For Quick Alerts
  ALLOW NOTIFICATIONS  
  For Daily Alerts

  ಲೈಂಗಿಕ ಕಿರುಕುಳ ಪ್ರಕರಣ: ಎಲ್ಲಾ ಗೊತ್ತಿದ್ದರೂ ಇರ್ಫಾನ್ ಪಠಾಣ್ ಮೌನವಾಗಿರೋದು ಯಾಕೆ ಎಂದ ಪಾಯಲ್

  |

  ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿರುವ ನಟಿ ಪಾಯಲ್ ಘೋಷ್ ಇದೀಗ ಕ್ರಿಕೆಟಿಗ ಇರ್ಫಾನ್ ಪಠಾಣ್ ಮೌನವನ್ನು ಪ್ರಶ್ನಿಸಿದ್ದಾರೆ. ಕೆಲವು ವರ್ಷಗಳ ಹಿಂದೆ ಆಫೀಸಿಗೆ ಕರೆಸಿಕೊಂಡು ಅಸಭ್ಯವಾಗಿ ನಡೆದುಕೊಂಡಿದ್ದರು ಎಂದು ನಿರ್ದೇಶಕ ಅನುರಾಗ್ ವಿರುದ್ಧ ದೂರು ದಾಖಲಿಸಿದ್ದಾರೆ.

  ಈ ಪ್ರಕರಣದಲ್ಲಿ ಪಾಯಲ್ ಗೆ ಸೆಲೆಬ್ರಿಟಿಗಳಿಂದ ಹೆಚ್ಚಿನ ಬೆಂಬಲ ವ್ಯಕ್ತವಾಗಿಲ್ಲ. ಇದೀಗ ಇರ್ಫಾನ್ ಪಠಾಣ್ ಸೈಲೆಂಟ್ ಆಗಿರುವುದೇಕೆ ಎಂದು ಕೇಳುತ್ತಿದ್ದಾರೆ. ಅಂದ್ಹಾಗೆ ಅನುರಾಗ್ ಮತ್ತು ಪಾಯಲ್ ಘೋಷ್ ಪ್ರಕರಣಕ್ಕೂ ಇರ್ಫಾನ್ ಪಠಾಣ್ ಗೂ ಏನು ಸಂಬಂಧ ಎನ್ನುವ ಪ್ರಶ್ನೆ ಮೂಡುವುದು ಸಹಜ.

  ಜೀವಕ್ಕೆ ಬೆದರಿಕೆ ಇದೆ, ಭದ್ರತೆ ಕೊಡಿ ಎಂದ ನಟಿ ಪಾಯಲ್ ಘೋಷ್ಜೀವಕ್ಕೆ ಬೆದರಿಕೆ ಇದೆ, ಭದ್ರತೆ ಕೊಡಿ ಎಂದ ನಟಿ ಪಾಯಲ್ ಘೋಷ್

  ಇರ್ಫಾನ್, ಪಾಯಲ್ ಗೆ ಉತ್ತಮ ಸ್ನೇಹಿತರಂತೆ. ಅನುರಾಗ್ ಕಶ್ಯಪ್ ವಿಷಯವನ್ನು ಪಾಯಲ್ ಈ ಮೊದಲೇ ಇರ್ಫಾನ್ ಪಠಾಣ್ ಬಳಿ ಹೇಳಿಕೊಂಡಿದ್ದಾರಂತೆ. ಆದರೀಗ ಎಲ್ಲಾ ಗೊತ್ತಿರುವ ಇರ್ಫಾನ್ ಯಾಕೆ ಏನು ಮಾತನಾಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

  ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಪಾಯಲ್, 'ನಾನು ಅತ್ಯಾಚಾರ ವಿಚಾರ ಬಿಟ್ಟು ಎಲ್ಲವನ್ನೂ ಇರ್ಫಾನ್ ಪಠಾಣ್ ಬಳಿ ಹೇಳಿಕೊಂಡಿದ್ದೆ. ಒಮ್ಮೆ ಅವರು ನನ್ನ ಉತ್ತಮ ಸ್ನೇಹಿತರಾಗಿದ್ದರು' ಎಂದು ಹೇಳಿದ್ದಾರೆ. ಅನುರಾಗ್ ಕಶ್ಯಪ್ ತನ್ನ ಮನೆಗೆ ಬರುವಂತೆ ಮೆಸೇಜ್ ಮಾಡಿದಾಗ ಇರ್ಫಾನ್ ಪಠಾಣ್ ಕೂಡ ಜೊತೆಯಲ್ಲಿದ್ದರಂತೆ. ಈ ಬಗ್ಗೆ ಇರ್ಫಾನ್ ಗೆ ತಿಳಿಸಿರುವುದಾಗಿ ಪಾಯಲ್ ಹೇಳಿದ್ದಾರೆ.

  'ಇರ್ಫಾನ್ ಪಠಾಣ್ ಅವರಿಗೆ ಟ್ಯಾಗ್ ಮಾಡುವ ಉದ್ದೇಶವೆಂದರೆ ಅವರ ಬಗ್ಗೆ ನನಗೆ ಯಾವುದೇ ಆಸಕ್ತಿ ಇಲ್ಲ ಅಂತಲ್ಲ. ಆದರೆ ನಾನು ಮಿ.ಕಶ್ಯಪ್ ಬಗ್ಗೆ ಎಲ್ಲವನ್ನೂ ಹಂಚಿಕೊಂಡಿದ್ದೇನೆ. ಆದರೆ ಅತ್ಯಾಚಾರದ ವಿಷಯವಲ್ಲ. ನಾನು ಹಂಚಿಕೊಂಡ ವಿಷಯವನ್ನು ಅವರು ಮಾತನಾಡಬೇಕು ಎಂದು ನಿರೀಕ್ಷಿಸುತ್ತೇನೆ' ಎಂದಿದ್ದಾರೆ.

   Payal Ghosh Claims Irfan Pathan Knows The Incident Of Anurag Kashyap
  ಕೊರೊನ ಭಯ ಇಲ್ದೆ ಸಿಂಗಲ್ ಸ್ಕ್ರೀನ್ ನಲ್ಲಿ ಸಿನಿಮಾ ನೋಡಬಹುದ..? | Filmibeat Kannada

  ಈ ನಡುವೆ ಪಾಯಲ್ 'ಮಾಫಿಯಾ ಗ್ಯಾಂಗ್ ಶೀಘ್ರದಲ್ಲೇ ನನ್ನನ್ನು ಸಾಯಿಸುತ್ತದೆ' ಎಂದು ಪಿಎಂ ಮೋದಿಗೆ ಸಂದೇಶ ಕಳುಹಿಸಿದ್ದರು. ಟ್ವೀಟ್ ನಲ್ಲಿ ನರೇಂದ್ರ ಮೋದಿ ಮತ್ತು ರಾಷ್ಟ್ರೀಯ ಮಹಿಳಾ ಆಯೋಗದ ಮುಖ್ಯಸ್ಥೆ ರೇಖಾ ಶರ್ಮಾ ಅವರನ್ನು ಟ್ಯಾಗ್ ಮಾಡಿದ್ದರು.

  Read more about: anurag kashyap bollywood
  English summary
  Actress Payal Ghosh claims Irfan pathan knows the incident of Anurag Kashyap sexual Harrasment.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X