For Quick Alerts
  ALLOW NOTIFICATIONS  
  For Daily Alerts

  ರಿಯಾ ಚಕ್ರವರ್ತಿ ಜೊತೆ ನಾನು ಸಿನಿಮಾ ಮಾಡುತ್ತೇನೆ ಎಂದ ನಿರ್ಮಾಪಕ

  |

  ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದಲ್ಲಿ ನಟಿ ರಿಯಾ ಚಕ್ರವರ್ತಿ ವಿರುದ್ಧ ಹಲವು ರೀತಿ ಟೀಕೆಗಳು ವ್ಯಕ್ತವಾಗಿದೆ. ತನಿಖೆ ವೇಳೆ ಡ್ರಗ್ ವಿಚಾರವೂ ಬೆಳಕಿಗೆ ಬಂದಿದ್ದು, ಈ ಹಿನ್ನೆಲೆಯಲ್ಲಿ ರಿಯಾ ಅವರನ್ನು ಮಂಗಳವಾರ ಎನ್‌ಸಿಬಿ (ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ) ಅಧಿಕಾರಿಗಳು ಬಂಧಿಸಿದ್ದಾರೆ.

  ರಿಯಾ ಚಕ್ರವರ್ತಿ ಬಂಧನಕ್ಕೆ ವಿರೋಧವೂ ವ್ಯಕ್ತವಾಗಿದೆ. ಬಿಟೌನ್ ಖ್ಯಾತ ನಟಿಯರಾದ ಕರೀನಾ ಕಪೂರ್, ಸೋನಮ್ ಕಪೂರ್, ವಿದ್ಯಾ ಬಾಲನ್, ರಾಧಿಕಾ ಮದನ್ ಸೇರಿದಂತೆ ಹಲವರು ರಿಯಾ ಪರ ಬೆಂಬಲ ವ್ಯಕ್ತಪಡಿಸಿದ್ದಾರೆ. ಸುಶಾಂತ್ ಪ್ರಕರಣದಲ್ಲಿ ಆರೋಪಿಯಂತೆ ಬಿಂಬಿತವಾಗಿರುವ ರಿಯಾಗೆ ಸಿನಿ ಜೀವನ ಮುಗಿತು ಎಂಬ ಮಾತು ಸಹ ಚರ್ಚೆಯಾಗ್ತಿದೆ. ಈ ನಡುವೆ ರಿಯಾ ಜೊತೆ ಕೆಲಸ ಮಾಡುವ ಉತ್ಸುಕ ತೋರಿದ್ದಾರೆ ಯುವ ನಿರ್ಮಾಪಕ. ಯಾರದು? ಮುಂದೆ ಓದಿ....

  #JusticeForRhea ಟ್ರೆಂಡ್: ಸುಶಾಂತ್ ಪ್ರೇಯಸಿಯ ಪರ ನಿಂತ ಬಾಲಿವುಡ್ ಸ್ಟಾರ್ಸ್#JusticeForRhea ಟ್ರೆಂಡ್: ಸುಶಾಂತ್ ಪ್ರೇಯಸಿಯ ಪರ ನಿಂತ ಬಾಲಿವುಡ್ ಸ್ಟಾರ್ಸ್

  ಎಲ್ಲ ಮುಗಿದ ಮೇಲೆ ಸಿನಿಮಾ ಮಾಡೋಣ

  ಎಲ್ಲ ಮುಗಿದ ಮೇಲೆ ಸಿನಿಮಾ ಮಾಡೋಣ

  ''ನಾನು ಯಾರು ಎಂದು ನಿಮಗೆ ತಿಳಿದಿರಲ್ಲ. ನೀವು ಯಾವ ರೀತಿಯ ವ್ಯಕ್ತಿ ಎಂದು ನನಗೆ ತಿಳಿದಿಲ್ಲ. ಇದೆಲ್ಲ ಮುಗಿದ ಮೇಲೆ ನಾನು ನಿಮ್ಮ ಜೊತೆ ಸಿನಿಮಾ ಮಾಡಲು ಆಸಕ್ತಿ ಹೊಂದಿದ್ದೇನೆ'' ಎಂದು ನಟ-ನಿರ್ಮಾಪಕ ನಿಖಿಲ್ ದ್ವಿವೇದಿ ಟ್ವೀಟ್ ಮಾಡಿದ್ದಾರೆ.

