For Quick Alerts
  ALLOW NOTIFICATIONS  
  For Daily Alerts

  ಅತ್ಯಾಚಾರ ಆರೋಪ: ಮಿಥುನ್ ಚಕ್ರವರ್ತಿ ಪುತ್ರ ಮಿಮೋಹ್ ಮದುವೆ ಕ್ಯಾನ್ಸಲ್.!

  By Harshitha
  |

  ಎಲ್ಲಾ ಅಂದುಕೊಂಡಂತೆ ನಡೆದಿದ್ದರೆ, ಜುಲೈ 7 ಅಂದ್ರೆ ನಿನ್ನೆ ಬಾಲಿವುಡ್ ನಟ ಮಿಥುನ್ ಚಕ್ರವರ್ತಿ ಪುತ್ರ ಮಹಾಕ್ಷಯ್ ಅಲಿಯಾಸ್ ಮಿಮೋಹ್ ಮದುವೆ ನಡೆಯಬೇಕಿತ್ತು. ಆದ್ರೆ, ಮಿಮೋಹ್ ವಿರುದ್ಧ ಅತ್ಯಾಚಾರ ಆರೋಪ ಕೇಳಿಬಂದ ಕಾರಣ ಅವರ ವಿವಾಹ ಮಹೋತ್ಸವ ಕ್ಯಾನ್ಸಲ್ ಆಗಿದೆ.

  ಊಟಿಯಲ್ಲಿರುವ ಐಷಾರಾಮಿ ಹೋಟೆಲ್ ನಲ್ಲಿ ಮಿಮೋಹ್ - ಮಾದಲಸಾ ಮದುವೆ ಸಿದ್ಧತೆ ನಡೆಯುತ್ತಿತ್ತು. ಆದ್ರೆ, ಅತ್ಯಾಚಾರ ಆರೋಪದ ಬಗ್ಗೆ ತನಿಖೆ ನಡೆಸಲು ಊಟಿಯ ಹೋಟೆಲ್ ಗೆ ಪೊಲೀಸರು ಆಗಮಿಸಿದ ಕಾರಣ ಮದುವೆ ಮುರಿದು ಬಿದ್ದಿದೆ. ವಧುವಿನ ಕಡೆಯವರು ತಮ್ಮ ಮನೆ ಕಡೆ ಮುಖ ಮಾಡಿದ್ದಾರೆ.

  ಮುಂದಿನ ತಿಂಗಳು ನಡೆಯಲಿದೆ ಮಿಥುನ್ ಚಕ್ರವರ್ತಿ ಮಗನ ವಿವಾಹ.!ಮುಂದಿನ ತಿಂಗಳು ನಡೆಯಲಿದೆ ಮಿಥುನ್ ಚಕ್ರವರ್ತಿ ಮಗನ ವಿವಾಹ.!

  ಮದುವೆಗೂ ನಾಲ್ಕು ದಿನಗಳ ಹಿಂದೆಯಷ್ಟೇ ಮಿಮೋಹ್ ವಿರುದ್ಧ ಅತ್ಯಾಚಾರದ ಆರೋಪ ಕೇಳಿಬಂತು. ''ನನ್ನನ್ನ ಮದುವೆ ಆಗುವುದಾಗಿ ನಂಬಿಸಿ ವಂಚಿಸಿದ್ದಾರೆ'' ಎಂದು ಮಿಮೋಹ್ ಹಾಗೂ ಆತನ ತಾಯಿ ನಟಿ ಯೋಗಿತಾ ಬಾಲಿ ವಿರುದ್ಧ ಯುವತಿ ನ್ಯಾಯಾಲಯದ ಮೆಟ್ಟಿಲೇರಿದ್ದರು.

  ಇದೇ ಪ್ರಕರಣಕ್ಕೆ ಸಂಬಂಧಪಟ್ಟಂತೆ ಜಾಮೀನು ನೀಡಲು ಮುಂಬೈ ಹೈಕೋರ್ಟ್ ನಿರಾಕರಿಸಿತು. ಬಳಿಕ ದೆಹಲಿ ಕೋರ್ಟ್ ಗೆ ಹೋದ್ಮೇಲೆ, ನಿರೀಕ್ಷಣಾ ಜಾಮೀನು ಲಭಿಸಿತು. ಈ ನಡುವೆ ನಿಗದಿ ಆಗಿದ್ದ ದಿನದಂದೇ ಮದುವೆ ನಡೆಸಲು ತಯಾರಿ ಕೂಡ ಮಾಡಿಕೊಳ್ಳಲಾಗಿತ್ತು.

  ಮದುವೆಗೆ 4 ದಿನ ಬಾಕಿ, ಈಗ ಸ್ಟಾರ್ ನಟನ ಮಗನ ವಿರುದ್ಧ ಅತ್ಯಾಚಾರ ಆರೋಪ.!ಮದುವೆಗೆ 4 ದಿನ ಬಾಕಿ, ಈಗ ಸ್ಟಾರ್ ನಟನ ಮಗನ ವಿರುದ್ಧ ಅತ್ಯಾಚಾರ ಆರೋಪ.!

  ಆದ್ರೆ, ಸಮಯಕ್ಕೆ ಸರಿಯಾಗಿ ತನಿಖೆಗೆಂದು ಪೊಲೀಸರು ಎಂಟ್ರಿಕೊಟ್ಟ ಕಾರಣ ಮದುವೆ ನಿಂತು ಹೋಗಿದೆ.

  ಏನಿದು ಪ್ರಕರಣ: ''ಮಿಥುನ್ ಚಕ್ರವರ್ತಿ ಪುತ್ರ ಮಿಮೋಹ್ ನನ್ನನ್ನ ಪ್ರೀತಿಸುತ್ತಿದ್ದ. ಮದುವೆ ಆಗುವುದಾಗಿ ನಂಬಿಸಿ, ವಂಚಿಸಿದ್ದಾನೆ'' ಎಂದು ನಟಿಯೊಬ್ಬರು ದೂರು ನೀಡಿದ್ದಾರೆ. ಆ ನಟಿಯ ಜೊತೆಗೆ ಮಿಮೋಹ್ ನಾಲ್ಕು ವರ್ಷಗಳಿಂದ ರಿಲೇಶನ್ ಶಿಪ್ ನಲ್ಲಿದ್ದರಂತೆ. ಒಂದು ಬಾರಿ ಆಕೆಗೆ ಗರ್ಭಪಾತ ಆಗಲು ಮಿಮೋಹ್ ಕಾರಣ ಎಂದು ದೂರಿನಲ್ಲಿ ಆ ನಟಿ ತಿಳಿಸಿದ್ದಾರೆ. ಆ ನಟಿಗೆ ಮಿಮೋಹ್ ತಾಯಿ ಯೋಗಿತಾ ಬಾಲಿ ಕೂಡ ಬೆದರಿಕೆ ಹಾಕಿದ್ರಿಂದ, ಅವರ ವಿರುದ್ಧವೂ ಪ್ರಕರಣ ದಾಖಲಾಗಿದೆ.

  English summary
  The marriage of Mithun Chakraborty's son Mimoh is cancelled after the arrival of Police to investigate a complaint of rape filed by a woman against Mimoh.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X