For Quick Alerts
  ALLOW NOTIFICATIONS  
  For Daily Alerts

  ರಂಜಾನ್‌ ಸಂಪ್ರದಾಯ ಮುರಿದ ಸಲ್ಮಾನ್ ಖಾನ್: ಅಭಿಮಾನಿಗಳಿಗೆ ನಿರಾಸೆ

  |

  ಹಬ್ಬಕ್ಕೂ ಸಿನಿಮಾಗಳಿಗೂ ಆತ್ಮೀಯ ನಂಟು. ಹಬ್ಬಗಳಿಗೆ ತಮ್ಮ ಸಿನಿಮಾಗಳು ಬಿಡುಗಡೆ ಮಾಡುವುದಕ್ಕೆ ನಾಯಕರು ನಿರ್ಮಾಪಕರು ಹೆಚ್ಚು ಉತ್ಸುಕತೆ ತೋರುತ್ತಾರೆ.

  ರಂಜಾನ್ ಈ ಬಾರಿ ಕೊಂಚ ವಿಭಿನ್ನವಾಗಿರಲಿದೆ | Salman Khan | FILMIBEAT KANNADA

  ಯಾವ ಧರ್ಮದ ಹಬ್ಬವಾದರೂ ಸರಿ ಹಬ್ಬಗಳಿಗೆ ಸಿನಿಮಾಗಳು ತೆರೆಗೆ ಬರಲೇ ಬೇಕು. ಹಬ್ಬವನ್ನು ಸಂತೋಶದಿಂದ ಕಳೆಯಲು ಪ್ರೇಕ್ಷಕರಿಗೂ ಹಬ್ಬಗಳಿಗೆ ಸಿನಿಮಾಗಳಿರಲೇ ಬೇಕು.

  ಈ ವಿಚಾರದಲ್ಲಿ ಸಲ್ಮಾನ್ ಮತ್ತು ವಿರಾಟ್ ಕೊಹ್ಲಿಯನ್ನು ಮೀರಿಸಿದ ಪ್ರಿಯಾಂಕಾ ಮತ್ತು ಸನ್ನಿ ಲಿಯೋನ್ಈ ವಿಚಾರದಲ್ಲಿ ಸಲ್ಮಾನ್ ಮತ್ತು ವಿರಾಟ್ ಕೊಹ್ಲಿಯನ್ನು ಮೀರಿಸಿದ ಪ್ರಿಯಾಂಕಾ ಮತ್ತು ಸನ್ನಿ ಲಿಯೋನ್

  ಬಾಲಿವುಡ್ ಸ್ಟಾರ್ ನಟ ಸಲ್ಮಾನ್ ಖಾನ್ ಅಂತೂ ಹಬ್ಬಕ್ಕೆ ತಮ್ಮ ಸಿನಿಮಾ ಬಿಡುಗಡೆ ಮಾಡುವ ಅಭ್ಯಾಸವನ್ನು 10 ವರ್ಷದಿಂದ ಪಾಲಿಸಿಕೊಂಡು ಬಂದಿದ್ದಾರೆ.

  ಪ್ರತಿ ವರ್ಷ ಸಲ್ಮಾನ್ ಸಿನಿಮಾ ಬಿಡುಗಡೆ ಆಗುತ್ತಿತ್ತು

  ಪ್ರತಿ ವರ್ಷ ಸಲ್ಮಾನ್ ಸಿನಿಮಾ ಬಿಡುಗಡೆ ಆಗುತ್ತಿತ್ತು

  ಪ್ರತಿ ವರ್ಷ ಈದ್‌ ಹಬ್ಬಕ್ಕೆ ಸಲ್ಮಾನ್ ಖಾನ್ ಸಿನಿಮಾ ಬಿಡುಗಡೆ ಆಗಿಯೇ ತೀರುತ್ತದೆ. 'ಈದ್ ಗೆ ಸಲ್ಮಾನ್ ಸಿನಿಮಾ ಬರುತ್ತೆ, ಸಲ್ಮಾನ್ ಸಿನಿಮಾ ಬಂದ ದಿನ ಈದ್ ಆಗುತ್ತದೆ' ಎನ್ನುವ ಮಾತೇ ಬಾಲಿವುಡ್‌ನಲ್ಲಿದೆ.

