For Quick Alerts
  ALLOW NOTIFICATIONS  
  For Daily Alerts

  ಭಾರತೀಯ ಚಿತ್ರರಂಗ ಒಂದೇ, ವುಡ್‌ಗಳ ವರ್ಗೀಕರಣ ಬೇಡ: ಕರಣ್ ಜೋಹರ್!

  |

  ಬಾಲಿವುಡ್‌ನ ಮತ್ತೊಂದು ದೊಡ್ಡ ಸಿನಿಮಾ ರಿಲೀಸ್‌ಗೆ ರೆಡಿಯಾಗುತ್ತಿದೆ. ಅದುವೇ 'ಬ್ರಹ್ಮಾಸ್ತ್ರ' ಚಿತ್ರದ ಉಸ್ತುವಾರಿಯನ್ನು ಕರಣ್ ಜೋಹರ್ ವಹಿಸಿಕೊಂಡಿದ್ದಾರೆ. ಹಾಗಾಗಿ ಈ ಚಿತ್ರದ ಪ್ರಚಾರ ಕಾರ್ಯದಲ್ಲಿ ಕರಣ್ ಜೋಹರ್ ಕೂಡ ಭಾಗಿ ಆಗುತ್ತಿದ್ದಾರೆ. ಇದರ ಬೆನ್ನಲ್ಲೆ ಹೈದ್ರಾಬಾದ್ ಸುದ್ದಿಗೋಷ್ಟಿಯಲ್ಲೂ ಭಾಗಿಯಾಗಿದ್ದರು.

  ಈ ವೇಳೆ ಕರಣ್ ಜೋಹರ್ ಕೆಲವು ಪ್ರಮುಖ ವಿಚಾರಗಳನ್ನು ಮಾತನಾಡಿದ್ದಾರೆ. ಬ್ರಹ್ಮಾಸ್ತ್ರ ಚಿತ್ರದ ಜೊತೆಗೆ ಭಾರತೀಯ ಚಿತ್ರರಂಗದ ಬಗ್ಗೆಯೂ ಮಾತನಾಡಿದ್ದಾರೆ. ಬಾಲಿವುಡ್, ಟಾಲಿವುಡ್, ಕಾಲಿವುಟ್, ಎನ್ನುವುದು ಎನ್ನು ಮುಂದೆ ಬೇಡವೇ ಬೇಡ ಎಂದಿದ್ದಾರೆ.

  ''ನನ್ನ ಲೈಂಗಿಕ ಜೀವನ ಆಸಕ್ತಿಕರವಾಗಿಲ್ಲ ಅದಕ್ಕೆ ಕರಣ್ ನನ್ನನ್ನು ಆಹ್ವಾನಿಸಿಲ್ಲ''''ನನ್ನ ಲೈಂಗಿಕ ಜೀವನ ಆಸಕ್ತಿಕರವಾಗಿಲ್ಲ ಅದಕ್ಕೆ ಕರಣ್ ನನ್ನನ್ನು ಆಹ್ವಾನಿಸಿಲ್ಲ''

  ಭಾರತೀಯ ಸಿನಿಮಾಗಳನ್ನು ಒಂದು ಉದ್ಯಮ ಎಂದು ಪರಿಗಣಿಸಿ, ವರ್ಗೀಕರಿಸಬೇಡಿ ಎಂದು ಬಾಲಿವುಡ್ ಖ್ಯಾತ ಚಿತ್ರ ನಿರ್ಮಾಪಕ ಹಾಗೂ ನಿರ್ದೇಶಕ ಕರಣ್ ಜೋಹರ್ ಒತ್ತಾಯಿಸಿದ್ದಾರೆ.

  ಕರಣ್ ಜೋಹರ್ ನೀಡಿದ್ದ ಬಾಲಿವುಡ್ ಅವಕಾಶ ನಿರಾಕರಿಸಿದ್ದ ವಿಜಯ್ ದೇವರಕೊಂಡ!ಕರಣ್ ಜೋಹರ್ ನೀಡಿದ್ದ ಬಾಲಿವುಡ್ ಅವಕಾಶ ನಿರಾಕರಿಸಿದ್ದ ವಿಜಯ್ ದೇವರಕೊಂಡ!

  ಭಾರತೀಯ ಚಿತ್ರರಂಗ ಒಂದೇ- ಕರಣ್ ಜೋಹರ್!

  ಭಾರತೀಯ ಚಿತ್ರರಂಗ ಒಂದೇ- ಕರಣ್ ಜೋಹರ್!

  ರಣಬೀರ್ ಕಪೂರ್-ಆಲಿಯಾ ಭಟ್ ನಟನೆಯ ಬ್ರಹ್ಮಾಸ್ತ್ರ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಈ ಸಂಬಂಧ ನಿನ್ನೆ ಹೈದರಾಬಾದ್ ನಲ್ಲಿ ನಡೆದ ಚಿತ್ರದ ಪ್ರಚಾರಾರ್ಥ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಭಾರತೀಯ ಚಿತ್ರಗಳನ್ನು ಒಂದು ಭಾರತೀಯ ಚಿತ್ರೋದ್ಯಮ ಎಂದು ಪರಿಗಣಿಸಬೇಕೆ ಹೊರತು ಬಾಲಿವುಡ್, ಟಾಲಿವುಡ್ ಎಂದು ವಿಂಗಡಿಸಿ ನೋಡಬಾರದು. ನಾವು ನಮ್ಮ ಚಿತ್ರಗಳ ಮೂಲಕ ಇಡೀ ಭಾರತವನ್ನು ತಲುಪಲು ಬಯಸುತ್ತೇವೆ. ಎಸ್ ಎಸ್ ರಾಜಮೌಳಿಯವರು ಹೇಳಿದಂತೆ ಇದು ಭಾರತೀಯ ಚಲನಚಿತ್ರ ಉದ್ಯಮ" ಎಂದಿದ್ದಾರೆ ಕರಣ್ ಜೋಹರ್.

