For Quick Alerts
  ALLOW NOTIFICATIONS  
  For Daily Alerts

  ಮದುಗೆ ಬಳಿಕ ಶೂಟಿಂಗ್‌ಗೆ ಹಾಜರಾದ ನಯನತಾರಾ!

  |

  ಸೌತ್ ಚಿತ್ರರಂಗದ ಲೇಡಿ ಸೂಪರ್ ಸ್ಟಾರ್ ನಯನತಾರಾ ಮದುವೆಯಾಗಿ ಕೆಲವು ದಿನಗಳು ಮಾತ್ರವೇ ಕಳೆದಿದೆ. ಖ್ಯಾತ ತಮಿಳು ನಿರ್ದೇಶಕ, ನಿರ್ಮಾಪಕ ವಿಘ್ನೇಶ್ ಶಿವನ್ ಅವರನ್ನು ಪ್ರೀತಿಸಿ ಮದುವೆಯಾಗಿದ್ದಾರೆ. ಸುಮಾರು ಏಳು ವರ್ಷಗಳಿಂದ ಇಬ್ಬರೂ ಡೇಟಿಂಗ್ ನಡೆಸುತ್ತಿದ್ದು ಈಗ ಮದುವೆ ಆಗಿದ್ದಾರೆ.

  ನಯನತಾರಾ ಮದುವೆಯಾದ ನಂತರ ಬ್ರೇಕ್ ಪಡೆದುಕೊಳ್ಳುತ್ತಾರೆ ಎನ್ನಲಾಗಿತ್ತು. ಬ್ರೇಕ್ ಸಲುವಾಗಿ ನಯನತಾರಾ ಸಿನಿಮಾ ಶೂಟಿಂಗ್ ಮುಂದೂಡಿದ್ದಾರೆ ಮತ್ತು ಯಾವುದೇ ಹೊಸ ಸಿನಿಮಾ ಒಪ್ಪಿಕೊಂಡಿಲ್ಲ, ಎಂದು ಹೇಳಲಾಗಿತ್ತು. ಅದರೆ ಬ್ರೇಕ್ ತೆಗೆದುಕೊಳ್ಳದ ನಯನತಾರ ಶೂಟಿಂಗ್‌ಗೆ ಮರಳಲು ಕೂಡ ಹೆಚ್ಚು ಸಮಯ ತೆಗೆದುಕೊಂಡಿಲ್ಲ.

  ನಯನತಾರ ಮಾಡಿದ ತಪ್ಪಿಗೆ ಕ್ಷಮೆಯಾಚಿಸಿದ ಪತಿ ವಿಘ್ನೇಶ್ ಶಿವನ್!ನಯನತಾರ ಮಾಡಿದ ತಪ್ಪಿಗೆ ಕ್ಷಮೆಯಾಚಿಸಿದ ಪತಿ ವಿಘ್ನೇಶ್ ಶಿವನ್!

  ಸರಣಿ ಸಿನಿಮಾಗಳಲ್ಲಿ ಈ ಜೋಡಿ ಬ್ಯುಸಿ ಇದೆ. ನಯನತಾರಾ ಪತಿಯೊಂದಿಗೆ ಥಾಯ್ಲೆಂಡ್ಗೆ ತೆರಳಿದ್ದರು. ಅಲ್ಲಿನ ಫೊಟೋಗಳನ್ನು ಕೂಡ ನಯನತಾರ, ವಿಗ್ನೇಶ್ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಈಗ ಹನಿಮೂನ್‌ನಿಂದ ಮರಳಿ ಬಂದಿದ್ದು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

  ನಯನತಾರಾ ಶಾರುಖ್ ಖಾನ್ ನಾಯಕನಾಗಿ ನಟಿಸುತ್ತಿರುವ 'ಜವಾನ್' ಸಿನಿಮಾದಲ್ಲಿ ನಟಸುತ್ತಿದ್ದಾರೆ. ಇದೇ ಚಿತ್ರದ ಶೂಟಿಂಗ್‌ಗಾಗಿ ಮತ್ತೆ ಮರಳಿದ್ದಾರೆ. ಥಾಯ್ಲೆಂಡ್‌ನಿಂದ ಬಂದಿರು ನಯನತಾರ 'ಜವಾನ್' ಸಿನಿಮಾದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ.

  ಮದುವೆಯಾದ ಮರು ದಿನವೇ ವಿವಾದಕ್ಕೆ ಸಿಲುಕಿದ ನಯನತಾರಾ ಮಾಡಿದ್ದಾರು ಏನು?ಮದುವೆಯಾದ ಮರು ದಿನವೇ ವಿವಾದಕ್ಕೆ ಸಿಲುಕಿದ ನಯನತಾರಾ ಮಾಡಿದ್ದಾರು ಏನು?

  ಹನಿಮೂನ್ ಮುಗಿಸಿ ನಯನತಾರಾ ನೇರವಾಗಿ ಶಾರುಖ್ ಖಾನ್ ಸಿನಿಮಾ ಲೊಕೇಶನ್ ಗೆ ತೆರಳಿದ್ದಾರೆ. ಮುಂಬೈ ಫಿಲಂ ಸಿಟಿಯಲ್ಲಿ ನಡೆಯುತ್ತಿರುವ 'ಜವಾನ್' ಚಿತ್ರದ ಸೆಟ್‌ಗೆ ತೆರಲಿದ್ದಾರೆ. ನಯನತಾರಾ 'ಜವಾನ್' ಚಿತ್ರದ ಮೂಲಕ ಶಾರುಖ್ ಖಾನ್ ಜೊತೆ ಬಾಲಿವುಡ್‌ಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ತಮಿಳಿನ ನಿರ್ದೇಶಕ ಅಟ್ಲಿ ಮತ್ತು ಬಾಲಿವುಡ್ ಬಾದ್ಶಾ ಶಾರುಖ್ ಕಾಂಬಿನೇಷನ್ನ ಪ್ಯಾನ್ ಇಂಡಿಯಾ ಚಿತ್ರ ಜವಾನ್ ಶೂಟಿಂಗ್​ ಮುಂಬೈನಲ್ಲಿ ನಡೆಯುತ್ತಿದೆ.

  Nayanthara Back To Shooting, Joind Jawan Shooting

  ಜವಾನ್ ಸಿನಿಮಾ ಶೂಟಿಂಗ್ ನಲ್ಲಿ ಒಂಬತ್ತು ಶೆಡ್ಯೂಲ್ ಗಳಿದ್ದ ಕಾರಣ ಹನಿಮೂನ್ ಮುಗಿಸಿ ವಾಪಸ್ ಬಂದ ತಕ್ಷಣ ಶೂಟಿಂಗ್ ಗಾಗಿ ಮುಂಬೈಗೆ ತೆರಳಿದ್ದಾರೆ. ನಯನತಾರಾ ಇತ್ತೀಚೆಗೆ ಜೂನ್ 9 ರಂದು ವಿವಾಹವಾಗಿದ್ದಾರೆ. ಮದುವೆಯ ನಂತರ ಮೊದಲು ತಿರುಮಲಕ್ಕೆ ಹೋಗಿ ವೆಂಕಟೇಶ್ವರಸ್ವಾಮಿಯ ದರ್ಶನ ಪಡೆದ ದಂಪತಿಗಳು ಹನಿಮೂನ್ಗಾಗಿ ಥಾಯ್ಲೆಂಡ್‌ಗೆ ತೆರಳಿದ್ದರು.

  English summary
  Nayanthara Back To Shooting, Joind Jawan Shooting, Know More,
  Wednesday, June 29, 2022, 9:58
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X