»   » ಪ್ರಭಾಸ್ 'ಆಗಲ್ಲ' ಎಂದು ಬಿಟ್ಟ ಪಟ್ಟಿಯಲ್ಲಿ ಕರಣ್ ಜೋಹರ್ ಚಿತ್ರವೂ ಒಂದು.?

ಪ್ರಭಾಸ್ 'ಆಗಲ್ಲ' ಎಂದು ಬಿಟ್ಟ ಪಟ್ಟಿಯಲ್ಲಿ ಕರಣ್ ಜೋಹರ್ ಚಿತ್ರವೂ ಒಂದು.?

Posted By:
Subscribe to Filmibeat Kannada

'ಬಾಹುಬಲಿ-2' ಸಿನಿಮಾ ಸೂಪರ್ ಸಕ್ಸಸ್ ಆದ್ಮೇಲೆ 'ಡಾರ್ಲಿಂಗ್' ಪ್ರಭಾಸ್ ಇಂಟರ್ ನ್ಯಾಷನಲ್ ಸೆಲೆಬ್ರಿಟಿ ಆಗ್ಬಿಟ್ಟಿದ್ದಾರೆ.

'ಬಾಹುಬಲಿ-2' ಸಿನಿಮಾ ನಂತರ ಬರೀ ಟಾಲಿವುಡ್ ನಲ್ಲಿ ಮಾತ್ರ ಪ್ರಭಾಸ್ ಬೇಡಿಕೆ ಹೆಚ್ಚಾಗಿರಬಹುದು ಅಂತ ನೀವು ಅಂದುಕೊಂಡಿದ್ದರೆ ನಿಮ್ಮ ಊಹೆ ತಪ್ಪು. ಯಾಕಂದ್ರೆ, ಪ್ರಭಾಸ್ ಗೆ ಬಾಲಿವುಡ್ ನಲ್ಲೂ ಡಿಮ್ಯಾಂಡ್ ಹೆಚ್ಚಾಗಿದೆ.[ಬರೋಬ್ಬರಿ 18 ಕೋಟಿ ಗಿಟ್ಟಿಸುವ ಅವಕಾಶವನ್ನ ಎಡಗಾಲಿನಲ್ಲಿ ಒದ್ದ ಪ್ರಭಾಸ್.!]

ಇಲ್ಲಿಯವರೆಗೂ ಬಾಲಿವುಡ್ ನ ಅತಿರಥ ಮಹಾರಥರು ಬಾಕ್ಸ್ ಆಫೀಸ್ ನಲ್ಲಿ ನಿರ್ಮಿಸಿದ್ದ ದಾಖಲೆಗಳನ್ನೆಲ್ಲಾ ಧೂಳಿಪಟ ಮಾಡಿರುವ ಪ್ರಭಾಸ್, ಅಪ್ಪಟ ಹಿಂದಿ ಸಿನಿಮಾದಲ್ಲಿ ನಟಿಸಬೇಕು ಎಂಬುದು ಅಲ್ಲಿಯವರ ಕನವರಿಕೆ. ಅದನ್ನೇ ಪ್ರಭಾಸ್ ಮುಂದೆ ಕರಣ್ ಜೋಹರ್ ಕೂಡ ಪ್ರಸ್ತಾಪ ಮಾಡಿದ್ದರು. ಆದ್ರೆ, ಪ್ರಭಾಸ್ ಮಾತ್ರ 'ಸದ್ಯಕ್ಕೆ ಆಗಲ್ಲ' ಎಂದಿದ್ದಾರೆ.! ಮುಂದೆ ಓದಿರಿ....

ಕರಣ್ ಜೋಹರ್ ಚಿತ್ರವನ್ನ ರಿಜೆಕ್ಟ್ ಮಾಡಿದ ಪ್ರಭಾಸ್

'ಬಾಹುಬಲಿ-2' ಸಕ್ಸಸ್ ಬಳಿಕ ತಮ್ಮ ಬಾಲಿವುಡ್ ಸಿನಿಮಾದಲ್ಲಿ ನಟಿಸುವಂತೆ ಪ್ರಭಾಸ್ ಬಳಿ ಕರಣ್ ಜೋಹರ್ ಕೇಳಿಕೊಂಡಿದ್ದರಂತೆ. ಆದ್ರೆ, ಅದಕ್ಕೆ ಪ್ರಭಾಸ್ ಒಪ್ಪಿಕೊಂಡಿಲ್ಲ. 'ಸದ್ಯಕ್ಕೆ ಆಗಲ್ಲ' ಎಂದು ನಯವಾಗಿ ತಿರಸ್ಕರಿಸಿದ್ದಾರೆ.

