Just In
Don't Miss!
- Lifestyle
ದಿನ ಭವಿಷ್ಯ: ಶುಕ್ರವಾರದ ರಾಶಿಫಲ ಹೇಗಿದೆ ನೋಡಿ
- News
ಡ್ರಗ್ಸ್ ಪ್ರಕರಣ: ಜೈಲಿನಲ್ಲಿ ಜೀವಕ್ಕೆ ಬೆದರಿಕೆ ಇದೆ ಎಂದು ಬಿಜೆಪಿ ಯುವ ನಾಯಕಿ ಪಮೇಲಾ ಆರೋಪ
- Automobiles
ರ್ಯಾಪಿಡ್ ಬದಲಾಗಿ ಹೊಸ ಸಿ ಸೆಗ್ಮೆಂಟ್ ಸೆಡಾನ್ ಬಿಡುಗಡೆ ಮಾಡಲಿದೆ ಸ್ಕೋಡಾ
- Sports
ಭಾರತ vs ಇಂಗ್ಲೆಂಡ್: ಕೊಹ್ಲಿ ಜೊತೆಗಿನ ಮಾತಿನ ಚಕಮಕಿ ಬಗ್ಗೆ ಪ್ರತಿಕ್ರಿಯಿಸಿದ ಬೆನ್ ಸ್ಟೋಕ್ಸ್
- Finance
ಮತ್ತಷ್ಟು ಕಡಿಮೆಯಾಯ್ತು ಚಿನ್ನದ ಬೆಲೆ: ಮಾರ್ಚ್ 04ರ ಬೆಲೆ ಇಲ್ಲಿದೆ
- Education
UAS Dharwad Recruitment 2021: ಅರೆಕಾಲಿಕ ಉಪನ್ಯಾಸಕ ಹುದ್ದೆಗಳಿಗೆ ನೇರ ಸಂದರ್ಶನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಶಾರುಖ್ ಖಾನ್ ಅನ್ನು ಖರೀದಿಸಿದ ಪ್ರೀತಿ ಜಿಂಟಾ ಖುಷಿಗೆ ಪಾರವಿಲ್ಲ!
ನಟಿ, ಉದ್ಯಮಿ ಪ್ರೀತಿ ಜಿಂಟಾ ಹಾಗೂ ಶಾರುಖ್ ಖಾನ್ ಅವರುಗಳು ಬಹಳ ಉತ್ತಮ ಗೆಳೆಯರು. ಪ್ರೀತಿ ಜಿಂಟಾ ಮೊದಲ ಸಿನಿಮಾ ಮಾಡಿದ್ದು ಶಾರುಖ್ ಖಾನ್ ಜೊತೆಗೆ, ಆ ನಂತರ ಈ ಜೋಡಿ ಹಲವು ಹಿಟ್ ಸಿನಿಮಾಗಳನ್ನು ಬಾಲಿವುಡ್‌ಗೆ ನೀಡಿದೆ.
ಇದೀಗ ನಟಿ ಪ್ರೀತಿ ಜಿಂಟಾ, ಶಾರುಖ್ ಖಾನ್ ಅನ್ನು ಖರೀದಿಸಿದ್ದಾರೆ. ಹೌಹಾರಬೇಡಿ, ಪ್ರೀತಿ ಖರೀದಿಸಿರುವುದು ನಟ ಶಾರುಖ್ ಖಾನ್ ಅನ್ನು ಅಲ್ಲ ಕ್ರಿಕೆಟಿಗ ಶಾರುಖ್ ಖಾನ್ ಅನ್ನು.
ನಿನ್ನೆ ನಡೆದ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದ ಪಂಜಾಜ್ ಕಿಂಗ್ಸ್ ತಂಡದ ಒಡತಿ ಪ್ರೀತಿ ಜಿಂಟಾ, ಹರಾಜು ಪ್ರಕ್ರಿಯೆಯಲ್ಲಿ ಶಾರುಖ್ ಖಾನ್ ಎಂಬ ಆಟಗಾರನ್ನು ಹರಾಜಿನಲ್ಲಿ ಖರೀದಿಸಿದರು. ಈ ವೇಳೆ ಅವರ ಟೇಬಲ್‌ನ ಪಕ್ಕದಲ್ಲಿಯೇ ಶಾರುಖ್ ಖಾನ್ ಒಡೆತನದ ಕೆಕೆಆರ್ ತಂಡದ ಸದಸ್ಯರು ಕೂತಿದ್ದರು. ಅದರಲ್ಲಿ ಶಾರುಖ್ ಖಾನ್ ದೊಡ್ಡ ಮಗ ಆರ್ಯನ್ ಖಾನ್ ಸಹ ಇದ್ದರು.
ಕ್ರಿಕೆಟಿಗ ಶಾರುಖ್ ಖಾನ್ ಅನ್ನು ಖರೀದಿಸಿದ ಕೂಡಲೇ ಕೆಕೆಆರ್ ತಂಡದ ಕಡೆ ತಿರುಗಿ, ಆರ್ಯನ್ ಖಾನ್ ಅನ್ನು ಉದ್ದೇಶಿಸಿ, 'ನಾವು ಶಾರುಖ್ ಖಾನ್ ಅನ್ನು ಕೊಂಡು ಕೊಂಡು ಬಿಟ್ಟೆವು' ಎಂದು ಹಾಸ್ಯ ಚಟಾಕಿ ಹಾರಿಸಿ, ತಮ್ಮ ಪಂಜಾಬ್ ತಂಡದ ಸದಸ್ಯರ ಕೈತಟ್ಟಿ ಸಂಭ್ರಮ ಆಚರಿಸಿದರು.
ಪ್ರೀತಿ ಜಿಂಟಾರ ಹಾಸ್ಯಪ್ರಜ್ಞೆಗೆ ಮೆಚ್ಚುಗೆ ವ್ಯಕ್ತಪಡಿಸಿ ಸಣ್ಣಗೆ ನಕ್ಕರು ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್. ಶಾರುಖ್ ಖಾನ್ ಕೆಕೆಆರ್ ತಂಡದ ಮಾಲೀಕರಾಗಿದ್ದು ಅವರ ಗೆಳತಿ ಜೂಹಿ ಚಾವ್ಲಾ ಸಹ ಮಾಲಕಿ ಆಗಿದ್ದಾರೆ. ನಿನ್ನೆಯ ಹರಾಜು ಪ್ರಕ್ರಿಯೆಯಲ್ಲಿ ಜೂಹಿ ಚಾವ್ಲಾ ಪುತ್ರಿ ಜಾಹ್ನವಿ ಸಹ ಭಾಗವಹಿಸಿದ್ದರು. ಇಬ್ಬರು ಮಾಲೀಕರ ಮಕ್ಕಳು ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.