For Quick Alerts
ALLOW NOTIFICATIONS  
For Daily Alerts

  'ನಿರ್ಭಯಾ' ತೀರ್ಪಿಗೆ ಭಾವುಕಳಾದ ಪ್ರಿಯಾಂಕ ಚೋಪ್ರಾ ಹೇಳಿದ್ದೇನು?

  By Suneel
  |

  ನಿನ್ನೆಯಷ್ಟೇ(ಮೇ 5) 23 ವರ್ಷದ ವೈದ್ಯಕೀಯ ವಿದ್ಯಾರ್ಥಿನಿ ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಾಲ್ವರು ಅಪರಾಧಿಗಳಿಗೆ ದೆಹಲಿ ಹೈಕೋರ್ಟ್ ವಿಧಿಸಿದ್ದ ಮರಣ ದಂಡನೆ ಶಿಕ್ಷೆಯನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ.

  2012 ರ ಡಿಸೆಂಬರ್ 16 ರಂದು ನಿರ್ಭಯಾ ಮೇಲೆ ಅತ್ಯಾಚಾರ ಎಸಗಿ ಅತ್ಯಂತ ಕ್ರೂರವಾಗಿ ಕೊಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸುಪ್ರೀಂ ಕೋರ್ಟ್ ತೀರ್ಪು ನೀಡಿದ ಹಿನ್ನೆಯಲ್ಲಿ, ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ತಮ್ಮ ಮೈಕ್ರೋ-ಬ್ಲಾಗಿಂಗ್ ಸೈಟ್ ನಲ್ಲಿ ಎಮೋಷನಲ್ ಪೋಸ್ಟ್ ಒಂದನ್ನು ಹಾಕಿದ್ದಾರೆ. ಆ ಪೋಸ್ಟ್ ಈಗ ಇಂಟರ್ನೆಟ್ ನಲ್ಲಿ ವೈರಲ್ ಆಗಿದೆ. ಪ್ರಿಯಾಂಕ ಚೋಪ್ರಾರ ಆ ಪೋಸ್ಟ್ ನಲ್ಲಿ ಬರೆದಿದ್ದು ಈ ಕೆಳಗಿನಂತಿದೆ.

  "ನಿರ್ಭಯಾ ಪ್ರಕರಣ 5 ವರ್ಷಗಳ ದೀರ್ಘ ಸಮಯ ತೆಗೆದುಕೊಂಡಿತು. ಆದರೆ ಇಂದು ನ್ಯಾಯ ಅಂತಿಮವಾಗಿ ಮೇಲುಗೈ ಸಾಧಿಸಿದೆ. ಈ ಒಂದು ತೀರ್ಪು ಕೇವಲ ನಾಲ್ಕು ಜನರಿಗೆ ಮಾತ್ರವಲ್ಲದೇ( ಒಬ್ಬ ಜೈಲಿನಲ್ಲೇ ತೀರಿಕೊಂಡ ಮತ್ತು ಮತ್ತೊಬ್ಬ ಬಾಲಾಪರಾಧಿ) ಭಾರತದಲ್ಲಿರುವ ಇಂತಹ ದುಷ್ಕರ್ಮಿಗಳಿಗೂ".

  " 'ಈ ಅಪರಾಧಿಗಳ ಕ್ರೂರ, ಒರಟು ಮತ್ತು ಪೈಶಾಚಿಕ ಘಟನೆ ಸಾಮಾಜಿಕ ವಿಶ್ವಾಸವನ್ನು ಧ್ವಂಸಗೊಳಿಸಿದೆ. ಅವರು ಜೈಲಿನಲ್ಲಿ ಸಭ್ಯ ವರ್ತನೆ ತೋರಿದ್ದರು, ಅವರಿಗೆ ಗಲ್ಲು ಶಿಕ್ಷೆಯನ್ನು ತಡೆಯಲು ಸಾಧ್ಯವಿಲ್ಲ. ಕಾರಣ ಈ ಅಪರಾಧಿಗಳು ಎಸಗಿರುವ ಕೃತ್ಯ ಯಾವುದನ್ನೂ ಗಣನೆಗೆ ತೆಗೆದುಕೊಳ್ಳಬಾರದಷ್ಟು ಘೋರವಾಗಿದೆ' ಎಂದು ಸುಪ್ರಿಂ ಕೋರ್ಟ್ ನಾಲ್ಕು ಜನರಿಗೆ ಗಲ್ಲು ಶಿಕ್ಷೆ ಎತ್ತಿಹಿಡಿಯುವ ಸಂದರ್ಭದಲ್ಲಿ ಹೇಳಿದೆ".

