For Quick Alerts
  ALLOW NOTIFICATIONS  
  For Daily Alerts

  ಎರಡನೇ ಮಗುವಿಗೆ ಜನ್ಮ ನೀಡಿದ ನೇಹಾ ಧೂಪಿಯಾ-ಅಂಗದ್ ಬೇಡಿ ದಂಪತಿ

  |

  ಬಾಲಿವುಡ್ ತಾರಾ ದಂಪತಿ ನೇಹಾ ಧೂಪಿಯಾ ಮತ್ತು ಅಂಗದ್ ಬೇಡಿ ಎರಡನೇ ಮಗುವನ್ನು ಸ್ವಾಗತಿಸಿದ್ದಾರೆ. ಭಾನುವಾರ (ಅಕ್ಟೋಬರ್ 3) ಖಾಸಗಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ಕೊಟ್ಟಿದ್ದಾರೆ ನಟಿ ನೇಹಾ ಧೂಪಿಯಾ.

  ಈಗಾಗಲೇ ಎರಡು ವರ್ಷದ ಹೆಣ್ಣು ಮಗುವಿನ ತಾಯಿಯಾಗಿರುವ ನೇಹಾ ಧೂಪಿಯಾ ಎರಡನೇ ಸಲ ಗರ್ಭಿಣಿಯಾಗಿರುವ ಬಗ್ಗೆ ಜುಲೈ ತಿಂಗಳಲ್ಲಿ ಖಚಿತಪಡಿಸಿದ್ದರು.

  ಮದುವೆ ಆಗಿ ಆರು ತಿಂಗಳಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿದ ನಟಿಮದುವೆ ಆಗಿ ಆರು ತಿಂಗಳಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿದ ನಟಿ

  ಗಂಡು ಮಗು ಆಗಿದ ಎಂಬ ಸಂತಸವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ನಟ ಅಂಗದ್ ಬೇಡಿ, ''ಹೇ ಗಂಡು ಮಗು. ತಾಯಿ ಮತ್ತು ಮಗು ಇಬ್ಬರ ಆರೋಗ್ಯವಾಗಿದ್ದಾರೆ. ಇನ್ಮುಂದೆ ನಮ್ಮ ಕುಟುಂಬದಲ್ಲಿ ನಾವು ನಾಲ್ಕು ಜನ'' ಎಂದು ಪೋಸ್ಟ್ ಹಾಕಿದ್ದಾರೆ.

  ಅಂಗದ್ ಬೇಡಿ ಮತ್ತು ನೇಹಾ ಧೂಪಿಯಾ ಎರಡನೇ ಮಗು ಸ್ವಾಗತಿಸಿದ ವಿಷಯ ತಿಳಿಯುತ್ತಿದ್ದಂತೆ ಇಂಡಸ್ಟ್ರಿ ಆಪ್ತರು, ಸ್ನೇಹಿತರು ಸಾಮಾಜಿಕ ಜಾಲತಾಣದಲ್ಲಿ ಶುಭಕೋರಿದ್ದಾರೆ. ನಟಿ ಸೋಹಾ ಅಲಿ ಖಾನ್ ಆಸ್ಪತ್ರೆಗೆ ಭೇಟಿ ನೀಡಿ ನೇಹಾ ಆರೋಗ್ಯ ವಿಚಾರಿಸಿದ್ದಾರೆ. ಅಷ್ಟೇ ಅಲ್ಲ ಅಸ್ಪತ್ರೆಯಿಂದಲೇ ಫೋಟೋ ಸಹ ಶೇರ್ ಮಾಡಿ 'ದಂಪತಿಗಳಿಗೆ ಶುಭಾಶಯ ಕೋರಿದ್ದಾರೆ.

  2018ರ ಮೇ ತಿಂಗಳಲ್ಲಿ ವಿವಾಹ

  ನಟಿ ನೇಹಾ ಧೂಪಿಯಾ ಮತ್ತು ನಟ ಅಂಗದ್ ಬೇಡಿ ಬಹಳ ವರ್ಷಗಳಿಂದಲೂ ಸ್ನೇಹಿತರಾಗಿದ್ದರು. ಆ ಸ್ನೇಹ ಪ್ರೀತಿಯಾಯಿತು. ಬಳಿಕ ಇಬ್ಬರು ಮದುವೆಯಾಗಲು ನಿರ್ಧರಿಸಿದ 2018ರ ಮೇ ತಿಂಗಳಲ್ಲಿ ವೈವಾಹಿಕ ಬದುಕು ಆರಂಭಿಸಿದರು. ಮದುವೆಯಾದ ಆರೇ ತಿಂಗಳಲ್ಲಿ ಚೊಚ್ಚಲ ಮಗುವಿಗೆ ಜನ್ಮ ನೀಡಿದರು. ವಿವಾಹಕ್ಕೂ ಮುಂಚೆಯೇ ಗರ್ಭಿಣಿಯಾಗಿದ್ದ ಸುದ್ದಿ ಬಹಳ ವೈರಲ್ ಆಗಿತ್ತು.

  ಐವರು ಬಾಯ್‌ಫ್ರೆಂಡ್ಸು, ಒಬ್ಬ ಗಂಡ: ನೇಹಾ ದೂಪಿಯಾಐವರು ಬಾಯ್‌ಫ್ರೆಂಡ್ಸು, ಒಬ್ಬ ಗಂಡ: ನೇಹಾ ದೂಪಿಯಾ

  ಮೇ ತಿಂಗಳಲ್ಲಿ ಮದುವೆಯಾದರು. ನವೆಂಬರ್ ತಿಂಗಳಲ್ಲಿ ಹೆಣ್ಣು ಮಗುವಿಗೆ ಜನ್ಮ ಕೊಟ್ಟರು. ಆ ಮಗುವಿಗೆ ಮೆಹ್ರಾ ಎಂದು ನಾಮಕರಣ ಮಾಡಲಾಗಿದೆ. ಈಗ ಎರಡನೇ ಮಗು ಸ್ವಾತಿಸಿದ್ದು, ಕುಟುಂಬ ಸಂತಸದಲ್ಲಿದೆ.

  2011 ರಲ್ಲಿ ಬಿಡುಗಡೆ ಆದ 'ಫಾಲ್ತು' ಸೇರಿದಂತೆ 'ಪಿಂಕ್', 'ಟೈಗರ್ ಜಿಂದಾ ಹೇ' ಚಿತ್ರಗಳಲ್ಲಿ ಅಂಗದ್ ಸಿಂಗ್ ಬೇಡಿ ಅಭಿನಯಿಸಿದ್ದಾರೆ. ಕಿರುತೆರೆಯ 'ಎಮೋಷನಲ್ ಅತ್ಯಾಚಾರ' ಸೇರಿದಂತೆ ಹಲವು ಶೋಗಳಿಗೆ ಹೋಸ್ಟ್ ಆಗಿದ್ದವರು ಅಂಗದ್ ಸಿಂಗ್ ಬೇಡಿ. 2002 ರಲ್ಲಿ ಮಿಸ್ ಇಂಡಿಯಾ ಕಿರೀಟ ತೊಟ್ಟ ನೇಹಾ ಧೂಪಿಯಾ 2003 ರಲ್ಲಿ ಬಾಲಿವುಡ್ ಗೆ ಪದಾರ್ಪಣೆ ಮಾಡಿದರು. 'ಕ್ಯಾ ಕೂಲ್ ಹೇ ಹಮ್', 'ದಸ್ ಕಹಾನಿಯಾ', 'ಚುಪ್ ಚುಪ್ ಕೇ', 'ಸಿಂಗ್ ಈಸ್ ಕಿಂಗ್' ಸೇರಿದಂತೆ ಹಲವು ಸಿನಿಮಾಗಳಲ್ಲಿ ನೇಹಾ ಧೂಪಿಯಾ ಅಭಿನಯಿಸಿದ್ದಾರೆ.

  English summary
  Bollywood Actress neha dhupia and angad bedi welcome a baby boy on october 3rd.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X