For Quick Alerts
  ALLOW NOTIFICATIONS  
  For Daily Alerts

  ಟಾಪ್ ನಟರ ಪಟ್ಟಿಯಲ್ಲಿ ದಕ್ಷಿಣದ ಹೀರೋಗಳದ್ದೇ ದರ್ಬಾರ್, ಯಶ್‌ಗೆ ಎಷ್ಟನೇ ಸ್ಥಾನ?

  |

  ದಕ್ಷಿಣದ ನಟರು ದೊಡ್ಡ ಮಟ್ಟದ ಹವಾ ಎಬ್ಬಿಸಿದ್ದಾರೆ. ದಶಕಗಳ ಆಳಿದ ಬಾಲಿವುಡ್ ಸ್ಟಾರ್ ನಟರು ಸಹ ದಕ್ಷಿಣದ ಹೀರೋಗಳ ನಡುವೆ ಅನಾಮತ್ತು ಮಂಡಿ ಊರಿದ್ದಾರೆ.

  ಖಾನ್ ತ್ರಯರು, ಅಕ್ಷಯ್ ಕುಮಾರ್ ಅಂಥಹಾ ಸ್ಟಾರ್ ನಟರ ಸಿನಿಮಾಗಳೇ ಬಾಕ್ಸ್ ಆಫೀಸ್‌ನಲ್ಲಿ ನಿಲ್ಲುತ್ತಿಲ್ಲ. ಅಕ್ಷಯ್ ಕುಮಾರ್ ಸಿನಿಮಾಗಳಂತೂ ಸತತ ಸೋಲು ಕಾಣುತ್ತಿವೆ.

  ಇದೀಗ ಭಾರತದ ಟಾಪ್ 10 ನಟರ ಪಟ್ಟಿಯೊಂದು ಬಿಡುಗಡೆ ಆಗಿದ್ದು ಪಟ್ಟಿಯಲ್ಲಿ ಬಾಲಿವುಡ್‌ನ ಒಬ್ಬ ನಟನ ಹೊರತಾಗಿ ಇನ್ನೆಲ್ಲವೂ ದಕ್ಷಿಣ ಭಾರತದ ನಟರೇ ಇದ್ದಾರೆ.

  ಒರ್ಮಾಕ್ಸ್ ಸಂಸ್ಥೆಯು ಭಾರತದ ಟಾಪ್ ನಟರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇತ್ತೀಚಿಗಿನ ಸಿನಿಮಾಗಳ ಯಶಸ್ಸನ್ನು ಆಧರಿಸಿ ಈ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು, ಪಟ್ಟಿಯಲ್ಲಿ ದಕ್ಷಿಣ ಭಾರತ ಸಿನಿಮಾಗಳ ನಟರೇ ತುಂಬಿದ್ದಾರೆ.

  ಪಟ್ಟಿಯಲ್ಲಿ ವಿಜಯ್, ಜೂ ಎನ್‌ಟಿಆರ್,ಪ್ರಭಾಸ್, ಅಲ್ಲು ಅರ್ಜುನ್, ಅಜಿತ್ ಕುಮಾರ್, ಯಶ್, ರಾಮ್ ಚರಣ್, ಸೂರ್ಯಾ, ಮಹೇಶ್ ಬಾಬು ಅವರುಗಳಿದ್ದಾರೆ. ಪಟ್ಟಿಯಲ್ಲಿರುವ ಏಕೈಕ ಬಾಲಿವುಡ್ ನಟನೆಂದರೆ ಅದು ಅಕ್ಷಯ್ ಕುಮಾರ್ ಮಾತ್ರ.

  ಒರ್ಮ್ಯಾಕ್ಸ್ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವುದು ತಮಿಳಿನ ಸ್ಟಾರ್ ನಟ ವಿಜಯ್. ಎರಡನೇ ಸ್ಥಾನದಲ್ಲಿ ಜೂ ಎನ್‌ಟಿಆರ್ ಇದ್ದಾರೆ. ಮೂರನೇ ಸ್ಥಾನದಲ್ಲಿ ಪ್ರಭಾಸ್ ಇದ್ದರೆ. ನಾಲ್ಕನೇ ಸ್ಥಾನದಲ್ಲಿ ಅಲ್ಲು ಅರ್ಜುನ್ ಇದ್ದಾರೆ. ಐದನೇ ಸ್ಥಾನದಲ್ಲಿ ಬಾಲಿವುಡ್ ನಟ ಅಕ್ಷಯ್ ಕುಮಾರ್ ಇದ್ದಾರೆ. ಆರನೇ ಸ್ಥಾನದಲ್ಲಿ ನಟ ಅಜಿತ್ ಕುಮಾರ್ ಇದ್ದಾರೆ. ಏಳನೇ ಸ್ಥಾನದಲ್ಲಿ ಯಶ್ ಇದ್ದಾರೆ. ಎಂಟನೇ ಸ್ಥಾನದಲ್ಲಿ RRR ಸ್ಟಾರ್ ರಾಮ್ ಚರಣ್, ಒಂಬತ್ತನೇ ಸ್ಥಾನದಲ್ಲಿ ತಮಿಳಿನ ಸೂರ್ಯ ಇದ್ದಾರೆ. ಕೊನೆಯ ಸ್ಥಾನದಲ್ಲಿ ಮಹೇಶ್ ಬಾಬು ಇದ್ದಾರೆ.

  ಈ ಪಟ್ಟಿ ಏಪ್ರಿಲ್ ತಿಂಗಳಿನ ಪಟ್ಟಿಯಾಗಿದ್ದು ತಿಂಗಳಿಗೊಮ್ಮೆ ಹೊಸ ಪಟ್ಟಿಯನ್ನು ಒರ್‌ಮ್ಯಾಕ್ಸ್ ಬಿಡುಗಡೆ ಮಾಡುತ್ತದೆ. ಪ್ರತಿ ತಿಂಗಳು ಈ ಪಟ್ಟಿ ಬದಲಾಗುತ್ತಿರುತ್ತದೆ.

  ದಕ್ಷಿಣ ಭಾರತದ ಸಿನಿಮಾಗಳು ಸತತವಾಗಿ ಹಿಟ್ ಆಗುತ್ತಿವೆ. ಹಾಗಾಗಿ ಬಾಲಿವುಡ್‌ ನಟರು ಬಹಳ ಮಂಕಾಗಿದ್ದಾರೆ. ಸಲ್ಮಾನ್ ಖಾನ್‌ರ 'ಅಂತಿಮ್' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಧಾರುಣವಾಗಿ ಸೋತಿತು. ಅಕ್ಷಯ್ ಕುಮಾರ್ ನಟನೆಯ 'ಸಾಮ್ರಾಟ್ ಪೃಥ್ವಿರಾಜ್', 'ಬಚ್ಚನ್ ಪಾಂಡೆ' ಸಿನಿಮಾಗಳು ಸೋಲು ಕಂಡಿವೆ.

  English summary
  Ormax released top actors list. Akshay Kumar is only Bollywood actor who got place in the list.
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X