Don't Miss!
- Sports
ಶುಭ್ಮನ್ ಗಿಲ್ಗಿದೆ ಶಿಖರ್ ಧವನ್ರ ಈ 3 ದಾಖಲೆ ಮುರಿಯುವ ಅವಕಾಶ
- News
ಬಿಬಿಎಂಪಿಯಿಂದ ಫೆಬ್ರುವರಿ. 2 ರಿಂದ 5 ರವರೆಗೆ 'ಖಾತಾ ಮೇಳ' ಆಯೋಜನೆ
- Lifestyle
ಈ ಚಿಕ್ಕ ಬದಲಾವಣೆ ಮಾಡಿದರೆ ಸಾಕು ತೂಕ ಕಡಿಮೆಯಾಗುವುದು
- Technology
WhatsApp: ವಾಟ್ಸಾಪ್ ಮ್ಯಾಕ್ಒಎಸ್ MacOS ಆ್ಯಪ್ ಬಿಡುಗಡೆ! ಇದನ್ನು ಬಳಸುವುದು ಹೇಗೆ?
- Finance
Budget 2023: ಹಲ್ವಾ ಸಮಾರಂಭ ಎಂದರೇನು, ಪ್ರಾಮುಖ್ಯತೆಯೇನು?
- Automobiles
ಬೊಲೆರೊ ನಿಯೋ ಲಿಮಿಟೆಡ್ ಎಡಿಷನ್ ಕುರಿತ ಟಾಪ್ ವಿಷಯಗಳಿವು
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಬಾಲಿವುಡ್‌ಗೆ ತಿವಿದ ಪ್ರಿಯಾಮಣಿ: ಸೌತ್ ತಾರೆಯರನ್ನು ಹೇಗೆ ಅಳೆಯಲಾಗುತ್ತೆ?
ಇತ್ತೀಚೆಗೆ ಬಾಲಿವುಡ್‌ನಲ್ಲಿ ಮಿಂಚುತ್ತಿರುವ ಸೌತ್ ಸಿನಿಮಾ ತಾರೆಯರ ಸಂಖ್ಯೆ ಹೆಚ್ಚಾಗಿದೆ. ನಾ ಮುಂದು ತಾ ಮುಂದು ಅಂತ ಸೌತ್ ನಟ, ನಟಿಯರು ಬಾಲಿವುಡ್‌ನಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಈ ಸಾಲಿನಲ್ಲಿ ನಟಿ ರಶ್ಮಿಕಾ ಮಂದಣ್ಣ, ವಿಜಯ್ ದೇವರಕೊಂಡ ಸೇರಿದಂತೆ ಹಲವರು ಇದ್ದಾರೆ. ಈ ಬಗ್ಗೆ ನಟಿ ಪ್ರಿಯಾಮಣಿ ಮಾತನಾಡಿದ್ದಾರೆ. ಸೌತ್ ಕಲಾವಿದರನ್ನು ಬಾಲಿವುಡ್‌ನಲ್ಲಿ ಹೇಗೆ ನಡೆಸಿಕೊಳ್ಳುತ್ತಾರೆ, ಯಾವ ಆಧಾರದ ಮೇಲೆ ಸೌತ್ ಕಲಾವಿದರನ್ನು ಆಯ್ಕೆ ಮಾಡಲಾಗುತ್ತದೆ ಎನ್ನುವ ಬಗ್ಗೆ ಪ್ರಿಯಾಮಣಿ ಮಾತನಾಡಿದ್ದಾರೆ.
Recommended Video
ಪ್ರಿಯಾಮಣಿ ಕೂಡ ಈಗ ಬಾಲಿವುಡ್ ಸಿನಿಮಾ ಮತ್ತು ವೆಬ್ ಸೀರೀಸ್‌ಗಳಲ್ಲಿ ಬ್ಯೂಸಿ ಆಗಿದ್ದಾರೆ. ಫ್ಯಾಮಿಲಿ ಮ್ಯಾನ್ ವೆಬ್ ಸೀರೀಸ್ ಬಳಿಕ ಪ್ರಿಯಾಮಣಿಗೂ ಬಾಲಿವುಡ್‌ನಲ್ಲಿ ಬೇಡಿಕೆ ಹೆಚ್ಚಾಗಿದೆ. ಪ್ರಿಯಾಮಣಿ ಸದ್ಯ ಅಜಯ್ ದೇವಗನ್ ಅವರ 'ಮೈದಾನ್' ಮತ್ತು ರಾಣಾ ದಗ್ಗುಬಾಟಿಯ 'ವಿರಾಟ ಪರ್ವಂ' ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ.
ಸಂದರ್ಶನ ಒಂದರಲ್ಲಿ ಪ್ರಿಯಾಮಣಿ ಬಾಲಿವುಡ್‌ನಲ್ಲಿ ಸೌತ್ ತಾರೆಯನ್ನು ಹೇಗೆ ನಡೆಸಿಕೊಳ್ಳಲಾಗುತ್ತದೆ. ಯಾವ ಆಧಾರದ ಮೇಲೆ ಸೌತ್ ಸಿನಿಮಾ ತಾರೆಯನ್ನು ಬಾಲಿವುಡ್ ಮಂದಿ ಆಯ್ಕೆ ಮಾಡುತ್ತಿದ್ದರು ಎನ್ನುವ ಬಗ್ಗೆ ಪ್ರಿಯಾಮಣಿ ಹೇಳಿಕೊಂಡಿದ್ದಾರೆ.
"ಕೊನೆಗೂ ಬಾಲಿವುಡ್‌ನಲ್ಲಿ ದಕ್ಷಿಣದ ಪ್ರತಿಭೆಗಳೂ ಮನ್ನಣೆ ಪಡೆಯುತ್ತಿದ್ದಾರೆ, ಈ ಹಿಂದೆ ಶ್ರೀದೇವಿ, ರೇಖಾ, ಹೇಮಾ ಮಾಲಿನಿ, ವೈಜಯಂತಿಮಾಲಾ ಅಂತಹವರು ಬಾಲಿವುಡ್ ಚಿತ್ರರಂಗವನ್ನು ಆಳಿದ ಕಾಲವೊಂದಿತ್ತು. ಮತ್ತು ಅದರ ನಂತರ ಒಂದು ಕೊರತೆ ಸೃಷ್ಟಿ ಆಯ್ತು. ನಾವು ಬಾಲಿವುಡ್‌ನಲ್ಲಿ ಕೇವಲ ಹಿಂದಿ ಮಾತನಾಡುವ ನಟರನ್ನು ಮಾತ್ರ ಹೊಂದಿದ್ದೇವೆ. ಚೆನ್ನೈ, ಕೇರಳದ ಕಲಾವಿದರೂ ಯಾರಾದರೂ ಆಗಿರಬಹುದು ಅವರು ಹಿಂದಿಯನ್ನು ಅಲ್ಲಿನ ಶೈಲಿಯಲ್ಲೇ ಮಾತನಾಡ ಬೇಕಿತ್ತು. ಅಂತಹವನ್ನು ಮಾತ್ರ ಆಯ್ಕೆ ಮಾಡಲಾಗುತ್ತಿತ್ತು.
ನಾನು ಕೂಡ ಅಂತಹ ಸಾಕಷ್ಟು ಚಲನಚಿತ್ರಗಳನ್ನು ನೋಡಿದ್ದೇನೆ ಮತ್ತು ದಕ್ಷಿಣ ಭಾರತೀಯರು ಹಿಂದಿಯನ್ನು ಅವರ ಶೈಲಿಯಲ್ಲಿ ಮಾತನಾಡುವುದಿಲ್ಲ ಎಂದು ನಾನು ಭಾವಿಸುತ್ತೇನೆ. ಬಹುಶಃ ಇದು ಅವರ ಕಲ್ಪನೆ ಅಷ್ಟೆ. ಒಂದು ಹಂತದ ನಂತರ ಬಾಲಿವುಡ್‌ನಲ್ಲಿ ಇದನ್ನು ನಿಲ್ಲಿಸಲಾಗಿದೆ. ದಕ್ಷಿಣದ ತಂತ್ರಜ್ಞರು ಬಾಲಿವುಡ್ ಗಮನ ಸೆಳೆದಿದ್ದಾರೆ.
