For Quick Alerts
  ALLOW NOTIFICATIONS  
  For Daily Alerts

  ಪ್ರಿಯಾಂಕಾ-ನಿಕ್ ಮದುವೆ ದಿನಾಂಕ ನಿಗದಿ ಆಯ್ತು: ವಿವಾಹ ಎಲ್ಲಿ, ಯಾವಾಗ.?

  |

  ಹಾಲಿವುಡ್ ನಲ್ಲಿಯೂ ಮಿಂಚುತ್ತಿರುವ ಬಾಲಿವುಡ್ ನಟಿ ಪ್ರಿಯಾಂಕಾ ಛೋಪ್ರಾ ಹಾಗೂ ಗಾಯಕ ನಿಕ್ ಜೊನಾಸ್ ನಿಶ್ಚಿತಾರ್ಥ ಸಮಾರಂಭ ಎರಡು ತಿಂಗಳ ಹಿಂದೆಯಷ್ಟೇ ಅಂದ್ರೆ ಆಗಸ್ಟ್ 18 ರಂದು ನೆರವೇರಿತ್ತು.

  ಭಾರತೀಯ ಸಂಪ್ರದಾಯದಂತೆ ಮುಂಬೈನಲ್ಲಿ ಪ್ರಿಯಾಂಕಾ ಛೋಪ್ರಾ-ನಿಕ್ ಜೊನಾಸ್ ನಿಶ್ಚಿತಾರ್ಥ ಅದ್ಧೂರಿಯಾಗಿ ನಡೆದಿತ್ತು. ಬಾಲಿವುಡ್ ನ ಗಣ್ಯರು ಪ್ರಿಯಾಂಕಾ-ನಿಕ್ ನಿಶ್ಚಿತಾರ್ಥ ಸಮಾರಂಭಕ್ಕೆ ಸಾಕ್ಷಿ ಆಗಿದ್ದರು.

  ಎಂಗೇಜ್ಮೆಂಟ್ ಆದ ಬಳಿಕ ಹವಾಯಿ ದ್ವೀಪ ಹಾಗೂ ಜೋಧ್ ಪುರ್ ಸುತ್ತ ರೌಂಡ್ ಹಾಕಿದ ಪ್ರಿಯಾಂಕಾ-ನಿಕ್ ಮದುವೆ ದಿನಾಂಕ ಇದೀಗ ನಿಗದಿ ಆಗಿದೆ. ಪ್ರಿಯಾಂಕಾ-ನಿಕ್ ವಿವಾಹ ಮಹೋತ್ಸವಕ್ಕೆ ಒಂದುವರೆ ತಿಂಗಳಷ್ಟೇ ಬಾಕಿ ಇದೆ. ಮುಂದೆ ಓದಿರಿ...

  ಪ್ರಿಯಾಂಕಾ-ನಿಕ್ ಮದುವೆ ಯಾವಾಗ.?

  ಪ್ರಿಯಾಂಕಾ-ನಿಕ್ ಮದುವೆ ಯಾವಾಗ.?

  ವರದಿಗಳ ಪ್ರಕಾರ, ನವೆಂಬರ್ 30 ರಂದು ಪ್ರಿಯಾಂಕಾ ಛೋಪ್ರಾ ಹಾಗೂ ನಿಕ್ ಜೊನಾಸ್ ಮದುವೆ ನಡೆಯಲಿದೆ. ಜೋಧ್ ಪುರದ ಅರಮನೆಯಲ್ಲಿ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.

  ಫೋಟೋ ಆಲ್ಬಂ: ಗಾಯಕ ನಿಕ್ ಜೊನಾಸ್ ಜೊತೆಗೆ ಪ್ರಿಯಾಂಕಾ ನಿಶ್ಚಿತಾರ್ಥಫೋಟೋ ಆಲ್ಬಂ: ಗಾಯಕ ನಿಕ್ ಜೊನಾಸ್ ಜೊತೆಗೆ ಪ್ರಿಯಾಂಕಾ ನಿಶ್ಚಿತಾರ್ಥ

  ಮೂರು ದಿನಗಳ ಕಾಲ ನಡೆಯಲಿರುವ ಮದುವೆ

  ಮೂರು ದಿನಗಳ ಕಾಲ ನಡೆಯಲಿರುವ ಮದುವೆ

  ನವೆಂಬರ್ 30 ರಿಂದ ಡಿಸೆಂಬರ್ 2 ರವರೆಗೆ ಮೂರು ದಿನಗಳ ಕಾಲ ಪ್ರಿಯಾಂಕಾ-ನಿಕ್ ಮದುವೆಯ ಶಾಸ್ತ್ರಗಳು ನಡೆಯಲಿದೆ. ಬಾಲಿವುಡ್ ತಾರೆಯರು ಪ್ರಿಯಾಂಕಾ-ನಿಕ್ ವಿವಾಹ ಮಹೋತ್ಸವಕ್ಕೆ ಸಾಕ್ಷಿ ಆಗಲಿದ್ದಾರೆ.

