»   » ಬಾಲಿವುಡ್ ನಲ್ಲೂ ರಾಗಿಣಿ ತುಪ್ಪ ಬೇಕಾ ತುಪ್ಪಾ

ಬಾಲಿವುಡ್ ನಲ್ಲೂ ರಾಗಿಣಿ ತುಪ್ಪ ಬೇಕಾ ತುಪ್ಪಾ

By: ಉದಯರವಿ
Subscribe to Filmibeat Kannada

ಕನ್ನಡದ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಬಾಲಿವುಡ್ ಚಿತ್ರರಂಗದಲ್ಲೂ ಹೆಜ್ಜೆ ಹಾಕುವ ಸಮಯ ಬಂದಿದೆ. 'ಕಳ್ಳ ಮಳ್ಳ ಸುಳ್ಳ' ಚಿತ್ರದಲ್ಲಿ "ತುಪ್ಪ ಬೇಕಾ ತುಪ್ಪ ನಾಟಿ ತುಪ್ಪ..." ಎಂದು ಸೊಂಟ ಬಳುಕಿಸಿ ಪಡ್ಡೆಗಳ ಪಾಲಿಗೆ ಘಮ ಘಮ ತುಪ್ಪವಾದ ರಾಗಿಣಿಗೆ ಹಿಂದಿ ಚಿತ್ರದಲ್ಲಿ ಭರ್ಜರಿ ಚಾನ್ಸ್ ಸಿಕ್ಕಿದೆ.

ಡಾನ್ಸ್ ಮಾಸ್ಟರ್ ಪ್ರಭುದೇವ ಆಕ್ಷನ್ ಕಟ್ ಹೇಳುತ್ತಿರುವ 'ರ್‍ಯಾಂಬೋ ರಾಜ್ ಕುಮಾರ್' ಚಿತ್ರದಲ್ಲಿ ರಾಗಿಣಿ ಸೊಂಟ ಬಳುಕಿಸಲಿದ್ದಾರೆ. ಪ್ರಭುದೇವ ಆಕ್ಷನ್ ಕಟ್ ಎಂದರೆ ಕೇಳಬೇಕೆ. ಮೊದಲೇ ಅವರು ಡಾನ್ಸ್ ಮಾಸ್ಟರ್. ಬಾಲಿವುಡ್ ನಲ್ಲಿ ರಾಗಿಣಿ ಹಾಟ್ ಬಾಂಬ್ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ.


ಸುಮಾರು ರು.40 ಕೋಟಿ ಬಜೆಟ್ ನಲ್ಲಿ ನಿರ್ಮಿಸುತ್ತಿರುವ ಈ ಚಿತ್ರದ ಮುಖ್ಯ ಭೂಮಿಕೆಯಲ್ಲಿ ಶಾಹೀದ್ ಕಪೂರ್ ಹಾಗೂ ಸೋನಾಕ್ಷಿ ಸಿನ್ಹಾ ಇದ್ದಾರೆ. ಕ್ಲೈಮ್ಯಾಕ್ಸ್ ಗೂ ಮುಂಚೆ ರಾಗಿಣಿ ಐಟಂ ನಂಬರ್ ಬರುತ್ತದಂತೆ.

ಒಂದು ದಿನ ರಿಹರ್ಸಲ್ ಮಾಡಿ ಬಳಿಕ ಹೆಜ್ಜೆ ಹಾಕಲಿದ್ದಾರೆ ರಾಗಿಣಿ. ಪ್ರಭುದೇವ ಅವರು ಬಾಲಿವುಡ್ ನಲ್ಲಿ ಚಾನ್ಸ್ ಕೊಟ್ಟಿರುವುದಕ್ಕೆ ರಾಗಿಣಿ ಸಖತ್ ಖುಷಿಯೂ ಆಗಿದ್ದಾರೆ. ಮುಂಬೈನ ಅದ್ದೂರಿ ಸೆಟ್ ನಲ್ಲಿ ಐಟಂ ಹಾಡನ್ನು ಚಿತ್ರೀಕರಿಸಲಾಗುತ್ತದೆ. ಪ್ರೀತಂ ಕಾಂಪೋಸ್ ಮಾಡಿರುವ ಹಾಡಿದು.

ಈಗಾಗಲೆ ರಾಗಿಣಿ ಅವರ ತುಪ್ಪದ ಐಟಂ ಸಾಂಗ್ ಜೊತೆಗೆ ಇನ್ನೊಂದು ಹಾಡು ಬಹಳ ಜನಪ್ರಿಯವಾಗಿದೆ. ಅದೆಂದರೆ 'ವಿಕ್ಟರಿ' ಚಿತ್ರದಲ್ಲಿ ಬರುವ "ಯಕ್ಕಾ ನಿನ್ ಮಗಳು ನಂಗೆ ಚಿಕ್ಕೋಳಾಗಲ್ವಾ..." ಎಂಬ ಸ್ಪೆಷಲ್ಲ್ ನಂಬರ್. ಈಗ 'ರ್‍ಯಾಂಬೋ ರಾಜ್ ಕುಮಾರ್' ಚಿತ್ರದ ಬಿಸಿಬಿಸಿ ಐಟಂ ಹಾಡು ಹೇಗಿರುತ್ತದೋ ಏನೋ ಎಂಬ ನಿರೀಕ್ಷೆಯಲ್ಲಿ ರಾಗಿಣಿ ಅಭಿಮಾನಿಗಳು ಕಾಯುವಂತಾಗಿದೆ. (ಏಜೆನ್ಸೀಸ್)

English summary
Kannada actress Ragini Dwivedi will be seen in a special number in Prabhu Dheva's R... Rajkumar, which stars Shahid Kapoor, Sonakshi Sinha and Sonu Sood. The pre-climax number, composed by Pritam, features a whole lot of artists, including all the villains in the film.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada