For Quick Alerts
  ALLOW NOTIFICATIONS  
  For Daily Alerts

  ಅಶ್ಲೀಲ ಸಿನಿಮಾಗಳ ಬಗ್ಗೆ ರಾಜ್ ಕುಂದ್ರಾ ಹಳೆ ಟ್ವೀಟ್ ವೈರಲ್

  |

  ಶಿಲ್ಪಾ ಶೆಟ್ಟಿ ಪತಿ, ಉದ್ಯಮಿ ರಾಜ್ ಕುಂದ್ರಾ, ಅಶ್ಲೀಲ ಸಿನಿಮಾಗಳನ್ನು ನಿರ್ಮಿಸಿದ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದಾರೆ. ಈ ಪ್ರಕರಣದ ಮುಖ್ಯ ಆರೋಪಿ ರಾಜ್ ಕುಂದ್ರಾ ಎಂದು ಹೇಳಲಾಗುತ್ತಿದೆ.

  ರಾಜ್ ಕುಂದ್ರಾ ಬಂಧನ ಆಗುತ್ತಿದ್ದಂತೆ, ಕುಂದ್ರಾ, ಪೋರ್ನ್ (ನೀಲಿ ಚಿತ್ರ) ಬಗ್ಗೆ ಮಾಡಿದ್ದ ಹಳೆಯ ಟ್ವೀಟ್‌ಗಳು ವೈರಲ್ ಆಗುತ್ತಿವೆ.

  ವೇಶ್ಯಾವಾಟಿಕೆ ಮತ್ತು ಪೋರ್ನ್ ವಿಡಿಯೋಗಳ ಬಗ್ಗೆ ಹಿಂದೊಮ್ಮೆ 2012ರಲ್ಲಿ ರಾಜ್ ಕುಂದ್ರಾ ಟ್ವೀಟ್ ಮಾಡಿದ್ದರು, ''ಕ್ಯಾಮೆರಾದಲ್ಲಿ ಸೆರೆಯಾದ ಸೆಕ್ಸ್‌ ನೋಡಲು ಹಣ ತೆರುವುದು ಕಾನೂನುಬದ್ಧ ಆಗಿರುವಾಗ ವೇಶ್ಯಾವಾಟಿಕೆ ಏಕೆ ಕಾನೂನು ಬಾಹಿರ'' ಎಂದು ರಾಜ್ ಕುಂದ್ರಾ ಪ್ರಶ್ನೆ ಮಾಡಿದ್ದರು. ಆ ಮೂಲಕ ವೇಶ್ಯಾವಾಟಿಕೆಯನ್ನು ಕಾನೂನುಬದ್ಧಗೊಳಿಸಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು.

  2012 ರಲ್ಲಿಯೇ ಮಾಡಿದ್ದ ಮತ್ತೊಂದು ಟ್ವೀಟ್‌ನಲ್ಲಿ, ''ನಟರು ಕ್ರಿಕೆಟ್ ಆಡುತ್ತಿದ್ದಾರೆ. ಕ್ರಿಕೆಟಿಗರು ರಾಜಕಾರಣ ಮಾಡುತ್ತಿದ್ದಾರೆ. ರಾಜಕಾರಣಿಗಳು ಪೋರ್ನ್ ವಿಡಿಯೋಗಳನ್ನು ನೋಡುತ್ತಿದ್ದಾರೆ. ಪೋರ್ನ್ ಸ್ಟಾರ್‌ಗಳು ನಟರಾಗುತ್ತಿದ್ದಾರೆ'' ಎಂದಿದ್ದರು.

  ಇದೀಗ ರಾಜ್ ಕುಂದ್ರಾ ಅನ್ನು ಪೋರ್ನ್ ವಿಡಿಯೋ ನಿರ್ಮಾಣ ಪ್ರಕರಣದಲ್ಲಿ ಮುಂಬೈ ಪೊಲೀಸರು ಬಂಧಿಸಿದ್ದಾರೆ. ಇದೇ ವರ್ಷದ ಫೆಬ್ರವರಿಯಲ್ಲಿ ಈ ಬಗ್ಗೆ ದೂರು ದಾಖಲಾಗಿತ್ತು, ತನಿಖೆ ವೇಳೆ ಪ್ರಕರಣದ ಮುಖ್ಯ ಆರೋಪಿ ರಾಜ್ ಕುಂದ್ರಾ ಎಂದು ತಿಳಿದುಬಂದಿದ್ದು ಅವರ ವಿರುದ್ಧ ಪ್ರಾಥಮಿಕ ಸಾಕ್ಷ್ಯಗಳನ್ನು ಒಟ್ಟುಗೂಡಿಸಿಕೊಂಡ ಬಳಿಕ ಅವರನ್ನು ಬಂಧಿಸಲಾಗಿದೆ ಎಂದು ಮುಂಬೈ ಪೊಲೀಸ್ ಆಯುಕ್ತ ಹೇಳಿದ್ದಾರೆ.

  ಓದಿದ್ರೆ ಈ ಮಟ್ಟಕ್ಕೆ ಹೆಸರು ಮಾಡೋಕೆ ಆಗ್ತಾ ಇರ್ಲಿಲ್ಲ ಅನ್ಸುತ್ತೆ | Umesh Kinnal Comedy Khiladigalu Journey

  ರಾಜ್ ಕುಂದ್ರಾ ಉದ್ಯಮಿ ಆಗಿದ್ದು, ಐಪಿಎಲ್ ತಂಡ ರಾಜಸ್ಥಾನ ರಾಯಲ್ಸ್‌ನ ಮಾಲೀಕರು ಸಹ ಆಗಿದ್ದಾರೆ. ಎಸ್ಸೆನ್ಶಿಯಲ್ ಸ್ಪೋರ್ಟ್ಸ್ ಆಂಡ್ ಮೀಡಿಯಾ ಸಂಸ್ಥೆಯ ಪಾಲುದಾರಿಕೆ ಹೊಂದಿರುವ ಕುಂದ್ರಾ, ಸತ್ಯುಗ್ ಗೋಲ್ಡ್, ಹಾಗೂ ಬಾಸ್ಟನ್ ಹಾಸ್ಪಿಟಾಲಿಟಿ ಎಂಬ ಹೋಟೆಲ್ ಅನ್ನು ಹೊಂದಿದ್ದಾರೆ. ಜೊತೆಗೆ ಸೂಪರ್ ಫೈಟ್ ಲೀಗ್ ಎಂಬ ಲೀಗ್ ಪ್ರಾರಂಭಿಸಿದ್ದರು. ಹಾಗೂ ಬೆಸ್ಟ್ ಡೀಲ್ ಟಿವಿ ಹಾಗೂ ಜಲ್ದಿ ಲೈವ್ ಸ್ಟ್ರೀಮ್ ಆಪ್‌ ಅನ್ನು ಸಹ ಹೊಂದಿದ್ದಾರೆ.

  English summary
  Shilpa Shetty's husband Raj Kundra's old tweets about indecent videos and prostitution went viral after his arrest.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X