For Quick Alerts
  ALLOW NOTIFICATIONS  
  For Daily Alerts

  ನಟಿ ಪೂನಂ ಪಾಂಡೆ ಯಾವುದೇ ಕ್ಷಣದಲ್ಲಿ ಬಂಧನ

  By Rajendra
  |

  ಕನ್ನಡದ ಐಟಂ ಬೆಡಗಿ, ಬಾಲಿವುಡ್ ತಾರೆ, ರೂಪದರ್ಶಿ ಪೂನಂ ಪಾಂಡೆಯನ್ನು ಯಾವುದೇ ಕ್ಷಣದಲ್ಲಿ ಬಂಧಿಸುವ ಸಾಧ್ಯತೆಗಳಿವೆ. ದೇವರ ಫೋಟೋ ಹಿಡಿದು ಅಶ್ಲೀಲ ಭಂಗಿ ಪ್ರದರ್ಶನ ನೀಡಿ ಹಿಂದೂ ಧರ್ಮೀಯರ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಬೆಂಗಳೂರು ಸೆಷನ್ಸ್ ನ್ಯಾಯಾಲಯ ಜಾಮೀನು ರಹಿತ ವಾರಂಟ್ ಜಾರಿ ಮಾಡಿದೆ.

  ವಕೀಲರಾದ ಉಮೇಶ್ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಫೆಬ್ರವರಿ 12ರಂದು ಪೂನಂ ಪಾಂಡೆಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಬೇಕು ಎಂದು ಆದೇಶಿಸಿದೆ. ಈ ಹಿಂದೆ ಪೂನಂ ಪಾಂಡೆ ಅವರಿಗೆ ನ್ಯಾಯಾಲಕ್ಕೆ ಹಾಜರಾಗುವಂತೆ ಎರಡು ಬಾರಿ ಸಮನ್ಸ್ ಜಾರಿ ಮಾಡಲಾಗಿತ್ತು. [ಕುಡುಕರು ಪೂನಂ ಪಾಂಡೆಯನ್ನು ಬೆಚ್ಚಿಬೀಳಿಸಿದ್ರಂತೆ]

  ಹೊಸವರ್ಷದ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಪೂನಂ ಪಾಂಡೆ ಕುಣಿಯಲು ಕೋಟ್ಯಾಂತರ ರುಪಾಯಿ ಪಡೆದು ಬೆಂಗಳೂರಿಗೆ ಬಂದಿದ್ದರು. ಆದರೆ ನ್ಯಾಯಾಲಕ್ಕೆ ಹಾಜರಾಗದೆ ಕಾನೂನು ಉಲ್ಲಂಘನೆ ಮಾಡಿದ್ದಾರೆ ಎಂದು ವಕೀಲ ಉಮೇಶ್ ವಾದಿಸಿದ್ದಾರೆ.

  2011ರಲ್ಲಿ ನಡೆದ ವಿಶ್ವಕಪ್ ಕ್ರಿಕೆಟ್ ವೇಳೆ ಭಾರತ ಗೆದ್ದರೆ ಬೆತ್ತಲೆಯಾಗಿ ಮೈದಾನದಲ್ಲಿ ಓಡಾಡುವುದಾಗಿ ಪೂನಂ ಹೇಳಿದ್ದಲ್ಲದೆ ದೇವರ ಫೋಟೋಗಳನ್ನು ಹಿಡಿದು ಅಶ್ಲೀಲ ಭಂಗಿಯಲ್ಲಿ ಪ್ರದರ್ಶನ ನೀಡಿದ್ದರು. ಕನ್ನಡದಲ್ಲಿ ಬಿಡುಗಡೆಗೆ ಸಿದ್ಧವಾಗಿರುವ 'ಲವ್ ಈಸ್ ಪಾಯಿಸನ್' ಚಿತ್ರದಲ್ಲಿ ಸ್ಪೆಷಲ್ ಸಾಂಗ್ ಮಾಡಿದ್ದಾರೆ ಪೂನಂ ಪಾಂಡೆ. (ಏಜೆನ್ಸೀಸ್)

  English summary
  Actor-turned-model Poonam Pandey landed herself in trouble for an alleged obscene performance on the eve of new year on December 31 in Bangalore as a sessions court here on Friday issued a non-bailable warrant against her. 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X