For Quick Alerts
  ALLOW NOTIFICATIONS  
  For Daily Alerts

  ಪ್ರಿಯಾಂಕಾ ಚೋಪ್ರಾ ಮುಖಕ್ಕೆ ಅಂಥದ್ದೇನಾಯ್ತು? ಪೋಟೊ ನೋಡಿ ಫ್ಯಾನ್ಸ್ ಏನಂದ್ರು?

  |

  ಬಹುಭಾಷಾ ತಾರೆ ಪ್ರಿಯಾಂಕಾ ಚೋಪ್ರಾ ಬಾಲಿವುಡ್ ಹಾಗೂ ಹಾಲಿವುಡ್‌ನ ಬಹುಬೇಡಿಕೆಯ ನಟಿಯಾಗಿದ್ದಾರೆ. ಸದ್ಯ ಈಗ ಹಾಲಿವುಡ್‌ ಸಿನಿಮಾಗಳಲ್ಲಿ ಹೆಚ್ಚು ಸಕ್ರಿಯರಾಗಿರುವ ಅವರು ಹೆಚ್ಚಾಗಿ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುತ್ತಾರೆ. ಆಗಾಗ ಹೊಸ ಹೊಸ ಪೋಟೊಗಳನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿರುತ್ತಾರೆ.

  ಸದ್ಯ ಪ್ರಿಯಾಂಕಾ ಚೋಪ್ರಾ ಈಗ ಹಂಚಿಕೊಂಡಿರುವ ಪೋಟೊವೊಂದು ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ. ಪ್ರಸ್ತುತ 'ಸಿಟಾಡೆಲ್‌'ನ ಚಿತ್ರೀಕರಣದಲ್ಲಿ ಪ್ರಿಯಾಂಕಾ ಬ್ಯುಸಿಯಾಗಿದ್ದಾರೆ. ಸದ್ಯ ಆ ಚಿತ್ರೀಕರಣದ ಸೆಟ್‌ನಲ್ಲಿರುವ ಪೋಟೊವೊಂದನ್ನು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಈ ಪೋಟೊ ನೋಡಿದ ಅಭಿಮಾನಿಗಳು ಒಂದು ಕ್ಷಣ ಶಾಕ್‌ ಆಗಿದ್ದಾರೆ.

  ಮಗುವಿನ ಚಿತ್ರ ಹಂಚಿಕೊಂಡು ಸತ್ಯ ಹೊರಹಾಕಿದ ಪ್ರಿಯಾಂಕಾ ಚೋಪ್ರಾಮಗುವಿನ ಚಿತ್ರ ಹಂಚಿಕೊಂಡು ಸತ್ಯ ಹೊರಹಾಕಿದ ಪ್ರಿಯಾಂಕಾ ಚೋಪ್ರಾ

  ಪ್ರಿಯಾಂಕಾ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿರುವ ಪೋಟೊದಲ್ಲಿ ಮುಖಕ್ಕೆ ಬಲವಾದ ಪೆಟ್ಟುಬಿದ್ದಿದ್ದು, ರಕ್ತ ಸಿಕ್ತವಾಗಿದೆ. ಅಲ್ಲದೆ ಈ ಪೋಟೊಗೆ ನಟಿ ಪ್ರಿಯಾಂಕಾ ಚೋಪ್ರಾ ನಿಮಗೂ ಇಂದೂ ಕಠಿಣ ದಿನವಾಗಿದೆಯೇ ಎಂದು ಕ್ಯಾಪ್ಚನ್ ನೀಡಿ. ಹ್ಯಾಶ್‌ ಟ್ಯಾಗ್‌ನಲ್ಲಿ ಕಲಾವಿದರ ಜೀವನ ಎಂದು ಬರೆದುಕೊಂಡಿದ್ದಾರೆ.

  ನಟಿಯ ಈ ಪೋಟೊ ನೋಡಿದ ನೆಟ್ಟಿಗರು ನಟಿಗೆ ನಿಜವಾಗಿಯೂ ಗಾಯಗಳಾಗಿವೆಯೇ? ಈಗ ಆರೋಗ್ಯ ಹೇಗಿದೆ? ಎಂದು ಹಲವರು ಕಮೆಂಟ್‌ ಮಾಡಿ ವಿಚಾರಿಸುತ್ತಿದ್ದಾರೆ. ಇನ್ನು ಕೆಲವರು ಇದು ಸಿನಿಮಾ ಚಿತ್ರೀಕರಣಕ್ಕೆ ಮಾಡಿರುವ ಮೇಕಪ್ ಅಷ್ಟೇ ಎಂದು ಕಮೆಂಟ್ ಮಾಡುತ್ತಿದ್ದಾರೆ. ಸದ್ಯ ನಟಿ ಮಾತ್ರ ಇದ್ಯಾವುದಕ್ಕೂ ಪ್ರತಿಕ್ರಿಯಿಸದೇ ಸುಮ್ಮನೆ ಇದ್ದಾರೆ. ಒಟ್ಟಿನಲ್ಲಿ ಪ್ರಿಯಾಂಕಾ ಹಂಚಿಕೊಂಡ ಈ ಪೋಟೊ ಮಾತ್ರ ಆನ್‌ಲೈನ್‌ನಲ್ಲಿ ಸಖತ್ ವೈರಲ್ ಆಗುತ್ತಿದೆ.

  'ಸಿಟಾಡೆಲ್' ಸೈನ್ಸ್ ಫಿಕ್ಷನ್ ಸೀರೀಸ್ ಆಗಿದ್ದು, ಪ್ರಖ್ಯಾತ ರಸ್ಸೋ ಬ್ರದರ್ಸ್ ಅಮೆಜಾನ್ ಪ್ರೈಮ್‌ಗಾಗಿ ಈ ಸಿನಿಮಾವನ್ನು ತಯಾರಿಸುತ್ತಿದ್ದಾರೆ. ಇದರಲ್ಲಿ ರಿಚರ್ಡ್ ಮ್ಯಾಡೆನ್ ಕೂಡ ಅಭಿನಯಿಸಿದ್ದಾರೆ. ಕಳೆದ ಡಿಸೆಂಬರ್‌ನಲ್ಲಿ ಪ್ರಿಯಾಂಕ ಸಿನಿಮಾದ ಒಂದು ಹಂತದ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದರು.

  Priyanka Chopra Shares Photo Of Bruised Face Fans Ask What Happened

  ಜನವರಿಯಲ್ಲಿ ಮಗಳು ಮಾಲ್ತಿ ಮೇರಿ ಚೋಪ್ರಾ ಜನನದ ಕಾರಣದಿಂದ ನಟಿ ಚಿತ್ರೀಕರಣದಿಂದ ಬ್ರೇಕ್ ತೆಗೆದುಕೊಂಡಿದ್ದರು. ಇತ್ತೀಚಿಗೆ ಪುತ್ರಿಯ ಹೆಸರನ್ನು ರಿವೀಲ್ ಮಾಡಿದ್ದ ನಿಕ್-ಪ್ರಿಯಾಂಕಾ ದಂಪತಿ ಮಗುವಿನ ಜನನದ ಸಂದರ್ಭದ ಕಷ್ಟದ ದಿನಗಳ ಬಗ್ಗೆ ಮೊದಲ ಬಾರಿಗೆ ಮೌನ ಮುರಿದಿದ್ದರು.

  English summary
  Priyanka Chopra Shares Photo Of Bruised Face Fans Ask What Happened.
  Thursday, May 19, 2022, 9:35
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X