»   » ಬಾಕ್ಸ್ ಆಫೀಸಲ್ಲಿ ಹೊಸ ವಿಕ್ರಮ ಮೆರೆದ 'ಪಿಕೆ' ಚಿತ್ರ

ಬಾಕ್ಸ್ ಆಫೀಸಲ್ಲಿ ಹೊಸ ವಿಕ್ರಮ ಮೆರೆದ 'ಪಿಕೆ' ಚಿತ್ರ

Posted By:
Subscribe to Filmibeat Kannada

ಅಮೀರ್ ಖಾನ್ ಮತ್ತು ಅನುಷ್ಕಾ ಶರ್ಮ ಜೋಡಿಯ 'ಪಿಕೆ' ಚಿತ್ರ ಹೊಸ ವಿಕ್ರಮ ಮೆರೆದಿದೆ. ಬಾಲಿವುಡ್ ನಲ್ಲೇ ಅತಿ ಹೆಚ್ಚು ಗಳಿಕೆಯ ಚಿತ್ರವಾಗಿ ಪಿಕೆ ಹೊರಹೊಮ್ಮಿದೆ. ಇದುವರೆಗೂ ಬಾಕ್ಸ್ ಆಫೀಸಲ್ಲಿ ರು. 278.52 ಕೋಟಿ ಗಳಿಸುವ ಮೂಲಕ ಹೊಸ ದಾಖಲೆ ನಿರ್ಮಿಸಿದೆ.

ಇದುವರೆಗೂ 'ಧೂಮ್ 3' ಚಿತ್ರವೇ ಅತಿ ಹೆಚ್ಚು ಗಳಿಕೆಯ ಚಿತ್ರವಾಗಿ ಬೀಗುತ್ತಿತ್ತು. ಡಿಸೆಂಬರ್ 19ರಂದು ತೆರೆಕಂಡ 'ಪಿಕೆ' ಆ ಚಿತ್ರದ ದಾಖಲೆಯನ್ನು ನಾಮಾವಶೇಷ ಮಾಡಿದೆ. ಚಿತ್ರದಲ್ಲಿ ಹಿಂದೂ ದೇವತೆಗಳನ್ನು ಅವಮಾನಿಸಲಾಗಿದೆ ಎಂದು ಬಲಪಂಥೀಯ ಸಂಘಟನೆಗಳು ಚಿತ್ರವನ್ನು ಬಲವಾಗಿ ಖಂಡಿಸುತ್ತಿವೆ. [ಪಿಕೆ ಚಿತ್ರ ವಿಮರ್ಶೆ]

'PK' emerges as Bollywood's Highest Grossing Film

ಆದರೆ ತಮ್ಮ ಚಿತ್ರದಲ್ಲಿ ಆ ತರಹದ್ದೇನು ಇಲ್ಲ ಎಂದು ವಾದ ಮಂಡಿಸುತ್ತಿದ್ದಾರೆ ಚಿತ್ರದ ನಿರ್ದೇಶಕರಾದ ರಾಜ್ ಕುಮಾರ್ ಹಿರಾನಿ. ತಮ್ಮ ಚಿತ್ರದ ಬಗೆಗೆ ಜನರು ಬಾಯಿಂದ ಬಾಯಿಗೆ ಹರಡುತ್ತಿರುವ ಒಳ್ಳೆಯ ಮಾತುಗಳೇ ಸಾಕು, ಚಿತ್ರ ಹೇಗಿದೆ ಎನ್ನಲು ಎಂದು ಹಿರಾನಿ (52) ಖುಷಿಯಾಗುತ್ತಾರೆ.

ಚಿತ್ರದಲ್ಲಿ ಕಂಟೆಂಟೇ ಕಿಂಗ್ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಚಿತ್ರ ಬಾಕ್ಸ್ ಆಫೀಸಲ್ಲಿ ಇಷ್ಟೆಲ್ಲಾ ಕಮಾಲ್ ಮಾಡುತ್ತದೆ ಎಂದು ಕನಸು ಮನಸಿನಲ್ಲೂ ಎಣಿಸಿರಲಿಲ್ಲ. ಚಿತ್ರವನ್ನು ಜನ ಮತ್ತೆ ಮತ್ತೆ ನೋಡುತ್ತಿದ್ದಾರೆ. ಮುಂದೆಯೂ ಇದೇ ರೀತಿಯ ಉತ್ತಮ ಚಿತ್ರಗಳನ್ನು ಮಾಡಬೇಕೆಂದಿದ್ದೇನೆ ಎಂದಿದ್ದಾರೆ ನಿರ್ದೇಶಕರು.

ರಾಜ್ ಕುಮಾರ್ ಹಿರಾನಿ ಹಾಗೂ ಅಮೀರ್ ಕಾಂಬಿನೇಷನಲ್ಲಿ ಈ ಹಿಂದೆ ಬಂದಂತಹ '3 ಈಡಿಯಟ್ಸ್' ಚಿತ್ರ ಬಾಕ್ಸ್ ಆಫೀಸಲ್ಲಿ ರು.244 ಕೋಟಿ ಬಾಚಿತ್ತು. ಶಾರುಖ್ ಖಾನ್ ಅವರ ಚೆನ್ನೈ ಎಕ್ಸ್ ಪ್ರೆಸ್ ಚಿತ್ರ ರು.228 ಕೋಟಿಗೆ ಉಸ್ಸಪ್ಪಾ ಎಂದಿತ್ತು. ಆ ಎಲ್ಲಾ ದಾಖಲೆಗಳನ್ನು ಪಿಕೆ ಚಿತ್ರ ಧೂಳೀಪಟ ಮಾಡಿದೆ. (ಏಜೆನ್ಸೀಸ್)

English summary
The producers of Aamir Khan-starrer 'PK' said the film has broken 'Dhoom 3' record to become the biggest earner in Bollywood by collecting Rs 278.52 crores since its release on December 19.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada