For Quick Alerts
  ALLOW NOTIFICATIONS  
  For Daily Alerts

  ಸುಶಾಂತ್ ಸಾವಿಗೆ ಡ್ರಗ್ ಮಾಫಿಯಾ ನಂಟು: ಡ್ರಗ್ ಮಾರಾಟದಲ್ಲಿ ರಿಯಾ ಭಾಗಿ?

  |

  ಸುಶಾಂತ್ ಸಾವು ಹಲವು ತಿರುವುಗಳನ್ನು ತೆಗೆದುಕೊಳ್ಳುತ್ತಲೇ ಇದೆ. ದಿನಗಳೆದಂತೆ ಪ್ರಕರಣದ ನಿಗೂಢತೆ ಹೆಚ್ಚಾಗುತ್ತಲೇ ಇದೆ.

  ಮಲೇಷಿಯಾದಲ್ಲಿ Brahma ಚಿತ್ರದ ರೊಮ್ಯಾಂಟಿಕ್ ಹಾಡು ತಯಾರಾಗಿದ್ದು ಹೀಗೆ | Romantic Scenes | Filmibeat Kannada

  ಹೊಸ ವರದಿಗಳ ಪ್ರಕಾರ ಸುಶಾಂತ್ ಸಾವಿಗೆ ಡ್ರಗ್ ಮಾಫಿಯಾದ ಸಂಪರ್ಕ ಸಹ ಕಾರಣವಿರಬಹುದು ಎನ್ನಲಾಗುತ್ತಿದೆ. ಅನುಮಾನಕ್ಕೆ ಕಾರಣವಾದ ಕೆಲವು ಅಂಶಗಳು ಸಹ ಬೆಳಕಿಗೆ ಬಂದಿವೆ.

  ಕೇವಲ ಅರ್ಧ ಸಂಭಾವನೆ ಪಡೆದು 'ದಿಲ್ ಬೆಚರಾ' ಚಿತ್ರ ಮಾಡಿದ್ದರು ಸುಶಾಂತ್ ಸಿಂಗ್, ಏಕೆ? ಕೇವಲ ಅರ್ಧ ಸಂಭಾವನೆ ಪಡೆದು 'ದಿಲ್ ಬೆಚರಾ' ಚಿತ್ರ ಮಾಡಿದ್ದರು ಸುಶಾಂತ್ ಸಿಂಗ್, ಏಕೆ?

  ಮಾಜಿ ಕೇಂದ್ರ ಸಚಿವ, ಬಿಜೆಪಿಯ ಪ್ರಮುಖ ಸುಬ್ರಹ್ಮಣಿಯನ್ ಸ್ವಾಮಿ ಅವರು ಈ ಅನುಮಾನವೊಂದನ್ನು ಹೊರಹಾಕಿದ್ದು, 'ದುಬೈನ ಮಾದಕ ವಸ್ತು ಮಾರಾಟಗಾರ ಆಯುಷ್ ಖಾನ್ ಅನ್ನು ಸುಶಾಂತ್ ಸಿಂಗ್ ಭೇಟಿಯಾದ ದಿನವೇ ಸುಶಾಂತ್ ಸಾವಾಗಿದೆ ಇದಕ್ಕೆ ಏನು ಕಾರಣ?' ಎಂದು ಪ್ರಶ್ನೆ ಮಾಡಿದ್ದಾರೆ. ಹಿರಿಯ ನ್ಯಾಯವಾದಿಯೂ ಆಗಿರುವ ಅವರ ಅನುಮಾನವನ್ನು ಸುಮ್ಮನೇ ನಿರ್ಲಕ್ಷಿಸಲು ಸಾಧ್ಯವಿಲ್ಲ.

  ಮಾದಕ ವಸ್ತು ಬಳಸುತ್ತಿದ್ದರೇ ರಿಯಾ?

  ಮಾದಕ ವಸ್ತು ಬಳಸುತ್ತಿದ್ದರೇ ರಿಯಾ?

  ಸುಶಾಂತ್ ಸಿಂಗ್ ಪ್ರೇಯಸಿ ರಿಯಾ ಗೆ ಮಾದಕ ವಸ್ತು ಮಾಫಿಯಾ ಜೊತೆಗೆ ಸಂಪರ್ಕವಿತ್ತು ಎನ್ನಲಾಗಿದೆ. ರಿಯಾ 'ಮಾದಕ ವಸ್ತು ಬಳಸುತ್ತಿದ್ದರು ಹಾಗೂ ಮಾದಕ ವಸ್ತು ವ್ಯವಹಾರ ಮಾಡುತ್ತಿದ್ದರು' ಎಂದು ಕೆಲವು ಮಾಧ್ಯಮಗಳು ಹೇಳಿವೆ. ಇದರ ಸತ್ಯಾಸತ್ಯತೆ ಸಿಬಿಐ ನವರೇ ಹೇಳಬೇಕಿದೆ.

