For Quick Alerts
  ALLOW NOTIFICATIONS  
  For Daily Alerts

  ಮತ್ತೆ 'ಪದ್ಮಾವತ್' ಗಲಾಟೆ : ಶಾಲಾ ವಾಹನದ ಮೇಲೆ ಕಲ್ಲು ತೂರಾಟ

  By Naveen
  |

  ದೀಪಿಕಾ ಪಡುಕೋಣೆ ನಟನೆಯ 'ಪದ್ಮಾವತ್' ಸಿನಿಮಾಗೆ ರಿಲೀಸ್ ಭಾಗ್ಯ ಸಿಕ್ಕಿತ್ತು. ನಾಳೆ ಅದಿಕೃತವಾಗಿ ಬಿಡುಗಡೆಯಾಗಬೇಕಿದ್ದ ಈ ಸಿನಿಮಾದ ಪ್ರದರ್ಶನ ಇಂದೇ ಶುರುವಾಗಿತ್ತು. ಉತ್ತರ ಭಾರತದ ಅನೇಕ ರಾಜ್ಯಗಳಲ್ಲಿ ಇಂದೇ ಸಿನಿಮಾ ಪ್ರದರ್ಶನ ಆಗಿದೆ. ಬೆಂಗಳೂರಿನಲ್ಲಿ ಇಂದು ಸಂಜೆಯಿಂದ ಮೊದಲ ಶೋ ಶುರುವಾಗಿದೆ.

  ಆದರೆ ಮತ್ತೆ 'ಪದ್ಮಾವತ್' ಸಿನಿಮಾದ ಗಲಾಟೆ ಶುರುವಾಗಿದೆ. ಸಿನಿಮಾದ ಪ್ರದರ್ಶನವನ್ನು ವಿರೋಧಿಸಿ ಕೆಲವು ಕಡೆ ಪ್ರತಿಭಟನೆ ಪ್ರಾರಂಭವಾಗಿದೆ. ದೆಹಲಿಯ ಶಾಲಾ ವಾಹನಕ್ಕೆ ಪ್ರತಿಭಟನೆ ಮಾಡುವವರು ಕಲ್ಲು ತೂರಿದ್ದಾರೆ. 'GD Goenka world' ಎಂಬ ಶಾಲಾ ವಾಹನ ಗಾಜು ಚೂರು ಚೂರಾಗಿದ್ದು, ಅದರಲ್ಲಿ ಇದ್ದ ಮಕ್ಕಳಿಗೆ ಯಾವುದೇ ಅಪಾಯ ಆಗಿಲ್ಲ.

  ಪದ್ಮಾವತ್ ವಿರುದ್ಧ ಭುಗಿಲೆದ್ದ ಪ್ರತಿಭಟನೆ ಹಿಂಸಾಚಾರ!

  ಸಿನಿಮಾಗೆ ವಿರೋಧ ವ್ಯಕ್ತವಾಗುತ್ತಿರುವ ಹಿನ್ನಲೆಯಲ್ಲಿ ಹರಿಯಾಣ, ಮಧ್ಯಪ್ರದೇಶ, ರಾಜಸ್ಥಾನ ಮತ್ತು ಉತ್ತರ ಪ್ರದೇಶದಲ್ಲಿ ಸಿನಿಮಾವನ್ನು ಬ್ಯಾನ್ ಮಾಡಲಾಗಿತ್ತು. ಕರ್ನಿ ಸೇನಾ ಎಂಬ ರಜಪೂತ ಗುಂಪು ಎಲ್ಲೆಡೆ ಪ್ರತಿಭಟನೆ ಮಾಡುತ್ತಿದೆ. ಹರಿಯಾಣದ ಅನೇಕ ಚಿತ್ರಗಳು ಚಿತ್ರ ಪ್ರದರ್ಶನ ಮಾಡುವ ಮುಂದೆ ಬರುತ್ತಿಲ್ಲ.

  ಇನ್ನು ಬೆಂಗಳೂರಿನಲ್ಲಿ ಇಂದು ಸಂಜೆ 5.30 ರಿಂದ 'ಪದ್ಮಾವತ್' ಸಿನಿಮಾ ಪ್ರದರ್ಶನ ಶುರುವಾಗಿದೆ. ನಾಳೆ ಕರ್ನಾಟಕ ಬಂದ್ ಇರುವ ಕಾರಣ ಚಿತ್ರ ಪ್ರದರ್ಶನ ಇಲ್ಲ. ಉಳಿದಂತೆ ಮತ್ತೆ ಶುಕ್ರವಾರದಿಂದ ಎತ್ತ ಪ್ರಕಾರ ಸಿನಿಮಾ ಶೋ ಇರಲಿದೆ. ಪದ್ಮಾವತ್' ದೀಪಿಕಾ ಪಡುಕೋಣೆ ಮತ್ತು ನಿರ್ದೇಶಕ ಸಂಜಯ್ ಲೀಲಾ ಬಸ್ಸಾಲಿ ಕಾಂಬಿನೇಶನ್ ನಲ್ಲಿ ಬರುತ್ತಿರುವ 3ನೇ ಸಿನಿಮಾಗಿದೆ. ಚಿತ್ರದಲ್ಲಿ ನಟ ರಣವೀರ್ ಸಿಂಗ್ ಹಾಗೂ ಶಾಹಿದ್ ಕಪೂರ್ ಕೂಡ ನಟಿಸಿದ್ದಾರೆ.

  English summary
  GD Goenka School bus attacked in Gurgaon as protests over 'Padmaavat' movie. Actress Deepika Padukone, Ranveer Singh and Shahid Kapoor starring 'Padmavat' movie will be releasing on January 25.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X