  ಈದ್‌ ಗೆ ಸಲ್ಮಾನ್ ಸಿನಿಮಾ ಇಲ್ಲ

  ಈದ್‌ ಗೆ ಸಲ್ಮಾನ್ ಸಿನಿಮಾ ಇಲ್ಲ

  ಆದರೆ ಈ ಬಾರಿ ಈದ್‌ಗೆ ಸಲ್ಮಾನ್ ಸಿನಿಮಾ ನೋಡುವ ಅವಕಾಶ ಅಭಿಮಾನಿಗಳಿಗಿಲ್ಲ. ಸೋಮವಾರ ರಂಜಾನ್ ಅಥವಾ ಈದ್‌ ಹಬ್ಬವಾಗಿದ್ದು, ಲಾಕ್‌ಡೌನ್ ಕಾರಣದಿಂದಾಗಿ ಚಿತ್ರಮಂದಿರಗಳು ಬಂದ್ ಆಗಿರುವ ಕಾರಣ ಈ ಬಾರಿ ಸಲ್ಮಾನ್ ಸಿನಿಮಾ ಬಿಡುಗಡೆ ಆಗುತ್ತಿಲ್ಲ.

  ಖದೀಮರಿಗೆ ಕಾನೂನು ಕ್ರಮದ ಎಚ್ಚರಿಕೆ ನೀಡಿದ ಸಲ್ಮಾನ್ ಖಾನ್ಖದೀಮರಿಗೆ ಕಾನೂನು ಕ್ರಮದ ಎಚ್ಚರಿಕೆ ನೀಡಿದ ಸಲ್ಮಾನ್ ಖಾನ್

  ಕಳೆದ 10 ವರ್ಷದಿಂದ ಪಾಲಿಸಿಕೊಂಡು ಬಂದ ಸಂಪ್ರದಾಯ

  ಕಳೆದ 10 ವರ್ಷದಿಂದ ಪಾಲಿಸಿಕೊಂಡು ಬಂದ ಸಂಪ್ರದಾಯ

  ಕಳೆದ ಹತ್ತು ವರ್ಷದಲ್ಲಿ ರಂಜಾನ್ ಹಬ್ಬಕ್ಕೆ ಸಲ್ಮಾನ್ ಸಿನಿಮಾ ಬಿಡುಗಡೆ ಆಗದೇ ಇರುವುದು ಇದು ಕೇವಲ ಎರಡನೇ ಬಾರಿಯಷ್ಟೆ. 2010 ರಿಂದಲೂ ರಂಜಾನ್‌ ಗೆ ಸಲ್ಮಾನ್ ಸಿನಿಮಾ ಬಿಡುಗಡೆ ಮಾಡುವ ಪರಿಪಾಠ ಪಾಲಿಸಿಕೊಂಡು ಬರುತ್ತಿದ್ದಾರೆ. 2013 ರ ರಂಜಾನ್‌ ಗೆ ಸಲ್ಮಾನ್ ಸಿನಿಮಾ ಬಿಡುಗಡೆ ಆಗಿರಲಿಲ್ಲ. ಮತ್ತೆ ಈಗ ಸಲ್ಮಾನ್ ಸಿನಿಮಾ ಬಿಡುಗಡೆ ಆಗುತ್ತಿಲ್ಲ.

  ಹಿಟ್ ಆಗುತ್ತವೆ ಎಂಬ ನಂಬಿಕೆ

  ಹಿಟ್ ಆಗುತ್ತವೆ ಎಂಬ ನಂಬಿಕೆ

  ಈದ್ ದಿನ ಬಿಡುಗಡೆ ಆಗುವ ಸಲ್ಮಾನ್ ಖಾನ್ ಅವರ ಬಹುತೇಕ ಎಲ್ಲಾ ಸಿನಿಮಾಗಳೂ ಸಹ ಸೂಪರ್ ಹಿಟ್ ಆಗುತ್ತವೆ. ದಬಂಗ್, ಭಜರಂಗಿ ಭಾಯಿಜಾನ್, ಕಿಕ್, ಸುಲ್ತಾನ್, ಬಾಡಿಗಾರ್ಡ್, ಏಕ್‌ ಥಾ ಟೈಗರ್, ಟ್ಯೂಬ್‌ಲೈಟ್ ಇವೆಲ್ಲವೂ ರಂಜಾನ್ ದಿನವೇ ಬಿಡುಗಡೆ ಆದ ಸಿನಿಮಾಗಳು.

  English summary
  Salman Khan movie will not be released on this years Ramdan. from 2010 Salman Khan releasing his movie on Ramdan every year expect 2013.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X