For Quick Alerts
  ALLOW NOTIFICATIONS  
  For Daily Alerts

  'ಸೈನಾ' ಬಯೋಪಿಕ್ ನಿಂದ ಶ್ರದ್ದಾ ಹೊರಕ್ಕೆ: ಶ್ರದ್ಧಾ ಜಾಗಕ್ಕೆ ಬಂದ ನಟಿ ಯಾರು?

  |

  ಖ್ಯಾತ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹವಾಲ್ ಜೀವನದ ಕಥೆ ತೆರೆಮೇಲೆ ಬರಲು ರೆಡಿಯಾಗುತ್ತಿದೆ. ಈಗಾಗಲೇ ಚಿತ್ರದ ಚಿತ್ರೀಕರಣ ಸಹ ಪ್ರಾರಂಭವಾಗಿದೆ. ಸೈನಾ ಪಾತ್ರದಲ್ಲಿ ಬಾಲಿವುಡ್ ನಟಿ ಶ್ರದ್ಧಾ ಕಪೂರ್ ಅಭಿನಯಿಸುತ್ತಿದ್ದರು. ಸೈನಾ ಬಯೋಪಿಕ್ ಬಗ್ಗೆ ಬಾಲಿವುಡ್ ನಲ್ಲಿ ಸಖತ್ ನಿರೀಕ್ಷೆ ಇದೆ. ಆದರೆ, ನಟಿ ಶ್ರದ್ಧಾ ತಮ್ಮ ಅಭಿಮಾನಿಗಳಿಗೆ ನಿರಾಸೆ ಮಾಡಿದ್ದಾರೆ.

  ಹೌದು, ಸೈನಾ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದ ಶ್ರದ್ಧಾ ಚಿತ್ರದಿಂದ ಹೊರ ನಡೆದಿದ್ದಾರೆ. ಈಗಾಗಲೇ ಚಿತ್ರೀಕರಣ ಪ್ರಾರಂಭವಾಗಿದ್ದು, ಚಿತ್ರಕ್ಕಾಗಿ ಶ್ರದ್ಧಾ ತಿಂಗಳುಗಳಿಂದ ಸಖತ್ ತಯಾರಿ ಕೂಡ ನಡೆಸಿಕೊಂಡಿದ್ದರು. ಅಷ್ಟೆಯಲ್ಲ ಚಿತ್ರದ ಫಸ್ಟ್ ಲುಕ್ ಕೂಡ ರಿವೀಲ್ ಆಗಿತ್ತು. ಸೈನಾ ಪಾತ್ರಕ್ಕೆ ಜೀವ ತುಂಬಿದ್ದ ಶ್ರದ್ಧಾ ಲುಕ್ ಅಭಿಮಾನಿಗಳ ಮೆಚ್ಚುಗೆ ಪಡೆದಿತ್ತು. ಆದರೀಗ ಶ್ರದ್ಧಾ ಧಿಡೀರನೆ ಈ ಚಿತ್ರದಿಂದ ಹೊರನಡೆದಿದ್ದಾರೆ.

  64ನೇ ಫಿಲಂಫೇರ್ ಪ್ರಶಸ್ತಿ ರೇಸಿನಲ್ಲಿ ಅಕ್ಷಯ್, ರಣಬೀರ್, ಅಲಿಯಾ

  ಶ್ರದ್ಧಾ ಅಭಿನಯಿಸಬೇಕಿದ್ದ ಸೈನಾ ಪಾತ್ರದಲ್ಲೀಗ ಮತ್ತೊರ್ವ ಬಾಲಿವುಡ್ ನಟಿ ಪರಿಣೀತಿ ಛೋಪ್ರ ಕಾಣಿಸಿಕೊಳ್ಳುತ್ತಿದ್ದಾರೆ. ಈ ಕಾರಣ ಈಗಾಗಲೇ ಚಿತ್ರೀಕರಣ ಮಾಡಿದ ಭಾಗವನ್ನು ಮತ್ತೆ ರೀ ಶೂಟ್ ಮಾಡಬೇಕಿದೆ. ಪಾತ್ರಕ್ಕಾಗಿ ಪರಿಣೀತಿ ಕೂಡ ಸಾಕಷ್ಟು ತಯಾರಿ ನಡೆಸಿಕೊಳ್ಳಬೇಕಿದೆ.

  ಅಂದ್ಹಾಗೆ, ಶ್ರದ್ಧಾ ಧಿಡೀರನೆ ಚಿತ್ರದಿಂದ ಹೊರಬರಲು ಕಾರಣ ಅನಾರೋಗ್ಯ. ಶ್ರದ್ದಾ ಡೇಂಗ್ಯು ಜ್ವರದಿಂದ ಬಳಲುತ್ತಿದ್ದಾರೆ. ಹಾಗಾಗಿ ಕೆಲವು ದಿನಗಳ ಕಾಲ ವಿಶ್ರಾಂತಿ ಪಡೆಯಬೇಕಿದೆಯಂತೆ. ಆ ಕಾರಣ ಚಿತ್ರದಿಂದ ಹೊರಬಂದಿರುವುದಾಗಿ ಹೇಳಲಾಗುತ್ತಿದೆ

  ವರ್ಷದ ನಂತರ ಸವಾಲಿನ ಪಾತ್ರದ ಮೂಲಕ ಬಂದ ದೀಪಿಕಾ

  ಆದರೆ, ಶ್ರದ್ಧಾ ಚಿತ್ರದಿಂಧ ಆಚೆ ಬರಲು ಅಸಲಿ ಕಾರಣವೇ ಬೇರೆ ಎನ್ನುತ್ತಿವೆ ಮೂಲಗಳು, ಯಾಕೆಂದರೆ, ಶ್ರದ್ದಾ ಬಳಿ ಈಗಾಗಲೇ ಸಾಲು ಸಾಲು ಸಿನಿಮಾಗಳಿವೆ. 'ಚಿಚೋರ್' ಸಿನಿಮಾದಲ್ಲಿ ಅಭಿನಯಿಸುತ್ತಿರುವ ಶ್ರದ್ಧಾ ಈ ಸಿನಿಮಾವನ್ನು ಮಾರ್ಚ್ ಕೊನೆಯಲ್ಲಿ ಮುಗಿಸಬೇಕಿದೆ. ಇನ್ನೂ ಮುಂದಿನ ತಿಂಗಳಿನಿಂದನೇ 'ಸ್ಟ್ರೀಟ್ ಡಾನ್ಸರ್ 3ಡಿ' ಸಿನಿಮಾ ಪ್ರಾರಂಭಿಸಬೇಕಿದೆ. ಇದರ ಜೊತೆಗೆ ತೆಲುಗಿನ 'ಸಾಹೋ' ಸಿನಿಮಾ ಕೂಡ ಆಗಸ್ಟ್ ನಲ್ಲಿ ರಿಲೀಸ್ ಪ್ಲಾನ್ ಆಗಿದೆ. 'ಬಾಗಿ-3' ಸಿನಿಮಾ ಸಹ ಲಿಸ್ಟ್ ನಲ್ಲಿದೆ.

  ಇದೆಲ್ಲದರ ಜೊತೆಗೆ ಸೈನಾ ನೆಹವಾಲ್ ಬಯೋಪಿಕ್ ಅನ್ನು ಈ ವರ್ಷದ ಕೊನೆಯಲ್ಲಿ ಅಥವಾ ಮುಂದಿನ ವರ್ಷಾರಂಭದಲ್ಲಿ ತೆರೆಗೆ ತರುವ ಪ್ಲಾನ್ ಮಾಡಿದೆ ಚಿತ್ರತಂಡ. ಹಾಗಾಗಿ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಇರುವ ಶ್ರದ್ಧಾ, ಸೈನಾ ಬಯೋಪಿಕ್ ನಿಂದ ಹೊರ ನಡೆದಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನು ಸೈನಾ ಪಾತ್ರದಲ್ಲಿ ಪರಿಣೀತಿ ಹೇಗೆ ಮಿಂಚಲಿದ್ದಾರೆ ಎನ್ನುವುದು ಪ್ರೇಕ್ಷಕರ ಕುತೂಹಲ. ಈ ಚಿತ್ರವನ್ನು ಅಮೋಲ್ ಗುಪ್ತ್ ನಿರ್ದೇಶನ ಮಾಡುತ್ತಿದ್ದಾರೆ.

  English summary
  Bolllywood actress Parineeti Chopra replaces Shraddha Kapoor in the Saina Nehwal biopic. Parineeti Chopra is set to start badminton training for her first sports drama shortly.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X