  ರಿಯಾ ಬೆಂಬಲಿಸಿದ್ದಕ್ಕೆ ತರಾಟೆ

  ರಿಯಾ ಬೆಂಬಲಿಸಿದ್ದಕ್ಕೆ ತರಾಟೆ

  ಸುಶಾಂತ್ ಸಿಂಗ್ ರಜಪೂತ್ ಸಾವಿನ ತನಿಖೆ ಬೆಂಬಲಿಸಿ ಟ್ವೀಟ್ ಮಾಡಿಲ್ಲ, ಈಗ ರಿಯಾ ಚಕ್ರವರ್ತಿ ಅವರನ್ನು ಬೆಂಬಲಿಸಿದ್ದಕ್ಕೆ ಹಲವರು ನಿಖಿಲ್ ದ್ವಿವೇದಿ ಅವರನ್ನು ಟೀಕಿಸುತ್ತಿದ್ದಾರೆ. 'ಮಾದಕ ದ್ರವ್ಯಗಳನ್ನು ಸೇವಿಸಿದ್ದಕ್ಕಾಗಿ ಆಕೆಯನ್ನು ಎನ್‌ಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ. ದಯವಿಟ್ಟು ಅವಳನ್ನು ಹೀರೋ ಮಾಡಬೇಡಿ. ನಮ್ಮ ಮುಂದಿನ ಪೀಳಿಗೆಯನ್ನು ಹಾಳು ಮಾಡಬೇಡಿ. ನೀವು ಬಾಲಿವುಡ್‌ನ ಒಂದು ವಿವೇಕದ ಧ್ವನಿ ಎಂದು ನಾನು ಭಾವಿಸಿದೆ.ಇಷ್ಟು ಬೇಗ ನಿಮ್ಮ ಮುಖವಾಡ ಬಿಚ್ಚಿಟ್ಟಿದ್ದಕ್ಕೆ ಧನ್ಯವಾದ'' ಎಂದು ಟೀಕಿಸಿದ್ದಾರೆ.

  ನ್ಯಾಯಾಲಯ ಶಿಕ್ಷೆ ನೀಡಿದೆಯೇ?

  ನ್ಯಾಯಾಲಯ ಶಿಕ್ಷೆ ನೀಡಿದೆಯೇ?

  ನೆಟ್ಟಿಗರ ಟೀಕೆಗೆ ಉತ್ತರಿಸಿದ ನಿಖಿಲ್ ದ್ವಿವೇದಿ ''ನ್ಯಾಯಾಲಯ ಅವಳನ್ನು ಶಿಕ್ಷೆಗೆ ಗುರಿಪಡಿಸಿದೆಯೇ? ಒಂದು ವೇಳೆ ಕೋರ್ಟ್ ಹಾಗೆ ಮಾಡಿದರೆ, ಅವಳ ಸುಧಾರಣೆಗಾಗಿ ನಾನು ಕಾಯುತ್ತೇನೆ. ಅವಳು ಸುಧಾರಣೆಯಾಗದಿದ್ದಲ್ಲಿ ನಾನು ನನ್ನ ಮಾತುಗಳನ್ನು ಹಿಂದಕ್ಕೆ ತೆಗೆದುಕೊಳ್ಳುತ್ತೇನೆ. ಆದರೆ, ಮಾಧ್ಯಮಗಳು ಮತ್ತು ಸಾರ್ವಜನಿಕರು ತೀರ್ಪು ನೀಡುವುದನ್ನು ನಿಲ್ಲಿಸಬೇಕಾಗಿದೆ'' ಎಂದು ತಿರುಗೇಟು ನೀಡಿದ್ದಾರೆ.

  Yash reacts about Narcoticsಈ ದೇಹ ನಿಮ್ದಲ್ಲ ನಿಮ್ಮಪ್ಪಂದು - ಅವರಿಗೋಸ್ಕರ ಏನಾದ್ರೂ ಮಾಡಿ | Filmibeat Kannada
  ನಾನು ರಿಯಾರನ್ನು ಬೆಂಬಲಿಸುತ್ತಿಲ್ಲ

  ನಾನು ರಿಯಾರನ್ನು ಬೆಂಬಲಿಸುತ್ತಿಲ್ಲ

  "ಡ್ರಗ್ಸ್ ಸೇವಕರು ಮತ್ತು ಡ್ರಗ್ಸ್ ಡೀಲರ್‌ಗಳನ್ನು ನಾನು ಬೆಂಬಲಿಸುತ್ತಿದ್ದೇನೆ ಎಂದು ತಿಳಿದು ನನ್ನನ್ನು ಟ್ರೋಲ್ ಮಾಡುತ್ತಿರುವವರ ಬಗ್ಗೆ ನಾನು ಚಿಂತಿಸಿಲ್ಲ ಎಂದು ತಿಳಿಸಲು ಇಚ್ಛಿಸುತ್ತೇನೆ. ನಾನು ರಿಯಾ ಅವರನ್ನು ಬೆಂಬಲಿಸುವುದಿಲ್ಲ ಆದರೆ ಕಾನೂನಿನ ತೀರ್ಪು ಬರುವುದಕ್ಕೆ ಮುಂಚಿತವಾಗಿಯೇ ಅಪರಾಧಿ ಎಂದು ನೋಡುವ ಪ್ರವೃತ್ತಿಯನ್ನು ಖಂಡಿಸುತ್ತೇನೆ'' ಎಂದು ಸಮರ್ಥನೆ ನೀಡಿದ್ದಾರೆ.

  English summary
  'When all this is over we would like to work with you', Nikhil Dwivedi offer to Rhea Chakraborty.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X