  "ನಿರ್ಭಯಾ ತಮ್ಮ ಸಾವಿನ ಘೋಷಣೆಯಲ್ಲಿ ಬರೆದಿದ್ದ 'ಅಪರಾಧಿಗಳು ಖಂಡಿತ ತಪ್ಪಿಸಿಕೊಳ್ಳಬಾರದು' ಎಂಬ ಧ್ವನಿಯನ್ನು ಕೇಳಿರುವ ನ್ಯಾಯಾಂಗ ವ್ಯವಸ್ಥೆ ಬಗ್ಗೆ ನನಗೆ ತುಂಬಾ ಹೆಮ್ಮೆ ಎನಿಸಿದೆ. ಈ ನ್ಯಾಯವನ್ನು ಇಡೀ ದೇಶ ಐದು ವರ್ಷಗಳ ಹಿಂದೆಯೇ ಕೇಳಿತ್ತು ಮತ್ತು ದೇಶ ಈ ತೀರ್ಪನ್ನು ಎಂದಿಗೂ ಮರೆತುಬಿಡುವುದಿಲ್ಲ".

  "ನಿರ್ಭಯಾ ಪ್ರಕರಣದ ನ್ಯಾಯಕ್ಕಾಗಿ ಧ್ವನಿಗೂಡಿಸಿದ ಪ್ರತಿಯೊಬ್ಬರ ಕೂಗು ಸ್ಪಷ್ಟವಾಗಿ- ಆರು ಅಪರಾಧಿಗಳಿಗೂ ಶಿಕ್ಷೆ ಆಗಬೇಕು ಎಂಬುದಾಗಿತ್ತು. ಅಂತಿಮವಾಗಿ ಎಲ್ಲರ ಕೂಗಿಗೆ ಜಯ ಸಿಕ್ಕಿದೆ. ಅಂತಹ ಘೋರ ಅಪರಾಧವನ್ನು ನಾನು ಎಂದಿಗೂ ಸಹಿಸುವುದಿಲ್ಲ".

  "21 ನೇ ಶತಮಾನದಲ್ಲಿರುವ ಆಧುನಿಕ ಜಗತ್ತಿನ ಹೆಣ್ಣುಮಕ್ಕಳಿಗೆ ಇಂತಹ ಘೋರವಾದ ಸಂಗತಿಗಳು ಎಂದಿಗೂ ಆಗಬಾರದು, ನನಗೂ ಆಗಬಾರದು. ದುರಾದೃಷ್ಟವಶಾತ್, ಹಿಂದಿನ ಕೃತ್ಯವು ಆಗಬಾರದಿತ್ತು. ಅನಿವಾರ್ಯವಾಗಿ ನಾವು ಈಗ ಮುನ್ನೆಡೆಯಲೇ ಬೇಕಿದೆ. ಮುಂದಿನ ದಿನಗಳಲ್ಲಿ ಇಂತಹ ಕೃತ್ಯಗಳು ನಡೆಯುವುದಿಲ್ಲ ಎಂದೂ ಎಲ್ಲರೂ ಭರವಸೆ ಇಡೋಣ".

  "ದೇಶವು ಒಟ್ಟುಗೂಡಿ ಏನನ್ನಾದರೂ ಬಯಸುತ್ತಿದೆ ಎಂದಾದಲ್ಲಿ ಖಂಡಿತ ಅದಕ್ಕೆ ಪ್ರತಿಫಲ ಸಿಗುತ್ತದೆ. ಅಲ್ಲದೇ ಜಾಗೃತಿ ಮೂಡಿಸಬಹುದು. ನಮ್ಮ ಒಗ್ಗಟ್ಟು ಇಂತಹ ಕ್ರೂರ ಮತ್ತು ಪೈಶಾಚಿಕ ಕೃತ್ಯಗಳನ್ನು ತಡೆಯಬಹುದು. ನಮ್ಮ ಸುಪ್ರೀಂ ಕೋರ್ಟ್ ಹೇಳಿದಂತೆ ನಾವು ಎಂದಿಗೂ ಮೌನವಾಗಿರಬಾರದು."

  ಕೊನೆಯಲ್ಲಿ "ನಿರ್ಭಯಾ ರನ್ನು ನೀವು ಎಂದಿಗೂ ಮರೆಯುವುದಿಲ್ಲ' ಎಂದು ಪ್ರಿಯಾಂಕ ಚೋಪ್ರಾ ತಮ್ಮ ಬರಹಕ್ಕೆ ಮುಕ್ತಾಯ ಹೇಳಿದ್ದಾರೆ.

  English summary
  You must be aware of the news that the verdict of Nirbhaya case came out yesterday and the Supreme Court upheld the decision of the Delhi High Court to hang the four convicts. A few hours ago, Priyanka Chopra, took to the micro-blogging site and posted an emotional letter about the same and here's what she had written in her post.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more