ಬಾಲಿವುಡ್ ನಲ್ಲಿ ಇಂಟ್ರೆಸ್ಟ್ ಇಲ್ವಾ.?

ಕರಣ್ ಜೋಹರ್ ಚಿತ್ರವನ್ನ ಪ್ರಭಾಸ್ ರಿಜೆಕ್ಟ್ ಮಾಡಿದ್ದಾರೆ ಎಂದ ಮಾತ್ರಕ್ಕೆ, ಪ್ರಭಾಸ್ ಗೆ ಬಾಲಿವುಡ್ ನಲ್ಲಿ ಇಂಟ್ರೆಸ್ಟ್ ಇಲ್ಲ ಅಂತಲ್ಲ. ನಿಜ ಹೇಳುವುದಾದರೆ, ಪ್ರಭಾಸ್ ಬಳಿ ಡೇಟ್ಸ್ ಇಲ್ಲ.

'ಸಾಹೋ' ಚಿತ್ರದಲ್ಲಿ ಪ್ರಭಾಸ್ ಬಿಜಿ

'ಬಾಹುಬಲಿ-2' ಚಿತ್ರದ ಪ್ರಚಾರ ಕಾರ್ಯ ಮುಗಿದ ಮೇಲೆ ಹಾಲಿಡೇ ಮೂಡ್ ನಲ್ಲಿ ಇದ್ದ ಪ್ರಭಾಸ್, ಇನ್ನು ಕೆಲವೇ ದಿನಗಳಲ್ಲಿ 'ಸಾಹೋ' ಚಿತ್ರದ ಚಿತ್ರೀಕರಣದಲ್ಲಿ ತೊಡಗಿಕೊಳ್ಳಲಿದ್ದಾರೆ. ಟಾಲಿವುಡ್ ನಲ್ಲಿ ತಮ್ಮ ಕಮಿಟ್ಮೆಂಟ್ ಮುಗಿದ ಬಳಿಕ ಬಾಲಿವುಡ್ ಕಡೆ ಗಮನ ಹರಿಸುವುದಾಗಿ ಪ್ರಭಾಸ್ ತಿಳಿಸಿದ್ದಾರೆ.

ಪ್ರಭಾಸ್ 'ರಿಜೆಕ್ಟ್ ಲಿಸ್ಟ್' ತುಂಬಾ ದೊಡ್ಡದು.!

'ಬಾಹುಬಲಿ' ಚಿತ್ರಕ್ಕಾಗಿ ನಾಲ್ಕೈದು ವರ್ಷಗಳು ಮೀಸಲಿಟ್ಟಿದ್ದ ಪ್ರಭಾಸ್, ಬೇರೆ ಯಾವುದೇ ಚಿತ್ರಕ್ಕೂ ಗ್ರೀನ್ ಸಿಗ್ನಲ್ ಕೊಟ್ಟಿರಲಿಲ್ಲ. 'ಬಾಹುಬಲಿ' ಸಿನಿಮಾಗಾಗಿ ತಮ್ಮ ಮದುವೆಯನ್ನೂ ಮುಂದೂಡಿದ್ದ ಪ್ರಭಾಸ್, ಹಲವಾರು ಬ್ರ್ಯಾಂಡ್ ಗಳಿಗೆ ಪ್ರಚಾರ ರಾಯಭಾರಿ ಆಗುವುದನ್ನೂ ತಿರಸ್ಕರಿಸಿದ್ದರು. ಪ್ರಭಾಸ್ ರವರ 'ರಿಜೆಕ್ಟ್ ಲಿಸ್ಟ್' ನಲ್ಲಿ ಕರಣ್ ಜೋಹರ್ ಚಿತ್ರವೂ ಒಂದು.!

English summary
Tollywood Actor Prabhas rejects Karan Johar's Bollywood Film.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X