For Quick Alerts
  ALLOW NOTIFICATIONS  
  For Daily Alerts

  ಮಿಸ್ ಇಂಡಿಯಾ ರನ್ನರ್ ಅಪ್ ಆದ ಆಟೋ ಡ್ರೈವರ್ ಮಗಳು ಮಾನ್ಯಾ ಸಿಂಗ್ ಅವರ ಸ್ಫೂರ್ತಿದಾಯಕ ಕಥೆ

  |

  ತೆಲಂಗಾಣ ಮೂಲದ ಮಾನಸ ವಾರಣಾಸಿ ಮಿಸ್ ಇಂಡಿಯಾ 2020 ಕಿರೀಟ ಗೆದ್ದು ಬೀಗಿದ್ದಾರೆ. ಮಾನಸ ಅವರಿಗೆ ಶುಭಾಶಯಗಳ ಸುರಿಮಳೆಯೇ ಹರಿದು ಬರುತ್ತಿದೆ. ಇನ್ನು ಇದೇ ಸ್ಪರ್ಧೆಯಲ್ಲಿ ರನ್ನರ್ ಆಪ್ ಆಗಿ ಹೊರಹೊಮ್ಮಿದ ಮಾನ್ಯಾ ಸಿಂಗ್ ಈಗ ಎಲ್ಲರ ಗಮನ ಸೆಳೆಯುತ್ತಿದ್ದಾರೆ.

  ಸಾಮಾನ್ಯ ಆಟೋ ಡ್ರೈವರ್ ಮಗಳಾಗಿರುವ ಮಾನ್ಯಾ ಸಿಂಗ್ ಸಾಧನೆಗೆ ಇಡೀ ದೇಶವೇ ಹೆಮ್ಮೆ ಪಡುತ್ತಿದೆ. ಹೌದು, ಉತ್ತರ ಪ್ರದೇಶದ ಕುಷಿನಗರದಲ್ಲಿ ಸಾಮಾನ್ಯಾ ಆಟೋ ಡ್ರೈವರ್ ಮಗಳಾಗಿ ಜನಿಸಿದ ಮಾನ್ಯಾ ಸಿಂಗ್ ತುಂಬಾ ಕಷ್ಟ ಪಟ್ಟು ಬೆಳೆದು ಬಂದಿದ್ದಾರೆ. ಒಂದೊತ್ತಿನ ಊಟಕ್ಕೂ ಪರದಾಡುತ್ತಿದ್ದ ಮಾನ್ಯಾ ಸಿಂಗ್ ಕುಟುಂಬ ಇಂದು ದೇಶದ ಮಗನ ಸೆಳೆಯುತ್ತಿದೆ.

  'ಮಿಸ್ ಇಂಡಿಯಾ 2020' ಪ್ರಶಸ್ತಿ ಗೆದ್ದ ತೆಲಂಗಾಣ ಸುಂದರಿ ಮಾನಸ

  ಮಿಸ್ ಇಂಡಿಯಾ ರನ್ನರ್ ಅಪ್ ಆದ ಸಂತಸವನ್ನು ಮಾನ್ಯಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಒಂದಿಷ್ಟು ಫೋಟೋಗಳನ್ನು ಶೇರ್ ಮಾಡಿ, ತಾನು ಬೆಳೆದು ಬಂದ ಕಷ್ಟದ ದಿನಗಳ ಬಗ್ಗೆ ದೀರ್ಘವಾಗಿ ಬರೆದುಕೊಂಡಿದ್ದಾರೆ.

  ಕಷ್ಟದ ದಿನಗಳನ್ನು ನೆನಪಿಸಿಕೊಂಡ ಮಾನ್ಯಾ ಸಿಂಗ್

  ಕಷ್ಟದ ದಿನಗಳನ್ನು ನೆನಪಿಸಿಕೊಂಡ ಮಾನ್ಯಾ ಸಿಂಗ್

  ಬಾಲ್ಯವನ್ನು ತುಂಬಾ ಕಷ್ಟದಲ್ಲಿ ಕಳೆದ ಮಾನ್ಯಾ ವಿದ್ಯಾಭ್ಯಾಸಕ್ಕಾಗಿ ತಾಯಿಯ ಒಡವೆಯನ್ನು ಅಡ ಇಟ್ಟು ಓದಿದ್ದಾರೆ. ಬಳಿಕ ಮನೆ ಬಿಟ್ಟು ಓಡಿ ಹೋದ ಮಾನ್ಯಾ ಜೀವನಕ್ಕಾಗಿ ಅನೇಕ ಕಡೆ ಕೆಲಸ ಮಾಡಿದ್ದಾರೆ. ಬೆಳೆದು ಬಂದ ಕಷ್ಟದ ದಾರಿಯನ್ನು ಮಾನ್ಯಾ ನೆನಪಿಸಿಕೊಂಡಿದ್ದಾರೆ.

  ಊಟ, ನಿದ್ದೆ ಇಲ್ಲದೆ ಅನೇಕ ರಾತ್ರಿ ಕಳೆದ ಮಾನ್ಯಾ

  ಊಟ, ನಿದ್ದೆ ಇಲ್ಲದೆ ಅನೇಕ ರಾತ್ರಿ ಕಳೆದ ಮಾನ್ಯಾ

  'ನಾನು ಊಟ ಮತ್ತು ಆಹಾರವಿಲ್ಲದೆ ಅನೇಕ ರಾತ್ರಿ ಕಳೆದಿದ್ದೀನಿ. ನನ್ನ ರಕ್ತ, ಬೆವರು ಮತ್ತು ಕಣ್ಣೀರು ನನ್ನ ಕನಸುಗಳನ್ನು ಮುಂದುವರಿಸಲು ಸಂಯೋಜಿಸಿದೆ. ನಾನು ಆಟೋ ಡ್ರೈವರ್ ಮಗಳಾಗಿದ್ದರಿಂದ ನನಗೆ ಶಾಲೆಗೆ ಹೋಗಲು ಆಗಲಿಲ್ಲ. ಹಾಗಾಗಿ ನಾನು ಚಿಕ್ಕ ವಯಸ್ಸಿನಲ್ಲೇ ಕೆಲಸ ಪ್ರಾರಂಭ ಮಾಡಬೇಕಾಯಿತು. ನಾನು ಪುಸ್ತಕಗಳಿಗಾಗಿ ಹಾತೊರೆಯುತ್ತಿದ್ದೆ. ಅದೃಷ್ಟ ನನ್ನ ಪರವಾಗಿರಲಿಲ್ಲ. ನಾನು ಪದವಿ ಮಾಡಬೇಕೆಂದು ನನ್ನ ಹೆತ್ತವರು ಇದ್ದ ಸ್ವಲ್ಪ ಒಡವೆಯನ್ನು ಅಡ ಇಟ್ಟು ಪರೀಕ್ಷಾ ಶುಲ್ಕ ಪಾವತಿಸಿದ್ದಾರೆ.'

  ಮನೆ ಬಿಟ್ಟು ಓಡಿ ಹೋಗಿದ್ದ ಮಾನ್ಯಾ ಸಿಂಗ್

  ಮನೆ ಬಿಟ್ಟು ಓಡಿ ಹೋಗಿದ್ದ ಮಾನ್ಯಾ ಸಿಂಗ್

  'ನನ್ನ ತಾಯಿ ನನಗಾಗಿ ಸಾಕಷ್ಟು ಕಷ್ಟಪಟ್ಟಿದ್ದಾರೆ. 14ನೇ ವಯಸ್ಸಿನಲ್ಲಿ ನಾನು ಮನೆ ಬಿಟ್ಟು ಓಡಿ ಹೋದೆ. ನಾನು ಹಗಲು ಓದುತ್ತಿದ್ದೆ, ರಾತ್ರಿ ಕಾಲ್ ಸೆಂಟರ್ ನಲ್ಲಿ ಕೆಲಸ ಮಾಡುತ್ತಿದ್ದೆ. ಹಣ ಉಳಿಸಲು ನಾನು ನಡೆದುಕೊಂಡೆ ಹೋಗುತ್ತಿದ್ದೆ. ಸಾಕಷ್ಟು ನಡೆದಿದ್ದೀನಿ. ನನ್ನ ತಂದೆ, ತಾಯಿ ಮತ್ತು ನನ್ನ ಸಹೋದರ ಉನ್ನತಿಗಾಗಿ ಮತ್ತು ನಿಮ್ಮ ಕನಸುಗಳಿಗೆ ನೀವು ಬದ್ಧರಾಗಿದ್ದರೆ ಎಲ್ಲವೂ ಸಾದ್ಯ ಎಂದು ಜಗತ್ತಿಗೆ ತೋರಿಸಲು ನಾನು ಇಂದು ಮಿಸ್ ಇಂಡಿಯಾ ವೇದಿಕೆಯಲ್ಲಿದ್ದೀನಿ' ಎಂದು ಹೇಳಿದ್ದಾರೆ.

  ಪ್ರಶಾಂತ್ ನೀಲ್ ಹೇಳಿದ ಸುಳ್ಳನ್ನು ಮಾದ್ಯಮಗಳ ಮುಂದೆ ಬಿಚ್ಚಿಟ್ಟ ರವಿ ಬಸ್ರೂರ್
  ಮಾನ್ಯಾ ಸಿಂಗ್ ಸಾಧನೆಗೆ ಸಿನಿ ಗಣ್ಯರ ಮೆಚ್ಚುಗೆ

  ಮಾನ್ಯಾ ಸಿಂಗ್ ಸಾಧನೆಗೆ ಸಿನಿ ಗಣ್ಯರ ಮೆಚ್ಚುಗೆ

  ಸಾಮಾನ್ಯ ಆಟೋ ಡ್ರೈವರ್ ಮಗಳಾಗಿ ಕಷ್ಟಪಟ್ಟು ಇಂದು ಇಡೀ ದೇಶದ ಹೃದಯ ಗೆದ್ದಿರುವ ಮಾನ್ಯಾ ಸಿಂಗ್ ಗೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ. ಸಿನಿ ಗಣ್ಯರು ಸಹ ಮಾನ್ಯಾ ಸಿಂಗ್ ಸಾಧನೆಗೆ ಹೆಮ್ಮೆ ಪಡುತ್ತಿದ್ದಾರೆ. ಮಾಜಿ ವಿಶ್ವ ಸುಂದರಿ ಮಾನುಷಿ ಚಿಲ್ಲರ್, ನಟಿ ಸಮಂತಾ ಸೇರಿದಂತೆ ಅನೇಕರು ಮಾನ್ಯಾ ಸಿಂಗ್ ಗೆ ಅಭಿನಂದನೆ ಸಲ್ಲಿಸಿದ್ದಾರೆ.

  English summary
  Miss India 2020 runner up Manya Singh daughter of an autodriver. she shares her life story.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X