Don't Miss!
- News
Bharat Jodo Yatra: ಭಾರತ್ ಜೋಡೋ ಯಾತ್ರೆಯ ಸಮಾರೋಪದಲ್ಲಿ 9 ಪಕ್ಷಗಳು ಗೈರು, 12 ಪಕ್ಷಗಳು ಹಾಜರು
- Sports
ಆರ್ಸಿಬಿ ತನ್ನ ಆಟಗಾರರನ್ನು ನಂಬಲ್ಲ ಎಂದ ಕ್ರಿಸ್ ಗೇಲ್: ತಿರುಗಿಬಿದ್ದ ಅಭಿಮಾನಿಗಳು ಕೊಟ್ಟ ಉತ್ತರವೇನು?
- Automobiles
'ಮಹೀಂದ್ರಾ ಸ್ಕಾರ್ಪಿಯೊ ಎನ್' ಈ ರೂಪಾಂತರಗಳಿಗೆ ಬರೋಬ್ಬರಿ 2 ವರ್ಷ ಕಾಯಬೇಕು..
- Lifestyle
Horoscope Today 29 Jan 2023: ಭಾನುವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Finance
ಅಭ್ಯರ್ಥಿಯ ಸಂದರ್ಶನ ಮಾಡುತ್ತಿದ್ದಾಗಲೇ ಗೂಗಲ್ ಎಚ್ಆರ್ ವಜಾ!
- Technology
ಒಪ್ಪೋ ಕಂಪೆನಿಯ ಈ ಸ್ಮಾರ್ಟ್ಫೋನ್ ಮೇಲೆ ಭಾರಿ ನಿರೀಕ್ಷೆ? ಲಾಂಚ್ ಯಾವಾಗ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಶಾರುಖ್ ಖಾನ್ ಮನೆಯಲ್ಲಿ ಒಂದು ದಿನ ಅತಿಥಿಯಾಗುವ ಸುವರ್ಣಾವಕಾಶ!
ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಮನೆಯಲ್ಲಿ ನೀವು ಒಂದು ದಿನ ವಾಸ್ತವ್ಯ ಹೂಡುವ, ಮನೆಯ ಎಲ್ಲಾ ಸೌಕರ್ಯಗಳನ್ನು ಬಳಸುವ ಅವಕಾಶ ನಿಮಗೆ ಒದಗಿ ಬಂದರೆ!
ಇದನ್ನು ಕನಸು ಎನ್ನುವಂತಿಲ್ಲ, ಏಕೆಂದರೆ ಆ ಅವಕಾಶ ಇದೀಗ ಲಭ್ಯವಿದೆ. ಅದೂ ಉಚಿತವಾಗಿ. ಹೌದು ಶಾರುಖ್ ಖಾನ್-ಗೌರಿ ಖಾನ್ ರ ಮನೆಯಲ್ಲಿ ಒಂದು ದಿನದ ಮಟ್ಟಿಗೆ ಅತಿಥಿಗಳಾಗಿ ವಾಸ್ತವ್ಯ ಮಾಡಬಹುದಾದ ಅವಕಾಶ ಇದೆ.
ಶಾರುಖ್ ಖಾನ್ ಮನೆ ಎಂದ ಕೂಡಲೇ ಮುಂಬೈ ನ ಮನ್ನತ್ ನೆನಪಾಗುವುದು ಸಾಮಾನ್ಯ, ಆದರೆ ಅತಿಥಿ ಸತ್ಕಾರ ನಡೆಯಲಿರುವುದು ಮನ್ನತ್ ನಲ್ಲಲ್ಲ. ಶಾರುಖ್ ತಮ್ಮ ಜೀವನದ ಬಹುಪಾಲು ಸಮಯ ಕಳೆದ ದೆಹಲಿಯ ಮನೆಯಲ್ಲಿ. ಈ ಮನೆ ಸಹ ಮನ್ನತ್‌ಗಿಂತಲೂ ಯಾವುದರಲ್ಲೂ ಕಡಿಮೆ ಇಲ್ಲ.

