್ಗೆ ಮಾತನಾಡಿದ್ದಾರೆ.

ಆತ ನೇರವಾಗಿ ಮಂಚಕ್ಕೆ ಕರೆದಿದ್ದ
"ಆಗ ನನ್ನ ಒಂದೆರಡು ಸಿನಿಮಾಗಳು ಮಾತ್ರ ಬಿಡುಗಡೆ ಆಗಿತ್ತು ಅಷ್ಟೆ. ನಾನು ಪುಣೆಯ ಸಿನ್ಹಾಗಡ ರಸ್ತೆಯ ಅಪಾರ್ಟ್‌ಮೆಂಟ್ ಫ್ಲಾಟ್‌ನಲ್ಲಿ ವಾಸವಿದ್ದೆ. ಆ ಅಪಾರ್ಟ್‌ಮೆಂಟ್ ಒಬ್ಬ ಕಾರ್ಪೋರೇಟರ್‌ಗೆ ಸೇರಿದ್ದಾಗಿತ್ತು. ಒಮ್ಮೆ ನಾನು ಬಾಡಿಗೆ ಪಾವತಿಸಲು ಅವನ ಕಚೇರಿಗೆ ಹೋಗಿದ್ದೆ. ಆ ಸಮಯದಲ್ಲಿ ಆತ ನನ್ನನ್ನು ನೇರವಾಗಿಯೇ ಮಂಚಕ್ಕೆ ಕರೆದಿದ್ದ. ಆ ಕ್ಷಣಕ್ಕೆ ನನಗೆ ಶಾಕ್ ಆಗಿತ್ತು"

ಮುಖಕ್ಕೆ ಹೊಡೆದಂತೆ ಹೇಳಿದ್ದೆ
ಬಾಡಿಗೆ ಬದಲು ಆತ ಮತ್ತೇನೋ ಕೇಳಿದ್ದ. ಆತ ಆ ರೀತಿ ಹೇಳುತ್ತಿದ್ದಂತೆ ಟೇಬಲ್ ಮೇಲೆ ಇದ್ದ ನೀರಿನ ಲೋಟ ತೆಗೆದು ಆತನ ಮುಖಕ್ಕೆ ಎರಚಿದ್ದೆ. "ಅಂತಹ ಕೆಲಸ ಮಾಡಲು ನಾನು ಚಿತ್ರರಂಗಕ್ಕೆ ಬರಲಿಲ್ಲ. ಆ ರೀತಿ ಮಾಡಿದ್ದರೆ ನಾನು ನಿನ್ನ ಅಪಾರ್ಟ್‌ಮೆಂಟ್‌ನಲ್ಲಿ ಬಾಡಿಗೆಗೆ ಇರಬೇಕಾದ ಸ್ಥಿತಿ ಇರುತ್ತಿರಲಿಲ್ಲ. ಬಂಗಲೆ, ಕಾರು ತೆಗೆದುಕೊಂಡು ಇರುತ್ತಿದ್ದೆ" ಎಂದು ಮುಖಕ್ಕೆ ಹೊಡೆದಂತೆ ಹೇಳಿದ್ದರಂತೆ.

ಜೀವನದಲ್ಲಿ ಅದೊಂದು ಪಾಠ
ಮಾತು ಮುಂದುವರೆಸಿರುವ ನಟಿ ತೇಜಸ್ವಿನಿ ಪಂಡಿತ್ "ಎರಡು ಕಾರಣಕ್ಕೆ ನನ್ನನ್ನು ಅವರು ಆ ರೀತಿ ಜಡ್ಜ್ ಮಾಡಿದ್ದರು. ಒಂದು ನಾನು ಮಾಡುತ್ತಿದ್ದ ವೃತ್ತಿ(ಸಿನಿಮಾರಂಗ). ಮತ್ತೊಂದು ನನ್ನ ಆರ್ಥಿಕ ಸ್ಥಿತಿ ಚೆನ್ನಾಗಿರಲಿಲ್ಲ" ಎಂದು ಮರಾಠಿ ನಟಿ ಹೇಳಿದ್ದಾರೆ.
2004ರಲ್ಲಿ ಬಂದ 'ಆಗ ಬೈ ಅರಾಚೆ' ಚಿತ್ರದಲ್ಲಿ ತೇಜಸ್ವಿನಿ ಪಂಡಿತ್ ಮೊದಲ ಬಾರಿಗೆ ಬಣ್ಣ ಹಚ್ಚಿದ್ದಾರೆ. ಚಿತ್ರದಲ್ಲಿ ನೆಗೆಟಿವ್ ರೋಲ್ ಪ್ಲೇ ಮಾಡಿದ್ದರು. ಅಲ್ಲಿಂದ ಮುಂದೆ ಸಾಲು ಸಾಲು ಮರಾಠಿ ಸಿನಿಮಾಗಳಲ್ಲಿ ನಟಿಸಲು ಆರಂಭಿಸಿದರು. ಇನ್ನು ಕಿರಿತೆರೆ ಕಾರ್ಯಕ್ರಮಗಳಲ್ಲೂ ಮಿಂಚಿದ್ದಾರೆ. ಸದ್ಯ ತೇಜಸ್ವಿನಿ ನಟನೆಯ ವೆಬ್‌ಸೀರಿಸ್‌ವೊಂದು ಬಿಡುಗಡೆಗೆ ಸಿದ್ಧವಾಗಿದೆ.