For Quick Alerts
  ALLOW NOTIFICATIONS  
  For Daily Alerts

  ಬ್ರಿಟೀಷ್ ವ್ಯಕ್ತಿಯನ್ನು ಮದುವೆಯಾಗಿರುವ ರಾಧಿಕಾ: ಕಾರಣ ತಿಳಿದರೆ ಅಚ್ಚರಿಯಾಗದೇ ಇರದು

  |

  ನಟಿ ರಾಧಿಕಾ ಆಪ್ಟೆ ತಮ್ಮ ಬೋಲ್ಡ್ ಪಾತ್ರಗಳಿಂದ ಬಹಳ ಖ್ಯಾತರು. ಜೊತೆಗೆ ಉತ್ತಮ ನಟಿ ಎಂದೂ ಸಹ ಗುರುತಿಸಿಕೊಂಡವರು ನಟಿ ರಾಧಿಕಾ ಆಪ್ಟೆ.

  ಸ್ವಭಾವತಃ ಸಹ ರಾಧಿಕಾ ತಮ್ಮ ಹಲವು ಸಿನಿಮಾಗಳ ಪಾತ್ರಗಳಂತೆಯೇ ಗಟ್ಟಿ. ಪಕ್ಕಾ ಆಧುನಿಕ ಯುಗದ ರೆಬೆಲ್ ಹೆಣ್ಣುಮಗಳು ರಾಧಿಕಾ ಆಪ್ಟೆ.

  ತುಂಡುಡುಗೆ ಮೆಚ್ಚಿ ಧರಿಸುವ ರಾಧಿಕಾ ಆಪ್ಟೆಗೆ ಮದುವೆ ಮೇಲೆ ನಂಬಿಕೆ ಇಲ್ಲವಂತೆ. ಆದರೂ ಅವರು 2013 ರಲ್ಲಿಯೇ ಬ್ರಿಟನ್‌ ನ ವ್ಯಕ್ತಿಯೊಬ್ಬರನ್ನು ಮದುವೆ ಆಗಿದ್ದಾರೆ. ಆದರೆ ಆತನನ್ನು ಮದುವೆಯಾಗುವುದಕ್ಕೆ ಬೇರೆಯೇ ಕಾರಣ ಇದೆ.

  ನನಗೆ ಮದುವೆ ಬಗ್ಗೆ ನಂಬಿಕೆ ಇಲ್ಲ: ರಾಧಿಕಾ ಆಪ್ಟೆ

  ನನಗೆ ಮದುವೆ ಬಗ್ಗೆ ನಂಬಿಕೆ ಇಲ್ಲ: ರಾಧಿಕಾ ಆಪ್ಟೆ

  ಸಂದರ್ಶನವೊಂದರಲ್ಲಿ ಮದುವೆ ಬಗ್ಗೆ ಮಾತನಾಡಿರುವ ರಾಧಿಕಾ ಆಪ್ಟೆ. 'ನನಗೆ ಮದುವೆ ಬಗ್ಗೆ ನಂಬಿಕೆ ಇಲ್ಲ, ಅದು ನನಗೆ ಆಗಿಬರುವುದಿಲ್ಲ, ನಾನು ಬ್ರಿಟನ್ ವ್ಯಕ್ತಿಯನ್ನು ಮದುವೆ ಆದದ್ದು ವೀಸಾ ಸುಲಭವಾಗಿ ಸಿಗುತ್ತದೆ ಎಂಬ ಕಾರಣಕ್ಕೆ' ಎಂದಿದ್ದಾರೆ ನಟಿ ರಾಧಿಕಾ ಆಪ್ಟೆ.

  ಬ್ರಿಟನ್‌ನ ಸಂಗೀತಗಾರನೊಂದಿಗೆ ವಿವಾಹ

  ಬ್ರಿಟನ್‌ನ ಸಂಗೀತಗಾರನೊಂದಿಗೆ ವಿವಾಹ

  ಬ್ರಿಟನ್‌ ಸಂಗೀತಗಾರ ಬೆನೆಡಿಕ್ಟ್ ಟೈಲರ್ ಅನ್ನು 2013 ರಲ್ಲಿ ವಿವಾಹವಾಗಿದ್ದಾರೆ ರಾಧಿಕಾ ಆಪ್ಟೆ. 2012 ರಲ್ಲಿ ಈ ಇಬ್ಬರೂ ಪರಸ್ಪರ ಭೇಟಿಯಾಗಿದ್ದರು. ಇಬ್ಬರೂ ಲಿವ್ ಇನ್ ರಿಲೇಶನ್‌ನಲ್ಲಿ ಇರುವ ಬಯಕೆ ಹೊಂದಿದ್ದರು. ಆದರೆ ವೀಸಾ ಗಾಗಿ ರಾಧಿಕಾ, ಬೆನಡಿಕ್ಟ್ ಅನ್ನು ಮದುವೆ ಆಗಬೇಕಾಯಿತು.

  ನನಗೆ ಗಡಿಗಳು ಇಷ್ಟವಿಲ್ಲ: ರಾಧಿಕಾ ಆಪ್ಟೆ

  ನನಗೆ ಗಡಿಗಳು ಇಷ್ಟವಿಲ್ಲ: ರಾಧಿಕಾ ಆಪ್ಟೆ

  'ಮದುವೆ ಎಂಬುದು ಗಡಿಯಂತೆ, ನನಗೆ ಯಾವುದೇ ಗಡಿಗಳು ಇಷ್ಟವಿಲ್ಲ, ಮದುವೆ ಎಂಬ ವ್ಯವಸ್ಥೆಯಲ್ಲಿ ನನಗೆ ಇಷ್ಟವಿಲ್ಲ. ನಾವಿಬ್ಬರೂ ಲಿವ್ ಇನ್ ರಿಲೇಶನ್‌ನಲ್ಲಿ ಇರಲು ಇಚ್ಛಿಸಿದ್ದೆವು ಆದರೆ ಮದುವೆ ಆಗುವ ಅನಿವಾರ್ಯತೆ ಎದುರಾಯಿತು' ಎಂದಿದ್ದಾರೆ ರಾಧಿಕಾ ಆಪ್ಟೆ.

  Shashi Kumar ಮಗನಿಗೆ ಸಾಥ್ ಕೊಟ್ಟ ಉಪೇಂದ್ರ | Filmibeat Kannada
  2005 ರಿಂದಲೂ ನಟನೆ

  2005 ರಿಂದಲೂ ನಟನೆ

  2005 ರಿಂದಲೂ ಸಿನಿಮಾಗಳಲ್ಲಿ ನಟಿಸುತ್ತಿರುವ ರಾಧಿಕಾ ಆಪ್ಟೆ, ಹಿಂದಿ ಸೇರಿದಂತೆ ತೆಲುಗು, ತಮಿಳು ಸಿನಿಮಾಗಳಲ್ಲಿ ಸಹ ನಟಿಸಿದ್ದಾರೆ. ಕೆಲವು ವೆಬ್ ಸೀರೀಸ್ ಹಾಗೂ ನಾಟಕಗಳಲ್ಲಿಯೂ ನಟಿಸಿದ್ದಾರೆ ರಾಧಿಕಾ ಆಪ್ಟೆ.

  English summary
  Actress Radhika Apte reveled why she married to British guy. She actualy did not belived in marriage.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X