»   » ಹಿಂದೂ ಹುಡುಗಿಯರನ್ನು ಮದುವೆಯಾದ ಬಾಲಿವುಡ್ ಖಾನ್ಸ್

ಹಿಂದೂ ಹುಡುಗಿಯರನ್ನು ಮದುವೆಯಾದ ಬಾಲಿವುಡ್ ಖಾನ್ಸ್

Posted By:
Subscribe to Filmibeat Kannada

ಪ್ರೀತಿಗೆ ಜಾತಿ, ಧರ್ಮ, ಭಾಷೆಯ ಚೌಕಟ್ಟಿಲ್ಲ, ಅದಕ್ಕೆ ಬಾಲಿವುಡ್ ಜಗತ್ತು ಹೊರತಾಗಿಲ್ಲ. ಹಿಂದಿ ಚಿತ್ರೋದ್ಯಮದಲ್ಲೂ ಖಾನ್ ಗಳು ಅಂತರ್ಕೋಮು ವಿವಾಹ ಮಾಡಿಕೊಂಡು ಪ್ರೀತಿ ದೊಡ್ಡದು ಎಂದು ಸಾಬೀತು ಮಾಡಿದ್ದಾರೆ.

ಬಾಲಿವುಡ್ ಖಾನ್ ಗಳ ಪತ್ನಿಯರು ಲವ್ ಜಿಹಾದಿಗೆ ಒಳಗಾದವರು ಎನ್ನುವ ಆರೋಪವೂ ಕೇಳಿ ಬಂದಿತ್ತು. ಅವರಿಗೆ ತಮ್ಮ ಪತ್ನಿಯರ ಮೇಲೆ ನೈಜ ಪ್ರೀತಿಯಿದ್ದರೆ ಹಿಂದೂ ಧರ್ಮಕ್ಕೆ ಮತಾಂತರಗೊಳ್ಳಲಿ ಎನ್ನುವ ಒತ್ತಡವೂ ಇತ್ತು.

ಆದರೆ, ಇದಕ್ಕೆಲ್ಲಾ ತಲೆಕೆಡಿಸಿಕೊಳ್ಳದೇ ಹಿಂದೂ ಪತ್ನಿಯರನ್ನು ವರಿಸಿದ ಬಾಲಿವುಡ್ ಖಾನ್ ಗಳು ಇದುವರೆಗೆ ನೆಮ್ಮದಿಯ ಜೀವನವನ್ನು ನಡೆಸುತ್ತಿದ್ದಾರೆ.

ಬಾಲಿವುಡ್ ಜಗತ್ತಿನ ಒಂಬತ್ತು ಖಾನ್ ಗಳು ಹಿಂದೂ ಪತ್ನಿಯರನ್ನು ವರಿಸಿದ್ದಾರೆ. ಅವರು ಯಾರು ಸ್ಲೈಡಿನಲ್ಲಿ ನೋಡಿ..

ಸೈಫ್ ಆಲಿ ಖಾನ್ - ಕರೀನಾ

ಎರಡು ಮಕ್ಕಳ ತಂದೆಯಾಗಿದ್ದರೂ ಪಟೌಡಿ ಮನೆತನದ ಸೈಫ್ ಆಲಿ ಖಾನ್, ಕಪೂರ್ ಕುಟುಂಬದ ಕರೀನಾ ಕಪೂರ್ ಅವರನ್ನು ಎರಡನೇ ಮದುವೆಯಾದರು. ಸೈಫ್ ಮತ್ತು ಕರೀನಾ ನಡುವಣ ವಯಸ್ಸಿನ ಅಂತರ ಲವ್ ಮ್ಯಾರೇಜಿಗೆ ಅಡ್ಡಿಯಾಗಿಲ್ಲ.

ಇರ್ಫಾನ್ ಖಾನ್ - ಸುತಪಾ

ಹಾಲಿವುಡ್ ಬಾಗಿಲು ಬಡಿಯುತ್ತಿರುವ ಇರ್ಫಾನ್ ಖಾನ್ ಮತ್ತು ಸುತಪಾ ಸಿಕ್ದರ್ ಮದುವೆ 1995ರಲ್ಲಿ ನಡೆದಿತ್ತು.

