For Quick Alerts
  ALLOW NOTIFICATIONS  
  For Daily Alerts

  ನನ್ನ ಮುಂದೆ ಬೆತ್ತಲಾದರೆ ಸಿನಿಮಾಗೆ ಅವಕಾಶ: ನಿರ್ದೇಶಕನ ಕಾಮ ಪುರಾಣ ಬಿಚ್ಚಿಟ್ಟ ರೂಪದರ್ಶಿ

  |

  ಬಾಲಿವುಡ್ ನ ಖ್ಯಾತ ನಿರ್ದೇಶಕ ಸಾಜಿದ್ ಖಾನ್ ವಿರುದ್ಧ ಮತ್ತೊಂದು ಲೈಂಗಿಕ ಕಿರುಕುಳದ ಉರುಳು ಸುತ್ತಿಕೊಂಡಿದೆ. ಭಾರತದ ಖ್ಯಾತ ರೂಪದರ್ಶಿ ಪೌಲಾ, 'ಹೌಸ್ ಫುಲ್' ನಿರ್ದೇಶಕನ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. 17ನೇ ವಯಸ್ಸಿನಲ್ಲಿದ್ದಾಗ ನಿರ್ದೇಶಕ ಸಾಜಿದ್ ಖಾನ್ ಲೈಂಗಿಕ ಕಿರುಕುಳ ನೀಡಿದ್ದರು ಎಂದು ಪೌಲಾ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ.

  ಸಾಜಿದ್ ಖಾನ್ ವಿರುದ್ಧ ಅನೇಕ ನಟಿಮಣಿಯರು ಲೈಂಗಿಕ ಕಿರುಕುಳ ಆರೋಪ ಮಾಡಿದ್ದಾರೆ. ಭಾರತದಲ್ಲಿ ಮೀ ಟೂ ಅಭಿಯಾನ ಜೋರಾಗಿದ್ದ ಸಮಯದಲ್ಲಿ ಅನೇಕರು ಸಾಜಿದ್ ನ ಕಾಮಪುರಾಣ ಬಯಲಿಗೆಳೆದಿದ್ದರು. ಸಾಜಿದ್ ಖಾನ್ ನಿಂದ ಅನುಭವಿಸಿದ ಯಾತನೆಯನ್ನು ಬಹಿರಂಗಪಡಿಸಿದ್ದರು.

  ಬಿಪಾಶಾ ಬಸು ಬಳಿ 'ಫ್ಲರ್ಟ್' ಮಾಡಿ ಉಗಿಸಿಕೊಂಡಿದ್ದ ಹಿರಿಯ ನಿರ್ಮಾಪಕ!

  ನಟಿ ಸಲೋನಿ ಚೋಪ್ರಾ, ಸಿಮ್ರನ್ ಸೂರಿ, ಪತ್ರಕರ್ತೆ ಕರಿಷ್ಮಾ ಉಪಾಧ್ಯಾಯ, ನಟಿ ರೇಚಲ್ ವೈಟ್, ವಂದನಾ ಮತ್ತು ಬಿಪಾಶಾ ಬಸು ಸೇರಿದಂತೆ ಅನೇಕರು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಸಾಜಿದ್ ಖಾನ್ ವಿರುದ್ಧ ನಟಿಯರು ತಿರುಗಿ ಬೀಳುತ್ತಿದ್ದಂತೆ ಹೌಸ್ ಫುಲ್-4 ಸಿನಿಮಾ ನಿರ್ದೇಶನದಿಂದ ಸಾಜಿದ್ ಖಾನ್ ನನ್ನು ದೂರ ಇಡಲಾಗಿತ್ತು. ಇದೀಗ ಮತ್ತೋರ್ವ ರೂಪದರ್ಶಿ ಪೌಲಾ, ಸಾಜಿದ್ ಖಾನ್ ವಿರುದ್ಧ ಕಿಡಿಕಾರಿದ್ದಾರೆ. ಮುಂದೆ ಓದಿ...