ಒಳಾಂಗಣ ವಿನ್ಯಾಸ ಮಾಡಿರುವ ಗೌರಿ ಖಾನ್
ಒಂಳಾಂಗಣ ವಿನ್ಯಾಸಕಿ ಆಗಿರುವ ಶಾರುಖ್ ಪತ್ನಿ ಗೌರಿ ಖಾನ್ ಶಾರುಖ್ ಖಾನ್‌ರ ದೆಹಲಿಯ ಐಶಾರಾಮಿ ಮನೆಯನ್ನು ಪೂರ್ಣವಾಗಿ ಮರುವಿನ್ಯಾಸಗೊಳಿಸಿದ್ದು, ವಿದೇಶಿ ಸಂಸ್ಥೆ ಏರ್‌ಬಿಎನ್‌ಬಿ ಸಹಯೋಗದೊಂದಿಗೆ ಅತಿಥಿ ಸತ್ಕಾರಕ್ಕೆಂದು ಮನೆಯನ್ನು ಒದಗಿಸುತ್ತಿದ್ದಾರೆ.

ಒಬ್ಬರಿಗಷ್ಟೆ ಅತಿಥಿಯಾಗುವ ಅವಕಾಶ
ಆದರೆ ಎಲ್ಲರಿಗೂ ಈ ಅವಕಾಶ ಸಿಗುವುದಿಲ್ಲ, ಕೇವಲ ಆಯ್ದ ಒಬ್ಬರಿಗಷ್ಟೆ ಶಾರುಖ್ ಖಾನ್ ಮನೆಯಲ್ಲಿ ತಂಗುವ ಅವಕಾಶವಿದೆ. ನಿಮಗೆ ಆ ಅವಕಾಶ ಬೇಕೆಂದರೆ ಏರ್‌ಬಿಎನ್‌ಬಿ ವೆಬ್‌ಸೈಟ್‌ನಲ್ಲಿ ಈಗಲೇ ಆನ್‌ಲೈನ್ ಅರ್ಜಿ ಗುಜರಾಯಿಸಬೇಕು.

ಫೆಬ್ರವರಿ 13 ರಂದು ಶಾರುಖ್ ಮನೆಯಲ್ಲಿ ವಾಸ
ಆನ್‌ಲೈನ್‌ನಲ್ಲಿ ಬಂದ ಅರ್ಜಿಗಳನ್ನೆಲ್ಲಾ ಕೂಲಂಕುಶವಾಗಿ ಪರಿಶೀಲಿಸಿದ ನಂತರ ಡಿಸೆಂಬರ್ 30 ರಂದು ಆ ಲಕ್ಕಿ ಅತಿಥಿಯನ್ನು ಘೋಷಿಸಲಾಗುವುದು. ಆಯ್ಕೆಯಾದ ಅತಿಥಿಯು ಫೇಬ್ರವರಿ 13 ರಂದು ಶಾರುಖ್ ರ ಡೆಲ್ಲಿ ನಿವಾಸದಲ್ಲಿ ಒಂದು ದಿನ ವಾಸವಿರಬಹುದು.
Recommended Video

ಹೋಮ್ ವಿತ್ ಓಪನ್ ಆರ್ಮ್ಸ್
ಡೆಲ್ಲಿ ನಿವಾಸದಲ್ಲಿ ವಾಸವಿರುವ ಆ ಒಬ್ಬ ಅತಿಥಿಗೆ ಸಾಕಷ್ಟು ಗಿಫ್ಟ್‌ಗಳು, ಶಾರುಖ್ ಕುಟುಂಬದೊಂದಿಗೆ ಭೋಜನ, ಐಶಾರಾಮಿ ಕಾರು ಸೇರಿಸಿ, ಶಾರುಖ್ ಮನೆಯ ಎಲ್ಲಾ ಸೌಕರ್ಯ ಬಳಸುವ ಅವಕಾಶ ದೊರೆಯಲಿದೆ. 'ಹೋಮ್ ವಿತ್ ಓಪನ್ ಆರ್ಮ್ಸ್' ಅಭಿಯಾನದ ಅಡಿಯಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.