ಯುಎಸ್‌ನಲ್ಲಿ ಮಾಧುರಿ ದೀಕ್ಷಿತ್ ಕುರಿತ ಕಾಮಿಡಿ ಸೀರೀಸ್! ಪ್ರಿಯಾಂಕಾ ನಿರ್ಮಾಪಕಿ..
ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ 'ಕ್ವಾಂಟಿಕೋ ಶೋ' ಮತ್ತು 'ಬೇವಾಚ್' ಮತ್ತು ಇತರೆ ಸಿನಿಮಾಗಳಲ್ಲಿ ನಟಿಸುವುದರ ಮುಖಾಂತರ ಹಾಲಿವುಡ್ ನಲ್ಲಿ ಉತ್ತಮ ಭವಿಷ್ಯ ಕಂಡುಕೊಂಡಿದ್ದಾರೆ. ಈಗ ಅವರು ಬಾಲಿವುಡ್ ನ ಖ್ಯಾತ ನಟಿ ಮತ್ತು ಡ್ಯಾನ್ಸರ್ ಮಾಧುರಿ ದೀಕ್ಷಿತ್ ಅವರ ಜೀವನ ಆಧಾರಿತವಾದ ಕಾಮಿಡಿ ಸೀರೀಸ್ ಅನ್ನು ಅಮೆರಿಕದ ಎಬಿಸಿ ನೆಟ್‌ವರ್ಕ್‌ಗಾಗಿ ನಿರ್ಮಾಣ ಮಾಡಲು ಮುಂದಾಗಿದ್ದಾರೆ.
Variety.com ನ ಎಕ್ಸ್‌ಕ್ಲೂಸಿವ್ ವರದಿ ಪ್ರಕಾರ, ಇನ್ನೂ ಹೆಸರಿಡದ ಈ ಕಾಮಿಡಿ ಸೀರೀಸ್ ಮಾಧುರಿ ದೀಕ್ಷಿತ್ ಅವರ ರಿಯಲ್ ಲೈಫ್ ಆಧರಿತವಾಗಿರಲಿದೆಯಂತೆ. ಅಲ್ಲದೇ ಸ್ವತಃ ಮಾಧುರಿ ಅವರೇ ಈ ಪ್ರಾಜೆಕ್ಟ್ ನ ನಿರ್ಮಾಣ ಕಾರ್ಯನಿರ್ವಹಣೆ ವಹಿಸಲಿದ್ದಾರಂತೆ.

ಕಾಮಿಡಿ ಸೀರೀಸ್ ಸ್ಟೋರಿಯಲ್ಲಿ ಮಾಧುರಿ ಅವರು ಹೇಗೆ ಅಮೆರಿಕದಲ್ಲಿ ಸೆಟಲ್ಡ್ ಆದರು ಮತ್ತು ಅವರ ಕಲರ್‌ಫುಲ್ ಲೈಫ್‌ಸ್ಟೈಲ್ ಅಳವಡಿಸಲಾಗುತ್ತದೆಯಂತೆ. ಅಮೆರಿಕದ 'Soapnet' ವಾಹಿನಿಯಲ್ಲಿ ಪ್ರೈಮ್ ಟೈಮ್ ನಲ್ಲಿ ಪ್ರಸಾರವಾಗುತ್ತಿದ್ದ ಧಾರಾವಾಹಿ 'ಜೆನೆರಲ್ ಹಾಸ್ಟಿಟಲ್: ನೈಟ್ ಶಿಫ್ಟ್'ಗೆ ಸ್ಕ್ರಿಪ್ಟ್ ಬರೆಯುತ್ತಿದ್ದ ಶ್ರೀ ರಾವ್ ಎಂಬುವವರು ಈ ಕಾಮಿಡಿ ಸೀರೀಸ್ ರಚಿಸಲಿದ್ದಾರಂತೆ.
ಪ್ರಿಯಾಂಕ ಚೋಪ್ರಾ ಪ್ರಸ್ತುತ 'ಕ್ವಾಂಟಿಕೊ'ದ ಮೂರನೇ ಆವೃತ್ತಿಗೆ ಸಜ್ಜಾಗುತ್ತಿದ್ದಾರೆ. ಅಲ್ಲದೇ ಈಗ ಹಾಲಿವುಡ್ ಸಿನಿಮಾ 'ಈಸ್ ನಾಟ್ ಇಟ್ ರೊಮ್ಯಾಂಟಿಕ್?' ಸಿನಿಮಾದಲ್ಲಿ ನಟಿಸುತ್ತಿದ್ದಾರೆ.


Click it and Unblock the Notifications