   'ಹೌಸ್ ಫುಲ್' ಸಮಯದಲ್ಲಿ ನಡೆದ ಘಟನೆ

  'ಹೌಸ್ ಫುಲ್' ಸಮಯದಲ್ಲಿ ನಡೆದ ಘಟನೆ

  ಸಾಜಿದ್ ನಿರ್ದೇಶನದ 'ಹೌಸ್ ಫುಲ್' ಸಿನಿಮಾದ ಸಮಯದಲ್ಲಿ ಪೌಲಾ, ಸಾಜಿದ್ ನಿಂದ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದಾರಂತೆ. 'ಹೌಸ್ ಫುಲ್' ಸಿನಿಮಾದಲ್ಲಿ ನಟಿಸಲು ಅವಕಾಶ ನೀಡಬೇಕು ಎಂದರೆ ಪೌಲಾಗೆ ನನ್ನ ಮುಂದೆ ಬಟ್ಟೆ ಕಳಚಬೇಕು ಅಂತ ಸಾಜಿದ್ ಹೇಳಿದ್ದರಂತೆ. ಸಾಜಿದ್ ನಿಂದ ಅನುಭವಿಸಿದ ನೋವನ್ನು ಪೌಲಾ ಸಾಮಾಜಿಕ ಜಾಲತಾಣದಲ್ಲಿ ವಿವರವಾಗಿ ಬರೆದುಕೊಂಡಿದ್ದಾರೆ.

  ಅವಕಾಶಕ್ಕಾಗಿ ನಾಯಕ ನಟರ ಪಕ್ಕ ಮಲಗಲಿಲ್ಲ: ರವೀನಾ ಟಂಡನ್ ಬಿರುಸು ಮಾತು

   'ಆಗ ನಾನು ಮಾತನಾಡಲು ಧೈರ್ಯ ಮಾಡಲಿಲ್ಲ'

  'ಆಗ ನಾನು ಮಾತನಾಡಲು ಧೈರ್ಯ ಮಾಡಲಿಲ್ಲ'

  "ಮೀ ಟೂ ಅಭಿಯಾನ ಪ್ರಾರಂಭವಾದಾಗ ಅನೇಕರು ಸಾಜಿದ್ ಖಾನ್ ಬಗ್ಗೆ ಮಾತನಾಡಿದ್ದಾರೆ. ಆದರೆ ನಾನು ಆಗ ಮಾತನಾಡಲು ಧೈರ್ಯ ಮಾಡಲಿಲ್ಲ. ಏಕೆಂದರೆ ಕುಟುಂಬಕ್ಕಾಗಿ ನಾನು ಸಂಪಾದನೆ ಮಾಡುತ್ತಿದ್ದೆ. ಹಾಗಾಗಿ ಸುಮ್ಮನಿದ್ದೆ. ಈಗ ನನ್ನ ಜೊತೆ ನನ್ನ ಪೋಷಕರಿಲ್ಲ. ನಾನು ಈಗ ನನಗಾಗಿ ಸಂಪಾದಿಸುತ್ತಿದ್ದೇನೆ. ಈಗ ನನಗೆ ಮಾತನಾಡಲು ಧೈರ್ಯವಿದೆ." ಎಂದಿದ್ದಾರೆ.

   'ಆಗಿನ್ನು 17 ವರ್ಷ, ಬಟ್ಟೆ ಕಳಚುವಂತೆ ಹೇಳಿದ್ದರು..'

  'ಆಗಿನ್ನು 17 ವರ್ಷ, ಬಟ್ಟೆ ಕಳಚುವಂತೆ ಹೇಳಿದ್ದರು..'

