For Quick Alerts
  ALLOW NOTIFICATIONS  
  For Daily Alerts

  ಬಾಲಿವುಡ್ ನಟಿಯರ ದುಬಾರಿ ಬಿಕಿನಿ: ಈ ಬೆಲೆಗೆ ತಿಂಗಳ ಮನೆ ಬಾಡಿಗೆ ಕಟ್ಟಬಹುದು!

  |

  ಸಿನಿಮಾ ತಾರೆಯರು ಅಂದ್ಮೇಲೆ ಅವರ ಲೈಫ್ ಸ್ಟೈಲ್ ಕೂಟ ಸಿನಿಮಾದಂತೆ ಹೆಚ್ಚು ಕಲರ್‌ ಫುಲ್ ಆಗಿ ಇರುತ್ತದೆ. ಅದರಲ್ಲೂ ನಟಿ ಮಣಿಯರ ವಿಚಾರಕ್ಕೆ ಬರುವುದಾದರೆ, ಅವರು ಪ್ರತೀ ವಿಚಾರದಲ್ಲೂ ಡಿಫ್ರೆಂಟ್, ಉಡುಪಿನ ವಿಚಾರದಲ್ಲಿ ತುಂಬಾನೇ ಗಮನ ಹರಿಸುತ್ತಾರೆ. ಅವರ ಕಾಸ್ಟ್ಯೂಂಗಳನ್ನು ನೋಡುವುದೇ ಕಣ್ಣಿಗೆ ಹಬ್ಬ.

  ಔಟ್ ಲುಕ್ ಮತ್ತು ಕಾಸ್ಟ್ಯೂಮ್ ವಿಚಾರದಲ್ಲಿ ಬಾಲಿವುಡ್‌ ನಟಿಮಣಿಯರು ಸದಾ ಒಂದು ಹೆಜ್ಜೆ ಮುಂದೆ ಇರುತ್ತಾರೆ. ಡಿಸೈನರ್ ಕಾಸ್ಟ್ಯೂಂಗಳನ್ನು ತೊಡಲು ಸದಾ ಹಾತೊರೆಯುತ್ತಾರೆ. ಹೆಚ್ಚು ಬೆಲೆಯ ಉಡುಪನ್ನು ತೊಡುವುದು ಎಂದರೆ ಅವರಿಗೆ ಪ್ರತಿಷ್ಠೆಯ ವಿಚಾರ. ಹಾಗಾಗಿ ಸರಳ ಉಡುಪಾದರೂ ಕೂಡ ಹೆಚ್ಚು ಬೆಲೆ ತೆರುತ್ತಾರೆ.

  ಆಮಿರ್ ಖಾನ್ ಮಗಳ 'ಬಿಕಿನಿ ಬರ್ತ್ ಡೇ' ಅವಾಂತರ!ಆಮಿರ್ ಖಾನ್ ಮಗಳ 'ಬಿಕಿನಿ ಬರ್ತ್ ಡೇ' ಅವಾಂತರ!

  ಬಟ್ಟೆಗೆ ಮಾತ್ರ ಹೆಚ್ಚು ಬೆಲೆ ಅಲ್ಲ. ಅವರು ತೊಡುವ ಬಿಕಿನಿಗಳು ಕೂಡ ಅತ್ಯಂತ ದುಬಾರಿಯಾಗಿದೆ. ನಟಿಯರು ಪೂಲ್‌ನಲ್ಲಿ ಧರಿಸುವ ಬಿಕಿನಿ ಬೆಲೆಯನ್ನು ಕೇಳಿದರೆ ಶಾಕ್ ಆಗದೇ ಇರದು. ಯಾಕೆಂದರೆ ಇವರು ಬಿಕಿನಿ ಖರೀದಿಸುವ ಹಣದಲ್ಲಿ ಸಾಮಾನ್ಯರು ಒಂದು ತಿಂಗಳ ಮನೆ ಬಾಡಿಗೆಯನ್ನೇ ಕಟ್ಟಬಹುದು. ಹಾಗಿದ್ದರೆ ಹೆಚ್ಚು ದುಬಾರಿ ಬಿಕಿನಿ ತೊಡುವ ನಟಿಯರ ಪಟ್ಟಿಯಲ್ಲಿ ಯಾರೆಲ್ಲಾ ಇದ್ದಾರೆ ಎನ್ನುವುದನ್ನು ಮುಂದೆ ಓದಿ...

  ಹಿಂದಿ 'ಡಿಯರ್ ದಿಯಾ' ಟ್ರೈಲರ್ ರಿಲೀಸ್: ಚೆನ್ನಾಗಿಲ್ಲ ಎಂದ ನೆಟ್ಟಿಗರು!ಹಿಂದಿ 'ಡಿಯರ್ ದಿಯಾ' ಟ್ರೈಲರ್ ರಿಲೀಸ್: ಚೆನ್ನಾಗಿಲ್ಲ ಎಂದ ನೆಟ್ಟಿಗರು!

  ಜಾಹ್ನವಿ ಕಪೂರ್ ಸರಳ ಬಿಕಿನಿಗೆ 17 ಸಾವಿರ!