  ಮಾದಕ ವಸ್ತುವಿನ ಬಳಕೆ ಮತ್ತು ವ್ಯಾಪಾರ?

  ಮಾದಕ ವಸ್ತುವಿನ ಬಳಕೆ ಮತ್ತು ವ್ಯಾಪಾರ?

  ರಿಯಾ ಮಾದಕ ವಸ್ತುವಿನ ಬಳಕೆ ಹಾಗೂ ವ್ಯಾಪಾರದಲ್ಲಿ ಭಾಗಿಯಾಗಿದ್ದಾರೆಂಬ ಅನುಮಾನವು ಅವರ ವಾಟ್ಸ್‌ಆಪ್‌ ಚಾಟ್‌ನಿಂದಲೇ ಗೊತ್ತಾಗಿದೆ ಎನ್ನಲಾಗುತ್ತಿದೆ. ಜಾರಿ ನಿರ್ದೇಶನಾಲಯವು ರಿಯಾ ಅವರ ವಾಟ್ಸ್‌ಆಪ್ ಚಾಟ್‌ ಅನ್ನು ಪಡೆದು ತನಿಖೆ ನಡೆಸಿದೆ. ಸಿಬಿಐ ಹಾಗೂ ಮಾದಕ ವಸ್ತು ನಿಯಂತ್ರಣ ಇಲಾಖೆ ಜೊತೆಗೂ ಇದನ್ನು ಹಂಚಿಕೊಂಡಿದೆ.

  ಸುಶಾಂತ್ ಗೆಳೆಯ ಸಂದೀಪ್‌ನನ್ನು ಬಂಧಿಸಲು ಒತ್ತಾಯ

  ಸುಶಾಂತ್ ಗೆಳೆಯ ಸಂದೀಪ್‌ನನ್ನು ಬಂಧಿಸಲು ಒತ್ತಾಯ

  ಸುಬ್ರಹ್ಮಣಿಯನ್ ಸ್ವಾಮಿ ಅವರು ಸುಶಾಂತ್ ಸಿಂಗ್ ಪ್ರಕರಣದ ಮೇಲೆ ವಿಶೇಷ ಆಸಕ್ತಿ ವಹಿಸಿದ್ದು, ಸುಶಾಂತ್ ಸಿಂಗ್ ಗೆಳೆಯ ಸಂದೀಪ್ ಸಿಂಗ್ ಅನ್ನು ಸಹ ಬಂಧಿಸಬೇಕು ಹಾಗೂ ಆತ ಎಷ್ಟು ಬಾರಿ ದುಬೈಗೆ ಭೇಟಿ ನೀಡಿದ್ದ ಎಂಬ ವಿಚಾರಣೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ. ಸಂದೀಪ್‌ ನೇ ಸುಶಾಂತ್‌ಗೆ ಮಾದಕ ವಸ್ತು ತಂದುಕೊಡುತ್ತಿದ್ದ ಎಂದು ಆರೋಪಿಸಲಾಗುತ್ತಿದೆ.

  ಸಿಬಿಐ ತನಿಖೆ ನಡೆಸುತ್ತಿದೆ

  ಸಿಬಿಐ ತನಿಖೆ ನಡೆಸುತ್ತಿದೆ

  ಈ ನಡುವೆ ಸಿಬಿಐ ಸುಶಾಂತ್ ಸಿಂಗ್ ಮುಂಬೈ ನಿವಾಸದ ಸಿಬ್ಬಂದಿಯನ್ನು ವಿಚಾರಣೆ ನಡೆಸಿದ್ದಾರೆ. ಸುಶಾಂತ್ ಕುಟುಂಬ ಸದಸ್ಯರನ್ನೂ ಸಹ ವಿಚಾರಣೆ ನಡೆಸಿದ್ದಾರೆ. ಜಾರಿ ನಿರ್ದೇಶನಾಲಯದ ಅಧಿಕಾರಿಗಳನ್ನು ಸಿಬಿಐ ತಂಡ ಭೇಟಿ ಮಾಡಿದ್ದು, ಸುಶಾಂತ್ ಪ್ರಕರಣ ಕುರಿತಂತೆ ಅವರಿಂದಲೂ ಮಾಹಿತಿ ಕ್ರೂಡೀಕರಣ ಮಾಡಿದ್ದಾರೆ.

  English summary
  New angle emerged in Sushant Singh's death case. Alleged that Rhea using and dealing drugs. Sushant's friend use to sell him drugs.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X