  "ನಾನು 17ನೇ ವಯಸ್ಸಿನಲ್ಲಿದ್ದಾಗ ಸಾಜಿದ್ ಖಾನ್ ನಿಂದ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದೆ ಎಂದು ಹೇಳಿದ್ದಾರೆ. ನನ್ನ ಜೊತೆ ಕೆಟ್ಟದಾಗಿ ಮಾತನಾಡಿದರು. ನನ್ನನ್ನು ಕೆಟ್ಟದಾಗಿ ಮುಟ್ಟಲು ಪ್ರಯತ್ನಿಸಿದರು. ಮುಂಬರುವ 'ಹೌಸ್ ಫುಲ್' ಸಿನಿಮಾಗೆ ಅವಕಾಶ ಬೇಕು ಎಂದರೆ ಅವರ ಮುಂದೆ ಬಟ್ಟೆ ಬಿಚ್ಚುವಂತೆ ಹೇಳಿದರು" ಎಂದು ಹೇಳಿದ್ದಾರೆ.

  ಸುಶಾಂತ್ ಸಿಂಗ್ ವಿರುದ್ಧದ ಮೀ ಟೂ ಆರೋಪ: ಮೌನ ಮುರಿದ ಸಂಜನಾ

   'ಈ ಘಟನೆ ನನ್ನ ಮೇಲೆ ಕೆಟ್ಟ ಪರಿಣಾಮ ಬೀರಿದೆ'

  'ಈ ಘಟನೆ ನನ್ನ ಮೇಲೆ ಕೆಟ್ಟ ಪರಿಣಾಮ ಬೀರಿದೆ'

  "ಎಷ್ಟು ಹೆಣ್ಣು ಮಕ್ಕಳಿಗೆ ಹೀಗೆ ಮಾಡಿದ್ದಾರೆ ಎನ್ನುವುದು ದೇವರಿಗೆ ಗೊತ್ತು. ಈಗ ಹೇಳುವ ಮೂಲಕ ಕರುಣೆ ತೋರಲಿ ಅಂತಲ್ಲ. ಬಾಲ್ಯದಲ್ಲಾದ ಈ ಘಟನೆ ನನ್ನ ಮೇಲೆ ತುಂಬಾ ಕೆಟ್ಟ ಪರಿಣಾಮ ಬೀರಿದೆ. ಹಾಗಾಗಿ ಈ ಹೇಳಲು ನಿರ್ಧರಿಸಿದ್ದೇನೆ" ಎಂದು ಹೇಳಿದ್ದಾರೆ.

  Rakesh Adiga spiritual Rap , ಕನ್ನಡಧ Rapperಗಳಿಗೆ ಕಿವಿಮಾತು | Filmibeat Kannada
   ಇಂಥವರನ್ನು ಜೈಲಿಗೆ ಕಳುಹಿಸಬೇಕು

  ಇಂಥವರನ್ನು ಜೈಲಿಗೆ ಕಳುಹಿಸಬೇಕು

  "ಇಂಥವರನ್ನು ಜೈಲಿಗೆ ಕಳುಹಿಸಬೇಕು. ಇವರು ಕಾಸ್ಟಿಂಗ್ ಕೌಚ್ ಮಾತ್ರವಲ್ಲದೇ, ಕನಸುಗಳನ್ನು ನುಚ್ಚುನೂರು ಮಾಡುತ್ತಾರೆ. ಆದರೆ ನಾನು ಸುಮ್ಮನಿರಲಿಲ್ಲ. ಇದರ ಬಗ್ಗೆ ಮಾತನಾಡದೆ ಇರುವುದು ತಪ್ಪು" ಎಂದಿದ್ದಾರೆ. ಪೌಲಾ ಯಾವುದೇ ಸಿನಿಮಾಗಳಲ್ಲಿ ಅಭಿನಯಿಸದಿದ್ದರೂ ಸಾಮಾಜಿಕ ಜಾಲತಾಣದಲ್ಲಿ ಆಕ್ವೀವ್ ಆಗಿದ್ದಾರೆ. ಮಾಡೆಲಿಂಗ್ ಮೂಲಕ ಗುರುತಿಸಿಕೊಂಡಿದ್ದಾರೆ.

  English summary
  Indian model Paula accused director Sajid Khan of Sexual Harassment. She says that He Asked me to trip for getting role of Housefull.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X