ಅಮೀರ್ ಖಾನ್ - ಕಿರಣ್

ಮಿಸ್ಟರ್ ಪರ್ಫೆಕ್ಷನಿಸ್ಟ್ ಅಮೀರ್ ಖಾನ್ ಬೆಂಗಳೂರು ಮೂಲದ ಕಿರಣ್ ರಾವ್ ಅವರನ್ನು ಪ್ರೀತಿಸಿ ಮದುವೆಯಾದರು. ಅಮೀರ್ ಖಾನಿಗೆ ಇದು ಎರಡನೇ ಮದುವೆ. ಮೊದಲ ಹೆಂಡತಿ ರೀನಾ ದತ್ತಾಗೆ ಅಮೀರ್ ವಿಚ್ಚೇದನ ನೀಡಿದ್ದರು.

ಇಮ್ರಾನ್ ಖಾನ್ - ಆವಂತಿಕಾ

ಇಮ್ರಾನ್ ಖಾನ್ ತನ್ನ ಬಹುದಿನದ ಪ್ರೇಯಸಿ ಆವಂತಿಕಾ ಅವರನ್ನು ಪ್ರೀತಿಸಿ ಮದುವೆಯಾದರು.

ಅರ್ಬಾಜ್ ಖಾನ್ - ಮಲೈಕಾ ಆರೋರ

ಐಟಂ ಗರ್ಲ್ ಆಗಿದ್ದ ಮಲೈಕಾ ಆರೋರಾಳನ್ನು ಅರ್ಬಾಜ್ ಖಾನ್ ಪ್ರೀತಿಸಿ, ಮನೆಯವರ ಒಪ್ಪಿಗೆ ಪಡೆದುಕೊಂಡು ಪಾಣಿಗ್ರಹಣವಾದರು.

ಸೊಹೈಲ್ ಖಾನ್ - ಸೀಮಾ

ಸಲ್ಲು ಮಿಯಾ ಸಹೋದರ ಸೊಹೈಲ್ ಖಾನ್ ಅವರದ್ದೂ ಲವ್ ಮ್ಯಾರೇಜ್. ಸೀಮಾ ಸಚ್ದೇವ್ ಅವರನ್ನು ಪ್ರೀತಿಸಿ ಸೊಹೈಲ್ ಮದುವೆಯಾದರು. ದಂಪತಿಗಳಿಗೆ ಇಬ್ಬರು ಮಕ್ಕಳು.

ಶಾರೂಖ್ ಖಾನ್ - ಗೌರಿ

ಕಿರುತೆರೆಯಲ್ಲಿ ನಟಿಸುತ್ತಿದ್ದಾಗಲೇ ಶಾರೂಖ್ ಖಾನಿಗೆ ಗೌರಿ ಮೇಲೆ ಪ್ರೇಮಾಂಕುರವಾಗಿತ್ತು. ಸ್ವಲ್ಪ ದಿನ ಡೇಟಿಂಗ್ಸ್ ನಡೆಸಿದ ಇಬ್ಬರೂ ನಂತರ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಅವರಿಗೀಗ ಮೂರು ಮಕ್ಕಳು.

ಫರ್ದೀನ್ ಖಾನ್ - ನತಶಾ

ಬಾಲಿವುಡ್ ಜಗತ್ತಿನ ಮತ್ತೊಂದು ಪ್ರೇಮ ಕಥೆ. ತನ್ನ ಬಾಲ್ಯದ ಗೆಳತಿ ನತಶಾ ಮಾದ್ವಾನಿಯನ್ನು ಫರ್ದೀನ್ ಖಾನ್ ತಮ್ಮ ಕುಟುಂಬದ ಜೊತೆ ಹಠ ಹಿಡಿದು ಮದುವೆಯಾದರು.

ಜಯೇದ್ ಖಾನ್ - ಮಲೈಕಾ ಪರೇಖ್

ಜಯೇದ್ ಖಾನ್ ತನ್ನ ಹೈಸ್ಕೂಲ್ ಸಹಪಾಠಿ ಮಲೈಕಾ ಪರೇಖ್ ಅವರನ್ನು ಪ್ರೀತಿಸಿ ಮದುವೆಯಾದರು.

English summary
Here is the list of nine famous Khans of Bollywood industry with their Hindu wives.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada