»   » ಕೆರಳಿ ಕೆಂಡವಾದ ಪ್ರಿಯಾಂಕಾ; ಅಭಿಮಾನಿಗೆ ಆಟೋಗ್ರಾಫ್

ಕೆರಳಿ ಕೆಂಡವಾದ ಪ್ರಿಯಾಂಕಾ; ಅಭಿಮಾನಿಗೆ ಆಟೋಗ್ರಾಫ್

Posted By:
Subscribe to Filmibeat Kannada

ಪ್ರಿಯಾಂಕಾ ಚೋಪ್ರಾ ತಮ್ಮ ಬೆಡಗು-ಬಿನ್ನಾಣಕ್ಕೆ ಮಾತ್ರವಲ್ಲದೇ ಸರಳ ನಡೆ-ನುಡಿಗೂ ಹೆಸರಾದವರು. ಆದರೆ ಸೂಕ್ಷ್ಮ ಮನಸ್ಸಿನ ಪ್ರಿಯಾಂಕಾ, ತಮಗೇನಾದರೂ ತೊಂದರೆಯಾದರೂ ಅಷ್ಟೇ, ಕೆರಳಿ ಕೆಂಡವಾಗಿಬಿಡುತ್ತಾರೆ. ಇತ್ತೀಚಿಗೆ ಅವರ ಅಭಿಮಾನಿಯೊಬ್ಬ ಅವರೊಂದಿಗೆ ಕೆಟ್ಟರೀತಿಯಲ್ಲಿ ನಡೆದುಕೊಂಡು ಬೈಸಿಕೊಂಡಿದ್ದಾನೆ.

ಆಗಿದ್ದಿಷ್ಟು. ಔರಂಗಾಬಾದ್ ನಲ್ಲಿ ಶಾಹಿದ್ ಕಪೂರ್ ಜೊತೆ 'ತೇರಿ ಮೇರಿ ಕಹಾನಿ' ಚಿತ್ರದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದ ಪ್ರಿಯಾಂಕಾ, ಕೆರೆಯೊಂದರ ಸಮೀಪ ಚಿತ್ರೀಕರಣದಲ್ಲಿದ್ದರು. ಕೆರೆಯ ಇನ್ನೊಂದು ಬದಿಯಲ್ಲಿದ್ದ ಅವರ ಅಭಿಮಾನಿಯೊಬ್ಬ 'ಪ್ರಿಯಾಂಕಾ, ಐ ಲೈವ್ ಯು' ಎಂದು ಜೋರಾಗಿ ಕಿರುಚಿಕೊಂಡ.

ಅದನ್ನು ಕೇಳಿದ ಪ್ರಿಯಾಂಕಾ ಪಿತ್ತ ಕೆರಳಿ ನೆತ್ತಿಗೇರಿತು. ತಮ್ಮ ಸೆಕ್ಯುರಿಟಿ ಗಾರ್ಡ್ ಕರೆದ ಪ್ರಿಯಾಂಕಾ, ಆ ವ್ಯಕ್ತಿಯನ್ನು ತಕ್ಷಣ ಕರೆಯಲು ಹೇಳಿ ಕರೆಸಿಕೊಂಡರು. ಅಷ್ಟೇ ಅಲ್ಲ, "ನೀವು ಸ್ಟಾರ್ ಗಳನ್ನು ಗೌರವಿಸಿಬೇಕು ಮತ್ತು ಅವರೆಡೆಗೆ ಕೃಪೆ ತೋರಬೇಕು" ಎಂದು ಅವನಿಗೆ ಬೈದು ಬುದ್ಧಿ ಹೇಳಿದರು.

ತಕ್ಷಣ ಆ ಅಭಿಮಾನಿ ತಮ್ಮ ತಪ್ಪನ್ನು ಅರ್ಥಮಾಡಿಕೊಂಡ ಹಾಗೂ ಪ್ರಿಯಾಂಕಾರಲ್ಲಿ ಕ್ಷಮೆ ಕೋರಿದ. ನಂತರ ಆತ ಪ್ರಿಯಾಂಕಾರ 'ಹಸ್ತಾಕ್ಷರ' ಕೇಳಿದ. ತಕ್ಷಣ ಕರಗಿದ ಪ್ರಿಯಾಂಕಾ, ಆತನಿಗೆ ಸಂತೋಷದಿಂದ ಆಟೋಗ್ರಾಫ್ ನೀಡಿದರು.

ಅದಕ್ಕೆ ಹೇಳುವುದು, ಪ್ರಿಯಾಂಕಾಗೆ ಕೇವಲ ಸೌಂದರ್ಯ ಮಾತ್ರವಲ್ಲ, ತಲೆಯಲ್ಲಿ ಬುದ್ಧಿಯೂ ಇದೆ. ಅದೇನೇ ಆಗಲಿ, ಪ್ರಿಯಾಂಕಾರಿಂದ ಬೈಸಿಕೊಂಡರೂ ಆಮೇಲೆ ಸಿಕ್ಕ ಆಟೋಗ್ರಾಫ್ ನಿಂದ ಅಭಿಮಾನಿಗೆ ಖುಷಿಯೋ ಖುಷಿ...(ಏಜೆನ್ಸೀಸ್)

English summary
Priyanka Chopra is known for her warm and friendly nature. But recently a fan got a scolding from her, after he rubbed Priyanka the wrong way.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada