»   » ಬರೋಬ್ಬರಿ 18 ಕೋಟಿ ಗಿಟ್ಟಿಸುವ ಅವಕಾಶವನ್ನ ಎಡಗಾಲಿನಲ್ಲಿ ಒದ್ದ ಪ್ರಭಾಸ್.!

ಬರೋಬ್ಬರಿ 18 ಕೋಟಿ ಗಿಟ್ಟಿಸುವ ಅವಕಾಶವನ್ನ ಎಡಗಾಲಿನಲ್ಲಿ ಒದ್ದ ಪ್ರಭಾಸ್.!

Posted By:
Subscribe to Filmibeat Kannada

'ಬಾಹುಬಲಿ-2' ಸಿನಿಮಾ ಸೂಪರ್ ಡ್ಯೂಪರ್ ಹಿಟ್ ಆಗುತ್ತಿದ್ದಂತೆಯೇ, ನಟ ಪ್ರಭಾಸ್ ಬರೀ ಟಾಲಿವುಡ್ ನಲ್ಲಿ ಮಾತ್ರ ಅಲ್ಲ... ಇಡೀ ಭಾರತದಲ್ಲಿಯೇ ಬಹು ಬೇಡಿಕೆಯ 'ಸ್ಟಾರ್' ಆಗಿದ್ದಾರೆ.

ಎಲ್ಲ ಬಿಗ್ ಬಜೆಟ್ ಸಿನಿಮಾಗಳಿಗೂ ಪ್ರಭಾಸ್ ಬೇಕು... ಯಾವುದೇ ಬ್ರ್ಯಾಂಡ್ ಆದರೂ ಅದನ್ನ ಪ್ರಭಾಸ್ ಪ್ರಮೋಟ್ ಮಾಡಬೇಕು ಎಂಬ ಮಟ್ಟಕ್ಕೆ ಪ್ರಭಾಸ್ ಡಿಮ್ಯಾಂಡ್ ಹೈಕ್ ಆಗಿಬಿಟ್ಟಿದೆ.

ಯಶಸ್ಸಿನ ಏಣಿಯ ಎತ್ತರದಲ್ಲಿ ಇದ್ದರೂ, ಅದರ ಅಮಲಿನಲ್ಲಿ ಮಾತ್ರ ಪ್ರಭಾಸ್ ತೇಲುತ್ತಿಲ್ಲ. ಅರ್ಧ ರಾತ್ರಿಯಲ್ಲಿ ಕೊಡೆಯನ್ನೂ ಹಿಡಿದಿಲ್ಲ. ದುಡ್ಡಿಗಾಗಿ ಬಂದ ಅವಕಾಶಗಳನ್ನೆಲ್ಲ ಬಳಿದು ಬಾಚಿಕೊಳ್ಳದೇ, ಅಳೆದು ತೂಗಿ ಯೋಚಿಸಿ ಪ್ರಭಾಸ್ ಗ್ರೀನ್ ಸಿಗ್ನಲ್ ನೀಡುತ್ತಿದ್ದಾರೆ. ಹೀಗಾಗಿ ಬರೋಬ್ಬರಿ 18 ಕೋಟಿ ಗಿಟ್ಟಿಸುವ ಅವಕಾಶವನ್ನ ಪ್ರಭಾಸ್ ಕೈ ಬಿಟ್ಟಿದ್ದಾರೆ. ಮುಂದೆ ಓದಿ....

ಪ್ರಭಾಸ್ ಗಾಗಿ ಹುಡುಕ್ಕೊಂಡು ಬಂದ ಆಫರ್ ಗಳು ಒಂದೆರಡಲ್ಲ.!

'ಬಾಹುಬಲಿ' ಪ್ರಭಾಸ್ 'ಪ್ರಚಾರ ರಾಯಭಾರಿ' ಆಗಲು ಹುಡುಕ್ಕೊಂಡು ಬಂದ ಅವಕಾಶಗಳು ಒಂದೆರಡಲ್ಲ. ಉಡುಪಿನ ಬ್ರ್ಯಾಂಡ್ ಗಳಿಂದ ಹಿಡಿದು ಫಿಟ್ನೆಸ್ ವರೆಗೂ ಅನೇಕ ಕಂಪನಿಗಳು ಪ್ರಭಾಸ್ ಗೆ ಕೋಟಿಗಟ್ಟಲೆ ಆಫರ್ ಮಾಡಿದೆ. ಆದ್ರೆ, ಅದ್ಯಾವುದಕ್ಕೂ ಪ್ರಭಾಸ್ ಒಪ್ಪಿಗೆ ನೀಡಿಲ್ಲ.

ಎಡಗಾಲಿನಲ್ಲಿ ಒದ್ದ ಪ್ರಭಾಸ್

ಇವೆಲ್ಲದರ ಜೊತೆಗೆ 'ಫೇರ್ ನೆಸ್' ಬ್ರ್ಯಾಂಡ್ ಒಂದಕ್ಕೂ ಪ್ರಚಾರ ರಾಯಭಾರಿ ಆಗುವಂತೆ ಪ್ರಖ್ಯಾತ ಕಂಪನಿಯೊಂದು ಪ್ರಭಾಸ್ ಗೆ ಬರೋಬ್ಬರಿ 18 ಕೋಟಿ ಆಫರ್ ನೀಡಿತ್ತು. ಆದ್ರೆ, ಅದನ್ನ ಪ್ರಭಾಸ್ ರಿಜೆಕ್ಟ್ ಮಾಡಿದ್ದಾರೆ.

ಪ್ರಭಾಸ್ ಗೆ ಅತಿ ಹೆಚ್ಚು ಬೆಲೆ.!

ಇಲ್ಲಿಯವರೆಗೂ 'ಫೇರ್ ನೆಸ್' ಬ್ರ್ಯಾಂಡ್ ಗೆ 'ಪ್ರಚಾರ ರಾಯಭಾರಿ' ಆಗಲು ಅತಿ ಹೆಚ್ಚು ಮೊತ್ತವನ್ನ (18 ಕೋಟಿ) ಕೋಟ್ ಮಾಡಿರುವುದು ಪ್ರಭಾಸ್ ಗಾಗಿಯೇ. ಆದರೂ ಅದನ್ನ ಪ್ರಭಾಸ್ ನಿರಾಕರಿಸಿದ್ದಾರೆ.

'ಮಹಿಂದ್ರಾ'ಗೆ ಮಾತ್ರ ಒಪ್ಪಿಗೆ

ಸದ್ಯ 'ಮಹಿಂದ್ರಾ' ಕಂಪನಿಯ ಹೊಚ್ಚ ಹೊಸ ಎಕ್ಸ್.ಯು.ವಿ ಕಾರ್ ಗೆ ಮಾತ್ರ ಪ್ರಚಾರ ನೀಡಲು ಪ್ರಭಾಸ್ ಒಪ್ಪಿಕೊಂಡಿದ್ದಾರೆ.

English summary
'Baahubali' Actor Prabhas rejects Brand Endorsement worth Rs 18 crore.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X