For Quick Alerts
  ALLOW NOTIFICATIONS  
  For Daily Alerts

  ತುಪ್ಪದ ಬೆಡಗಿ ರಾಗಿಣಿ ಬಾಲಿವುಡ್ ಐಟಂ ಡಾನ್ಸ್ ರೆಡಿ

  By Rajendra
  |

  ನಟಿ ರಾಗಿಣಿ ದ್ವಿವೇದಿ ಮೊಟ್ಟ ಮೊದಲ ಬಾರಿಗೆ ಬಾಲಿವುಡ್ ನಲ್ಲಿ ಸೊಂಟ ಬಳುಕಿಸುತ್ತಿರುವ ಚಿತ್ರ 'ರ್‍ಯಾಂಬೋ ರಾಜ್ ಕುಮಾರ್'. ಇತ್ತೀಚೆಗಷ್ಟೇ ಈ ಹಾಡಿನ ಚಿತ್ರೀಕರಣ ಮುಗಿದಿದೆ. ಪ್ರೀ ಕ್ಲೈಮ್ಯಾಕ್ಸ್ ನಲ್ಲಿ ಬರುವ ಈ ಹಾಡಿನಲ್ಲಿ ರಾಗಿಣಿ ಕುಣಿದಿದ್ದಾರೆ.

  ಪ್ರಭುದೇವ ಆಕ್ಷನ್ ಕಟ್ ಹೇಳುತ್ತಿರುವ ಈ ಚಿತ್ರದಲ್ಲಿ ಶಾಹಿದ್ ಕಪೂರ್ ಹಾಗೂ ಸೋನಾಕ್ಷಿ ಸಿನ್ಹಾ ಮುಖ್ಯಭೂಮಿಕೆಯಲ್ಲಿದ್ದಾರೆ. ಕಳ್ಳ ಮಳ್ಳ ಸುಳ್ಳ ಚಿತ್ರದ ತುಪ್ಪಾ ಬೇಕಾ ತುಪ್ಪಾ ನಾಟಿ ತುಪ್ಪ ಹಾಡನ್ನೂ ಮೀರಿಸಲಿದೆ ಈ ಹಾಡು ಎಂದು ರಾಗಿಣಿ ಅಭಿಮಾನಿಗಳು ನಿರೀಕ್ಷಿಸುವಂತಾಗಿದೆ.

  ಈ ಬಗ್ಗೆ ಸ್ವತಃ ರಾಗಿಣಿ ಟ್ವೀಟಿಸಿದ್ದಾರೆ, "ರ್‍ಯಾಂಬೋ ರಾಜ್ ಕುಮಾರ್ ಚಿತ್ರದ ಐಟಂ ಡಾನ್ಸ್ ಸೂಪರ್ ಆಗಿ ಮೂಡಿಬಂದಿದೆ. ಅದೊಂದು ಮರೆಯಲಾಗದ ಅನುಭವ. ರಾಕ್ ಸ್ಟಾರ್ ಜೊತೆಗಿನ ಹಾಡು ಅಷ್ಟೇ ರಾಕಿಂಗ್ ಆಗಿದೆ" ಎಂದಿದ್ದಾರೆ.

  ಚಿತ್ರದ ಪ್ರೀ ಕ್ಲೈಮ್ಯಾಕ್ಸ್ ನಲ್ಲಿ ಮೂಡಿಬರುವ ಈ ಹಾಡಿನಲ್ಲಿ ರಾಗಿಣಿ ಜೊತೆಗೆ ಚಿತ್ರದ ಬಹುತೇಕ ತಾರಾಬಳಗ ಕಾಣಿಸಲಿದೆ. ಪ್ರೀತಂ ಸಂಗೀತ ನೀಡಿರುವ ಹಾಡಿನಲ್ಲಿ ಚಾರ್ಮಿ ಕೌರ್, ಸ್ಕಾರ್ಲೆಟ್ ವಿಲ್ಸನ್ ಹಾಗೂ ಚಿತ್ರದ ಖಳನಟರು ಈ ಐಟಂ ಹಾಡಿನಲ್ಲಿ ಕುಣಿದಿದ್ದಾರೆ.

  ಈ ಬಗ್ಗೆ ರಾಗಿಣಿ ತಮ್ಮ ಫೇಸ್ ಬುಕ್ ನಲ್ಲೂ ಬರೆದುಕೊಂಡಿದ್ದಾರೆ. ಅದರ ಯಥಾವತ್ ಸಂದೇಶ ಇಲ್ಲಿದೆ.. "Good Morning, guys! So here's my surprise Just finished shooting the most amazing song of the year with rockstar Prabhudeva sir. What an outstanding experience! You guys are totally going to love it. Stay tuned. Lots of love. Muaaa,"

  ಈಗಾಗಲೆ ರಾಗಿಣಿ ಅವರ ತುಪ್ಪದ ಐಟಂ ಸಾಂಗ್ ಜೊತೆಗೆ ಇನ್ನೊಂದು ಹಾಡು ಬಹಳ ಜನಪ್ರಿಯವಾಗಿದೆ. ಅದೆಂದರೆ 'ವಿಕ್ಟರಿ' ಚಿತ್ರದಲ್ಲಿ ಬರುವ "ಯಕ್ಕಾ ನಿನ್ ಮಗಳು ನಂಗೆ ಚಿಕ್ಕೋಳಾಗಲ್ವಾ..." ಎಂಬ ಸ್ಪೆಷಲ್ಲ್ ನಂಬರ್. ಈಗ 'ರ್‍ಯಾಂಬೋ ರಾಜ್ ಕುಮಾರ್' ಚಿತ್ರದ ಬಿಸಿಬಿಸಿ ಐಟಂ ಹಾಡು ಹೇಗಿರುತ್ತದೋ ಏನೋ ಎಂಬ ನಿರೀಕ್ಷೆಯಲ್ಲಿ ರಾಗಿಣಿ ಅಭಿಮಾನಿಗಳು ಕಾಯುವಂತಾಗಿದೆ. (ಒನ್ಇಂಡಿಯಾ ಕನ್ನಡ)

  <blockquote class="twitter-tweet blockquote"><p>Shot wid <a href="https://twitter.com/PDdancing">@PDdancing</a> for R rajkumar Wht an experience....rockin song nd u are such a rockstar ... Lots of love :) <a href="http://t.co/yLRxoLjbfx">pic.twitter.com/yLRxoLjbfx</a></p>— RAGINI DWIVEDI (@raginidwivedi24) <a href="https://twitter.com/raginidwivedi24/statuses/392844343561555968">October 23, 2013</a></blockquote> <script async src="//platform.twitter.com/widgets.js" charset="utf-8"></script>

  English summary
  South lass Ragini Dwivedi, who was in news for her item number in Bollywood movie Rambo Rajkumar, has completed its shoot. The actress has danced for a pre-climax item number in the movie, which has Shahid Kapoor and Sonakshi Sinha in the lead roles.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X