  ನಾವೆಲ್ಲರೂ ಒಂದೆ- ಕರಣ್ ಜೋಹರ್!

  ನಾವೆಲ್ಲರೂ ಒಂದೆ- ಕರಣ್ ಜೋಹರ್!

  ಮಾತು ಮುಂದುವರೆಸಿದ ಕರಣ್ ಜೋಹರ್ "ಅದರಿಂದಾಚೆಗೆ ಇದನ್ನು ಬೇರೆ ರೀತಿ ವರ್ಗೀಕರಿಸಿ ನೋಡುವುದು ಬೇಡ. ಬಾಲಿವುಡ್, ಟಾಲಿವುಡ್, ಕಾಲಿವುಡ್ ಎಂದು ಹೆಸರು ಕೊಡುತ್ತೇವೆ. ಇನ್ನು ಮುಂದೆ ಈ ವುಡ್‌ಗಳಿಂದ ಹೊರಬರಬೇಕು, ನಾವೆಲ್ಲರೂ ಒಂದು ಭಾರತೀಯ ಚಲನಚಿತ್ರದ ಭಾಗವಾಗಿದ್ದೇವೆ. ಪ್ರತಿಯೊಂದು ಚಿತ್ರವೂ ಭಾರತೀಯ ಸಿನಿಮಾರಂಗಕ್ಕೆ ಸೇರಿದ್ದು" ಎಂದು ಒತ್ತಿ, ಒತ್ತಿ ಹೇಳಿದ್ದಾರೆ ಕರಣ್ ಜೋಹರ್.

  KGF, RRR ಸಾವಿರ ಕೋಟಿ ಗಳಿಕೆ!

  KGF, RRR ಸಾವಿರ ಕೋಟಿ ಗಳಿಕೆ!

  ಕೆಜಿಎಫ್ 2 ಬಿಡುಗಡೆ ವೇಳೆ ನಟ ಯಶ್ ಕೂಡ ಭಾರತೀಯ ಚಿತ್ರಗಳನ್ನು ಉಪ ವರ್ಗೀಕರಿಸುವುದನ್ನು ನಿಲ್ಲಿಸಬೇಕೆಂದು ಕೇಳಿಕೊಂಡಿದ್ದರು. ನಿರ್ದೇಶಕ ರಾಜಮೌಳಿ ಕೂಡ ಇದೇ ಮಾತನ್ನು ಹೇಳಿದ್ದರು. ಇನ್ನು ಸೌತ್ ಸಿನಿಮಾಗಳು ಸಾಲು, ಸಾಲಾಗಿ ಈ ರೀತಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿರುವನ್ನು ಬಾಲಿವುಡ್ ಮಂದಿ ಈಗ ಒಪ್ಪೊಕೊಂಡಂತೆ ಇದೆ. ಹಾಗಾಗಿ ನಾವೆಲ್ಲಾ ಎಂದೇ ಎಂದು ಹೇಳುತ್ತಿದ್ದಾರೆ. ಅದರಲ್ಲೂ ಬಾಲಿವುಡ್‌ನ ಒಂದಿ ಪಿಲ್ಲರ್‌ನಂತಯೆ ಇರುವ ಕರಣ ಜೋಹರ್ ಹೇಳಿದ್ದಾರೆ ಎಂದರೆ ಎಫೆಕ್ಟ್ ಆಗಿದೆ ಎಂದೇ ಅರ್ಥ.

  ಬಾಲಿವುಡ್ ಚಿತ್ರಗಳ ಸೋಲು!

  ಬಾಲಿವುಡ್ ಚಿತ್ರಗಳ ಸೋಲು!

  ಇತ್ತ ಸೌತ್ ಸಿನಿಮಾಗಳು ಸೂಪರ್ ಹಿಟ್ ಎನಿಸಿಕೊಂಡು, ಬಾಕ್ಸಾಫೀಸ್‌ನಲ್ಲಿ ಕೋಟಿ, ಕೋಟಿ ಲೂಟಿ ಮಾಡುತ್ತಿದ್ದರೆ. ಬಾಲಿವುಡ್‌ನ ದೊಡ್ಡ, ದೊಡ್ಡ ಸಿನಿಮಾಗಳು ಮಕಾಡೆ ಮಲಗುತ್ತಿವೆ. ಈ ಹಿಂದೆ ನಾವೆಲ್ಲಾ ಒಂದೆ ಎಂದು ಸೌತ್ ಸಿನಿಮಾರಂಗ ಹೇಳಿದಾಗ, ಸುಮ್ಮನಿದ್ದು ಈಗ ನಾವೆಲ್ಲಾ ಒಂದೇ ಎನ್ನುತ್ತಿದ್ದಾರೆ ಬಾಲಿವುಡ್ ಮಂದೆ. ಏನೇ ಇದ್ದರು ಇದೊಂದು ಉತ್ತಮ ಬೆಳವಣಿಗೆಯೇ ಸರಿ.

  English summary
  No Woods anymore Its Only Indian Film Industry Says Karan Johar, Know More Details,

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X