»   » ರಾಮ ಲೀಲಾದಲ್ಲಿ ಪ್ರಿಯಾಂಕಾ ಶೃಂಗಾರ ಲೀಲೆ

ರಾಮ ಲೀಲಾದಲ್ಲಿ ಪ್ರಿಯಾಂಕಾ ಶೃಂಗಾರ ಲೀಲೆ

Posted By:
Subscribe to Filmibeat Kannada

ಬಾಲಿವುಡ್ ನಲ್ಲಿ 'ಬದ್ಮಾಷ್ ಬಬ್ಲಿ' ಎಂದೇ ಖ್ಯಾತರಾಗಿರುವ ಪ್ರಿಯಾಂಕಾ ಚೋಪ್ರಾ ಮತ್ತೊಂದು ಖತರ್ನಾಕ್ ಐಟಂ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಸಂಜಯ್ ಲೀಲಾ ಭನ್ಸಾಲಿ ಅವರ 'ರಾಮ್ ಲೀಲಾ' ಚಿತ್ರದಲ್ಲಿ ಮತ್ತೆ ತಮ್ಮ ಸೊಂಟ ಬಳುಕಿಸುತ್ತಿದ್ದಾರೆ.

ಇದಕ್ಕೆ ಸಂಬಂಧಿಸಿದ ಫಸ್ಟ್ ಲುಕ್ ಈಗಾಗಲೆ ಔಟ್ ಆಗಿದ್ದು ನೀವು ಕಣ್ತುಂಬಿಕೊಳ್ಳುತ್ತಿರುವುದು ಅದೇ ಚಿತ್ರವನ್ನು! ಸಂಪೂರ್ಣ ಶ್ವೇತ ವರ್ಣದ ಡ್ರೆಸ್ ನಲ್ಲಿ ಪ್ರಿಯಾಂಕಾ ತಮ್ಮ ಅಂಗಸೌಷ್ಠವ ಪ್ರದರ್ಶಿಸಿದ್ದಾರೆ. 'ರಾಮ್ ಲೀಲಾ' ಚಿತ್ರದ ಐಟಂ ಡಾನ್ಸ್ ಬಗ್ಗೆ ಸಾಕಷ್ಟು ಪುಕಾರುಗಳೂ ಹಬ್ಬಿವೆ.


ಈ ಐಟಂ ಹಾಡನ್ನು ಐಶ್ವರ್ಯಾ ರೈ ಅವರು ಮಾಡಬೇಕಾಗಿತ್ತಂತೆ. ಐಶ್ವರ್ಯಾ ಸೊಂಟದ ಸುತ್ತಳತೆ ಈ ಹಾಡಿಗೆ ಸರಿಹೊಂದಲ್ಲ ಎಂಬ ಕಾರಣಕ್ಕೆ ಐಶೂಗೆ ಕೈಕೊಟ್ಟರಂತೆ. ಕಡೆಗೆ ಈ ಐಟಂ ಹಾಡು ಪ್ರಿಯಾಂಕಾ ಚೋಪ್ರಾಗೆ ಪ್ರಾಪ್ತವಾಯಿತಂತೆ. ಈ ರೀತಿಯ ಗಾಳಿಸುದ್ದಿಯೊಂದು ಬಾಲಿವುಡ್ ನಲ್ಲಿ ಬೀಸುತ್ತಿದೆ.

ಈ ಚಿತ್ರದ ಪ್ರಧಾನ ಭೂಮಿಕೆಯಲ್ಲಿ ರಣವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಇದ್ದಾರೆ. ಚಿತ್ರದಲ್ಲಿ ಪಿಗ್ಗಿ ಅವರದ್ದು ಏನಿದ್ದರೂ ಐಟಂ ನಂಬರ್ ಅಷ್ಟೇ. ಇತ್ತೀಚೆಗೆ 'ಝಂಜೀರ್' ಹಾಗೂ 'ಶೂಟೌಟ್ ಅಟ್ ವಾಡಲಾ' ಚಿತ್ರದಲ್ಲೂ ಪಿಗ್ಗಿ ಸೊಂಟ ಬಳುಕಿಸಿದ್ದರು. ಈಗ ಮತ್ತೊಮ್ಮೆ ಐಟಂ ಹಾಡಿಗೆ ಮರಳಿದ್ದಾರೆ. ಈ ಬಾರಿ ನಿರೀಕ್ಷೆಗಳು ಸಾಕಷ್ಟಿವೆ.

ಡಾನ್ಸ್ ಮಾಸ್ಟರ್ ಪ್ರಭುದೇವ ಅವರ ತಮ್ಮ ವಿಷ್ಣುದೇವ ಈ ಹಾಡಿಗೆ ಕೊರಿಯೋಗ್ರಫಿ ಮಾಡಿದ್ದು ಫಿಲಂ ಸಿಟಿ ಸ್ಟುಡಿಯೋದಲ್ಲಿ ಹಾಡನ್ನು ಚಿತ್ರೀಕರಿಸಲಾಗಿದೆ. ಪಿಗ್ಗಿ ಈ ಐಟಂ ಹಾಡಿನಲ್ಲಿ ತಮ್ಮ ಮಾದಕ ಚೆಲುವನ್ನು ಪ್ರದರ್ಶಿಸಿದ್ದಾರೆ. ಇದು ಕೇವಲ ಫಸ್ಟ್ ಲುಕ್ ಅಷ್ಟೇ. (ಏಜೆನ್ಸೀಸ್)

English summary
Bollywood's 'Badmaash Babli' is back. Yes, the stunning Priyanka Chopra is all set to sizzle in the upcoming item number from Sanjay Leela Bhansali's movie Ram Leela. PC's first look from Ram Leela, shows the stunning, curvaceous actress in all white avatar.
Please Wait while comments are loading...