»   » ಗಾಯಕ ಮಿಕಾ ಸಿಂಗ್ ಡಾಕ್ಟರ್ ಗೆ ಕಪಾಳಮೋಕ್ಷ

ಗಾಯಕ ಮಿಕಾ ಸಿಂಗ್ ಡಾಕ್ಟರ್ ಗೆ ಕಪಾಳಮೋಕ್ಷ

Posted By:
Subscribe to Filmibeat Kannada

ತಮ್ಮ ಹಾಡುಗಳಿಗಿಂತ ಗಾಯಕ ಮಿಕಾ ಸಿಂಗ್ ವಿವಾದಗಳಿಂದಲೇ ಹೆಚ್ಚು ಜನಪ್ರಿಯ. ನಿಮಗೆ ನೆನಪಿದ್ಯೋ..ಇಲ್ವೋ..ಹಿಂದೊಮ್ಮೆ ಕಾಂಟ್ರೊವರ್ಶಿಯಲ್ ಕುವರಿ ರಾಖಿ ಸಾವಂತ್ ಗೆ ಪಬ್ಲಿಕ್ ನಲ್ಲಿ ಮುತ್ತು ಕೊಟ್ಟು ಬ್ರೇಕಿಂಗ್ ನ್ಯೂಸ್ ಮಾಡಿದ್ದ ಮಿಕಾ ಸಿಂಗ್, ಈಗ ಅಂಥದ್ದೇ ಮತ್ತೊಂದು ರಗಳೆ ಮಾಡಿಕೊಂಡಿದ್ದಾರೆ.

ಈ ಬಾರಿ ಮುತ್ತು ಕೊಡುವ ಬದಲಿಗೆ, ಕೆನ್ನೆ ಊದಿಸುವ ಮೂಲಕ ಮಿಕಾ ಸಿಂಗ್ ಸುದ್ದಿ ಮಾಡಿದ್ದಾರೆ. ಮಿಕಾ ಸಿಂಗ್ ಕೋಪ-ಪ್ರತಾಪಕ್ಕೆ ವೈದ್ಯರೊಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಂತಾಗಿದೆ.

Mika Singh slaps a doctor at Delhi concert

ಅಸಲಿಗೆ ಆಗಿದ್ದೇನು ಅಂದ್ರೆ, Delhi Ophthalmological Society (DOS) ಮೂರು ದಿನಗಳ ಕಾನ್ಫರೆನ್ಸ್ ಏರ್ಪಡಿಸಿತ್ತು. ಅದರಲ್ಲಿ ನಿನ್ನೆ ಸಂಜೆ ಮಿಕಾ ಸಿಂಗ್ ರವರ ಕಾನ್ಸರ್ಟ್ ಆಯೋಜಿಸಲಾಗಿತ್ತು.

ಗಾನಸುಧೆ ಹರಿಸೋಕೆ ಪ್ರಾರಂಭಿಸಿದ ಮಿಕಾ ಸಿಂಗ್, ಕಾನ್ಸರ್ಟ್ ಮಧ್ಯದಲ್ಲಿ ಕೆಲ ಡಾಕ್ಟರ್ ಗಳನ್ನೂ ಸ್ಟೇಜ್ ಮೇಲೆ ಕರೆದು ಡ್ಯಾನ್ಸ್ ಮಾಡುವಂತೆ ಪ್ರೇರೇಪಿಸಿದರು. ಇದೇ ವೇಳೆ ವೇದಿಕೆ ಮೇಲೆ ಬಂದ ವೈದ್ಯರೊಬ್ಬರಿಗೆ ಮಿಕಾ ಸಿಂಗ್ ಕಪಾಳಮೋಕ್ಷ ಮಾಡಿದ್ದಾರೆ.

ಮಿಕಾ ಬೀಸಿದ ಏಟಿಗೆ ವೈದ್ಯರ ಕಪಾಳಕ್ಕೆ ಏಟಾಗಿದೆ. ಎಡ ಕಿವಿಯ ತಮಟೆಗೆ ಪೆಟ್ಟು ಬಿದ್ದು ವೈದ್ಯರನ್ನ ಅಂಬೇಡ್ಕರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ತಿಳಿದ ದೆಹಲಿ ಪೊಲೀಸರು ಮಿಕಾ ಸಿಂಗ್ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ.

English summary
Singer Mika Singh is booked for allegedly slapping a doctor at a concert in Delhi, which happened last night. Delhi police has registered a case of causing hurt and wrongful restraint on Mika Singh.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada