For Quick Alerts
  ALLOW NOTIFICATIONS  
  For Daily Alerts

  ಸಹಾಯಕ್ಕೆ ಅಂಗಲಾಚಿದರೂ ಸಹೋದರನನ್ನು ಉಳಿಸಿಕೊಳ್ಳಲಾಗಲಿಲ್ಲ ನಟಿಗೆ

  |

  ಕೊರೊನಾ ಎರಡನೇ ಅಲೆಗೆ ಪ್ರತಿದಿನ ಸರಾಸರಿ 3500 ಕ್ಕೂ ಹೆಚ್ಚು ಮಂದಿ ದೇಶದಾದ್ಯಂತ ಸಾವಿಗೀಡಾಗುತ್ತಿದ್ದಾರೆ. ಕೊರೊನಾಕ್ಕೆ ಸೆಲೆಬ್ರಿಟಿಗಳು, ಸಾಮಾನ್ಯರು ಎಂಬ ಬೇಧ ಭಾವವಿಲ್ಲ.

  ದಕ್ಷಿಣ ಭಾರತದ ಖ್ಯಾತ ನಟಿ ಪಿಯಾ ಬಾಜಪೇಯಿ ಅವರು ಕೊರನಾದಿಂದ ತಮ್ಮ ಸಹೋದರನನ್ನು ಕಳೆದುಕೊಂಡಿದ್ದಾರೆ. ಸಹೋದರ ನಿಧನ ಹೊಂದುವ ಕೆಲವೇ ಗಂಟೆಗಳ ಮುಂಚೆ ಸಹಾಯಕ್ಕಾಗಿ ನಟಿ ಪಿಯಾ ಬಾಜಪೇಯಿ ಟ್ವಿಟ್ಟರ್‌ನಲ್ಲಿ ಅಂಗಲಾಚಿದ್ದರು.

  'ಉತ್ತರ ಪ್ರದೇಶದ ಫಾರುಖಾಬಾದ್‌ನ ಕಯಾಮ್ ಘಂಜ್ ಬ್ಲಾಕ್‌ನಲ್ಲಿ ತ್ವರಿತವಾಗಿ ಸಹಾಯ ಬೇಕಾಗಿದೆ. ನನ್ನ ಸಹೋದರ ತೀವ್ರ ಅನಾರೋಗ್ಯದಲ್ಲಿದ್ದಾನೆ ಅವನಿಗೆ ವೆಂಟೆಲೇಟರ್‌ ಉಳ್ಳ ಆಸ್ಪತ್ರೆ ಬೆಡ್ ಸಿಗುತ್ತಿಲ್ಲ ದಯವಿಟ್ಟು ಯಾರಾದರೂ ಸಹಾಯ ಮಾಡಿ, ನಮ್ಮ ಕೈಯಲ್ಲಿ ಏನೂ ಮಾಡಲು ಆಗುತ್ತಿಲ್ಲ' ಎಂದು ಪಿಯಾ ಬಾಜಪೇಯಿ ಆರು ಗಂಟೆಗಳ ಹಿಂದೆ ಟ್ವೀಟ್ ಮಾಡಿದ್ದರು.

  'ಬಿಜೆಪಿ ಶಾಸಕ ತೇಜೇಂದರ್ ಬಗ್ಗಾ ಮೊಬೈಲ್ ಸಂಖ್ಯೆ ಕೊಡಿ' ಎಂದೂ ಸಹ ನಟ ಪಿಯಾ ಬಾಜಪೇಯಿ ಟ್ವೀಟ್ ಮಾಡಿದ್ದರು. ಟ್ವೀಟ್‌ಗೆ ಸಾಕಷ್ಟು ಮಂದಿ ರಿಪ್ಲೈ ಮಾಡಿದ್ದರು, ಹಲವರು ರೀಟ್ವೀಟ್ ಮಾಡಿದ್ದರು. ಆದರೆ ನಟಿ ಹೀಗೆ ಸಹಾಯಕ್ಕಾಗಿ ಟ್ವೀಟ್‌ ಮಾಡಿದ ಎರಡು ಗಂಟೆಗಳಲ್ಲಿ ಸಹೋದರ ಅಸುನೀಗಿದ್ದಾನೆ. ಆ ವಿಷಯವನ್ನು ಸಹ ಅವರು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ.

  ಉತ್ತರ ಪ್ರದೇಶದಲ್ಲಿ ಹುಟ್ಟಿ ಅಲ್ಲಿಯೇ ನೆಲೆಸಿರುವ ಪಿಯಾ ಬಾಜಪೇಯಿ ದಕ್ಷಿಣ ಭಾರತದ ಸಿನಿಮಾಗಳಲ್ಲಿ ಹೆಚ್ಚಿಗೆ ನಟಿಸಿದ್ದಾರೆ. ಪ್ರತಿಭಾವಂತ ನಟಿ ಆಗಿರುವ ಪಿಯಾ ಬಾಜಪೇಯಿ ತಮಿಳಿನ 'ಗೋವಾ', 'ಕೋ' ಇನ್ನೂ ಹಲವಾರು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ.

  ಪಶ್ಚಿಮ‌ ಬಂಗಾಳ ಮತ್ತು ದೀದಿ ಬಗ್ಗೆ ಆಕ್ಷೇಪಾರ್ಹ ಪದ ಬಳಕೆಗೆ ಸಸ್ಪೆಂಡ್ ಮಾಡಿದ ಟ್ವಿಟ್ಟರ್ | Filmibeat Kannada

  ತಮಿಳು ಮಾತ್ರವೇ ಅಲ್ಲದೆ ಮಲಯಾಳಂ, ತೆಲುಗು, ಹಿಂದಿ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ ಪಿಯಾ ಬಾಜಪೇಯಿ.

  English summary
  Actress Pia Bajpai lost her brother hours after she begged for help through twitter. She asked to arrange hospital bed with ventilator.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X