For Quick Alerts
  ALLOW NOTIFICATIONS  
  For Daily Alerts

  ವಾವ್.. ಸದ್ಯದಲ್ಲೇ ನಡೆಯಲಿದೆ ಪ್ರಿಯಾಂಕಾ ಛೋಪ್ರಾ ನಿಶ್ಚಿತಾರ್ಥ.!

  By Harshitha
  |

  ಬಾಲಿವುಡ್ ನಟಿ ಪ್ರಿಯಾಂಕಾ ಛೋಪ್ರಾ ಹಾಗೂ ಅಮೇರಿಕನ್ ಸಿಂಗರ್ ಕಮ್ ನಟ ನಿಕ್ ಜೊನಾಸ್ ಸದ್ಯ ಗೋವಾದಲ್ಲಿ ಮೋಜು-ಮಸ್ತಿ ಮಾಡುತ್ತಿರುವುದು ನಿಮಗೆಲ್ಲ ಗೊತ್ತೇ ಇದೆ. ಈ ನಡುವೆ ಬ್ರೇಕಿಂಗ್ ನ್ಯೂಸ್ ವೊಂದು ಹೊರಬಿದ್ದಿದೆ. ಅದೇನಪ್ಪಾ ಅಂದ್ರೆ, ಸದ್ಯದಲ್ಲಿಯೇ ನಟಿ ಪ್ರಿಯಾಂಕಾ ಛೋಪ್ರಾ-ನಿಕ್ ಜೊನಾಸ್ ನಿಶ್ಚಿತಾರ್ಥ ನಡೆಯಲಿದೆ.

  ಹಾಗ್ನೋಡಿದ್ರೆ, ನಿಕ್ ಜೊನಾಸ್ ರನ್ನ ಪ್ರಿಯಾಂಕಾ ಭಾರತಕ್ಕೆ ಕರೆದುಕೊಂಡು ಬಂದಿದ್ದೇ ಕುಟುಂಬದ ಜೊತೆಗೆ ಮಾತುಕತೆ ಮಾಡಿ ಎಂಗೇಜ್ಮೆಂಟ್ ಮಾಡಿಕೊಳ್ಳಲು ಎಂಬ ಸುದ್ದಿ ಈಗ ಎಲ್ಲೆಡೆ ಕೇಳಿಬರುತ್ತಿದೆ.

  ಪ್ರಿಯಾಂಕಾ-ನಿಕ್ ನಿಶ್ಚಿತಾರ್ಥ ಜುಲೈ ಅಥವಾ ಅಗಸ್ಟ್ ನಲ್ಲಿ ನಡೆಯಲಿದೆ ಎನ್ನಲಾಗಿದೆ. ಆದ್ರೆ, ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

  ಚಿತ್ರಗಳು: ಗೋವಾದಲ್ಲಿ ಪ್ರಿಯಾಂಕಾ-ನಿಕ್ ಜೊನಾಸ್ ಮೋಜು-ಮಸ್ತಿ ಚಿತ್ರಗಳು: ಗೋವಾದಲ್ಲಿ ಪ್ರಿಯಾಂಕಾ-ನಿಕ್ ಜೊನಾಸ್ ಮೋಜು-ಮಸ್ತಿ

  ಮುಂಬೈನ ಕಡಲ ಕಿನಾರೆಯಲ್ಲಿ ನಟಿ ಪ್ರಿಯಾಂಕಾ ಛೋಪ್ರಾ ಖರೀದಿ ಮಾಡಿದ ಬಂಗಲೆಯ ಗೃಹ ಪ್ರವೇಶ ಸಮಾರಂಭದಲ್ಲಿ ನಿಕ್ ಜೊನಾಸ್ ಪಾಲ್ಗೊಂಡಿದ್ದರು. ಈಗಾಗಲೇ ಪ್ರಿಯಾಂಕಾ ರನ್ನ ತಮ್ಮ ತಂದೆ-ತಾಯಿಗೆ ನಿಕ್ ಜೊನಾಸ್ ಪರಿಚಯ ಮಾಡಿಕೊಟ್ಟಿದ್ದಾಗಿದೆ. ಇದೀಗ ನಟಿ ಪ್ರಿಯಾಂಕಾ ಛೋಪ್ರಾ ತಮ್ಮ ಕುಟುಂಬಸ್ಥರು ಹಾಗೂ ಸ್ನೇಹಿತರಿಗೆ ನಿಕ್ ರನ್ನ ಪರಿಚಯಿಸಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಪ್ರಿಯಾಂಕಾ ನಿಶ್ಚಿತಾರ್ಥ ಸದ್ಯದಲ್ಲೇ ನಡೆಯಲಿದೆ.

  English summary
  According to the latest Grapevine, Bollywood Actress Priyanka Chopra to get engaged to Nick Jonas in a month.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X