  ಪ್ರಿಯಾಂಕಾ-ನಿಕ್ ಎಂಗೇಜ್ಮೆಂಟ್ ನಲ್ಲಿ ಮಿಂಚಿದ ಬಾಲಿವುಡ್ ಸೆಲೆಬ್ರಿಟಿಗಳುಪ್ರಿಯಾಂಕಾ-ನಿಕ್ ಎಂಗೇಜ್ಮೆಂಟ್ ನಲ್ಲಿ ಮಿಂಚಿದ ಬಾಲಿವುಡ್ ಸೆಲೆಬ್ರಿಟಿಗಳು

  ಇತ್ತೀಚೆಗಷ್ಟೇ ಜೋಧ್ ಪುರಕ್ಕೆ ಭೇಟಿ

  ಇತ್ತೀಚೆಗಷ್ಟೇ ಜೋಧ್ ಪುರಕ್ಕೆ ಭೇಟಿ

  ಕಳೆದ ಕೆಲವೇ ಕೆಲವು ದಿನಗಳ ಹಿಂದೆಯಷ್ಟೇ ನಟಿ ಪ್ರಿಯಾಂಕಾ ಛೋಪ್ರಾ ಹಾಗೂ ನಿಕ್ ಜೊನಾಸ್ ಜೋಧ್ ಪುರಕ್ಕೆ ಭೇಟಿ ಕೊಟ್ಟಿದ್ದರು. ಮದುವೆಯ ಸ್ಥಳವನ್ನು ನಿಗದಿ ಪಡಿಸಲೆಂದೇ ಪ್ರಿಯಾಂಕಾ-ನಿಕ್ ಅಲ್ಲಿಗೆ ತೆರಳಿದ್ದರು.

  ಚಿತ್ರಗಳು: 'ತಾರೆ'ಗಳ ತೋಟದಲ್ಲಿ ಪ್ರಿಯಾಂಕಾ-ನಿಕ್ ಎಂಗೇಜ್ಮೆಂಟ್ ಪಾರ್ಟಿಚಿತ್ರಗಳು: 'ತಾರೆ'ಗಳ ತೋಟದಲ್ಲಿ ಪ್ರಿಯಾಂಕಾ-ನಿಕ್ ಎಂಗೇಜ್ಮೆಂಟ್ ಪಾರ್ಟಿ

  ಪ್ರಿಯಾಂಕಾ-ನಿಕ್ ಲವ್ ಸ್ಟೋರಿ

  ಪ್ರಿಯಾಂಕಾ-ನಿಕ್ ಲವ್ ಸ್ಟೋರಿ

  ಪ್ರಿಯಾಂಕಾ ಛೋಪ್ರಾ ಹಾಗೂ ನಿಕ್ ಜೊನಾಸ್ ಮೊಟ್ಟ ಮೊದಲ ಬಾರಿಗೆ ಒಟ್ಟಿಗೆ ಕಾಣಿಸಿಕೊಂಡಿದ್ದು Met Gala 2017 ರಲ್ಲಿ. ರೆಡ್ ಕಾರ್ಪೆಟ್ ಮೇಲೆ ಇಬ್ಬರು ಒಟ್ಟಿಗೆ ಕ್ಯಾಟ್ ವಾಕ್ ಮಾಡಿದರು. ಇಲ್ಲಿಂದಲೇ, ಇಬ್ಬರ ಪ್ರೀತಿ ಮೊಳಕೆಯೊಡೆದಿದ್ದು ಎನ್ನಲಾಗಿದೆ. 25 ವರ್ಷದ ನಿಕ್ ಜೊನಾಸ್ ಅಮೇರಿಕಾದ ಗಾಯಕ ಹಾಗೂ ನಟ. 'ಕ್ಯಾಂಪ್ ರಾಕ್', 'ಮಿಸ್ಟರ್ ಸನ್ ಶೈನ್', 'ಸ್ಮ್ಯಾಶ್' ಮುಂತಾದ ಟೆಲಿವಿಷನ್ ಫಿಲ್ಮ್ ಗಳಲ್ಲಿ ನಿಕ್ ಜೋನಾಸ್ ಕಾಣಿಸಿಕೊಂಡಿದ್ದಾರೆ. ಗಾಯಕನಾಗಿ ಹಲವಾರು ಆಲ್ಬಂಗಳನ್ನು ನಿಕ್ ಜೋನಾಸ್ ಹೊರತಂದಿದ್ದಾರೆ. ನಟಿ ಪ್ರಿಯಾಂಕಾ ಛೋಪ್ರಾ ಹಾಗೂ ನಿಕ್ ಜೊನಾಸ್ ನಡುವೆ ಹತ್ತು ವರ್ಷಗಳ ಅಂತರವಿದೆ.

  English summary
  Bollywood Actress Priyanka Chopra and Nick Jonas wedding dates are finalized.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X