  ಬಾಲಿವುಡ್ ನಟಿ, ಶ್ರೀದೇವಿ ಪುತ್ರಿ ಚಿನ್ನದ ಚಮಚ ಬಾಯಲ್ಲಿ ಇಟ್ಟುಕೊಂಡೆ ಹುಟ್ಟಿದ್ದಾರೆ. ಜಾನ್ಹವಿ ಕಪೂರ್ ಹುಟ್ಟುತ್ತೇ ಆಗರ್ಭ ಶ್ರೀಮಂತೆ. ಈಕೆ ಬೇರೆದಕ್ಕೆ ಮಾಡುವ ಖರ್ಚು ಹಾಗಿರಲಿ. ಆದರೆ ಬಿಕಿನಿಗಾಗಿ ಸಾವಿರಾರು ರೂಪಾತಿ ವ್ಯಯಿಸುತ್ತಾರೆ. ಈ ಫೊಟೋದಲ್ಲಿ ಜಾನ್ಹವಿ ತೊಟ್ಟಿರುವ ಬಿಕಿನಿಯ ಬೆಲೆ 19 ಸಾವಿರ ರೂ.

  28 ಸಾವಿರದ ಸ್ವಿಮ್ ಸೂಟ್‌ನಲ್ಲಿ ಪ್ರಿಯಾಂಕ ಚೋಪ್ರ!

  ಬಾಲಿವುಡ್‌ನಿಂದ ಹಾಲಿವುಡ್‌ ಹಾರಿದ ನಟಿ ಪ್ರಿಯಾಂಕಾ ಚೋಪ್ರಾ ಸದ್ಯ ಮದುವೆ, ಮಕ್ಕಳು ಅಂತ ಬ್ಯುಸಿಯಾಗಿ ಇದ್ದಾರೆ. ಇತ್ತೀಗೆ ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಂಡ ಪ್ರಿಯಾಂಕಾ ಚೋಪ್ರಾ ಹುಟ್ಟು ಹಬ್ಬಕ್ಕೆ ತೊಟ್ಟಿದ್ದ ಸ್ವಿಮ್ ಸೂಟ್ ಮೂಲಕ ಹೆಚ್ಚು ಸದ್ದು ಮಾಡಿದ್ದರು. ಪ್ರಿಯಾಂಕಾ ಧರಿಸಿದ್ದ ಈ ಕಡು ಕೆಂಪು ಬಣ್ಣದ ಸ್ವಿಮ್ ಸೂಟ್‌ ಬೆಲೆ 28 ಸಾವಿರಕ್ಕೂ ಹೆಚ್ಚು.

  ಅನುಷ್ಕಾ, ಕತ್ರೀನಾ ಬಿಕಿನಿ ಬೆಲೆ ಬಲು ದುಬಾರಿ!

  ಹಸಿರು ಬಣ್ಣದ, ಫ್ಲೋರಲ್ ಬಿಕಿನಿ ತೊಟ್ಟು ಮಿಂಚಿದ್ದರು ನಟಿ ಕತ್ರೀನಾ ಕೈಫ್. ಬೀಚ್‌ ಬದಿ ಇರುವ ಕತ್ರೀನಾ ಫೊಟೋ ಸಿಕ್ಕಾ ಪಟ್ಟೆ ವೈರಲ್ ಆಗಿತ್ತು. ಇಲ್ಲಿ ಕತ್ರೀನಾ ತೊಟ್ಟಿರುವ ಬಿಕಿನಿಯ ಬೆಲೆ 10 ಸಾವಿರದ 900 ರೂ. ಇನ್ನು ನಟಿ ಅನುಷ್ಕಾ ಶರ್ಮಾ ನ್ಯೂಯಾರ್ಕ್‌ನಲ್ಲಿ ಹಾಲಿ ಡೇ ಟೈಮ್‌ನಲ್ಲಿ ಧರಿಸಿದ್ದ ನಿಯಾನ್ ಗ್ರಿನ್ ಬಿಕಿನಿಯ ಬೆಲೆ 8,860.

  ದುಬಾರಿ ಬಿಕಿನಿ ತೊಟ್ಟ ಸಾರಾ ಅಲಿಖಾನ್, ದಿಶಾ ಪಟಾನಿ!

  ನಟಿ ದಿಶಾ ಪಟಾನಿ ಬಿಕಿಯನ್ನು ಟ್ರೆಡ್ ಮಾರ್ಕ್ ರೀತಿಯಲ್ಲಿ ಬಳಸುತ್ತಾರೆ. ಸದಾ ಬಿಕಿಯಲ್ಲೇ ಕಾಣಿಸಿಕೊಳ್ಳುತ್ತಾ ಇರುತ್ತಾರೆ. ಇತ್ತೀಚೆಗೆ ಅವರು ತೊಟ್ಟ ಬಿಕಿನಿ ದುಬಾರಿ ಬೆಲೆಯ ಮೂಲಕ ಸದ್ದು ಮಾಡಿತ್ತು. ಉಡುಪಿನ ಬೆಲೆ 12,800. ಇನ್ನು ಇದೇ ಸಾಲಿನಲ್ಲಿ ಇರುವ ನಟಿ ಸಾರಾ ಅಲಿಖಾನ್ ತೊಟ್ಟ ಬಣ್ಣ, ಬಣ್ಣದ ಬಿಕಿನಿ ಉಡುಪಿನ ಬೆಲೆ 10,400 ರೂ.

  English summary
  Priyanka Chopra, Disha Patani, Janhvi Kapoor Wears Most Costliest Bikini, Know The Price
  Wednesday, May 11, 2022, 15:49
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X