»   » ಬೆಂಗಳೂರಿನಲ್ಲಿ ರಾಜೇಶ್ ಖನ್ನಾ ಕೊನೆಯ ಡೈಲಾಗ್

ಬೆಂಗಳೂರಿನಲ್ಲಿ ರಾಜೇಶ್ ಖನ್ನಾ ಕೊನೆಯ ಡೈಲಾಗ್

Posted By:
Subscribe to Filmibeat Kannada
'ಮೇರಾ ಫ್ಯಾನ್ಸ್ ಕೋ ಕೋಯಿ ನಹೀ ಚೀನ್ ಸಕ್ತಾ' (ನನ್ನ ಅಭಿಮಾನಿಗಳನ್ನು ಯಾರೂ ಕಿತ್ತುಕೊಳ್ಳಲಿಕ್ಕಾಗಲ್ಲ)...ಬಾಲಿವುಡ್ ಸೂಪರ್ ಸ್ಟಾರ್ ರಾಜೇಶ್ ಖನ್ನಾ (69) ಕ್ಯಾಮೆರಾ ಮುಂದೆ ಹೇಳಿದ ಕೊನೆಯ ಡೈಲಾಗ್ ಇದು. ಅದೂ ನಮ್ಮ ನಿಮ್ಮಲ್ಲೆರ ಬೆಂಗಳೂರಿನಲ್ಲಿ ಎಂದರೆ ಅಚ್ಚರಿಯಾಗುತ್ತದೆ.

ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಎರಡು ತಿಂಗಳ ಹಿಂದಷ್ಟೇ ಬೆಂಗಳೂರಿಗೆ ಭೇಟಿ ನೀಡಿದ್ದರು. ಫ್ಯಾನ್ ಗಳ ತಯಾರಿಕಾ ಕಂಪನಿಯ ಪ್ರಚಾರ ಕಾರ್ಯಕ್ರಮಕ್ಕಾಗಿ ಆಗಮಿಸಿದ್ದರು. ಈ ಸಂದರ್ಭಲ್ಲಿ ಅವರು ಮಾತನಾಡುತ್ತಾ, ಮೇಲಿನ ಡೈಲಾಗನ್ನು ತನ್ನದೇ ಆದ ಶೈಲಿಯಲ್ಲಿ ಹೇಳಿದರು.

ವಯಸ್ಸು ಹಾಗೂ ಅನಾರೋಗ್ಯದ ಕಾರಣ ಅವರಿಗೆ ನಡೆದಾಡಲೂ ಕಷ್ಟಪಡುತ್ತಿದ್ದರು. ತನ್ನ ಸಹಾಯಕರೊಂದಿಗೆ ಸೂಪರ್ ಸ್ಟಾರ್ ಕೋರಮಂಗಲದ ಒಳಾಂಗಣ ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ಪ್ರಚಾರದ ಕಾರ್ಯದ ವೇದಿಗೆ ಆಗಮಿಸಿದರು.

ಈ ಫ್ಯಾನ್ ಪ್ರಚಾರ ಕಾರ್ಯಕ್ರಮವನ್ನು ಬೆಂಗಳೂರು ಅಥವಾ ದೆಹಲಿಯಲ್ಲಿ ನಿರ್ವಹಿಸಲು ಕಾರ್ಯಕ್ರಮದ ನಿರ್ವಾಹಕರು ನಿರ್ಧರಿಸಿದ್ದರಂತೆ. ಆದರೆ ರಾಜೇಶ್ ಖನ್ನಾ ಅವರು ಬೆಂಗಳೂರು ನಗರವನ್ನು ಆಯ್ಕೆ ಮಾಡಿದ್ದರು. ಅವರ ಕೊನೆಯ ಬೆಂಗಳೂರು ಭೇಟಿ ಇದು.

ಎಪ್ಪತ್ತು, ಎಂಬತ್ತರ ದಶಕದಲ್ಲಿ ತನ್ನ ಬೆಲ್ ಬಾಟಮ್ ಪ್ಯಾಂಟ್ ಹಾಗೂ ತನ್ನದೇ ಆದ ಹೇರ್ ಸ್ಟೈಲ್ ಮೂಲಕ ಅಪಾರ ಅಭಿಮಾನಿಗಳನ್ನು, ಅದರಲ್ಲೂ ಹೆಂಗೆಳೆಯನ್ನು ಸೆಳೆದ ರಾಜೇಶ್ ಖನ್ನಾ ಮುಂಬೈನಲ್ಲಿ ಬುಧವಾರ (ಜು.19) ಕೊನೆಯುಸಿರೆಳೆದದ್ದು ಗೊತ್ತೇ ಇದೆ.

ರಕ್ತದೊತ್ತಡ ಮತ್ತು ತೀವ್ರ ನಿಶ್ಶಕ್ತಿಯಿಂದ ಬಳಲುತ್ತಿದ್ದ ಅವರನ್ನು ಇತ್ತೀಚಿನ ದಿನಗಳಲ್ಲಿ ಮೂರು ಬಾರಿ ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರ ಅನಾರೋಗ್ಯದ ಬಗ್ಗೆ ಅನೇಕ ಗಾಳಿಸುದ್ದಿಗಳು ಹಾರಾಡುತ್ತಿದ್ದಾಗ, ಅವರು ಸೌಖ್ಯದಿಂದಿದ್ದಾರೆ, ಇಲ್ಲಸಲ್ಲದ ಸುದ್ದಿಗಳನ್ನು ಹರಡಬಾರದು ಎಂದು ಕುಟುಂಬದವರು ಕೆಲ ದಿನಗಳ ಹಿಂದೆ ಕೇಳಿದ್ದರು.

ಮುಖ್ಯಮಂತ್ರಿ ಸಂತಾಪ: ಬಾಲಿವುಡ್ ನ ಒಂದು ಕಾಲದ ಸೂಪರ್ ಸ್ಟಾರ್ ರಾಜೇಶ್ ಖನ್ನಾ ನಿಧನಕ್ಕೆ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ದೇವರು ಅವರ ಕುಟುಂಬಕ್ಕೆ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದ್ದಾರೆ. (ಒನ್ ಇಂಡಿಯಾ ಕನ್ನಡ)

English summary
"Mera fans ko Koi nahi cheen sakta" (Nobody can snatch my fans) this is the last dialogue by India’s first superstar, actor Rajesh Khanna in Bangalore. Two months back he visited the city. The actor passed away at his residence in Mumbai on Wednesday afternoon, after a prolonged illness. He was 69.
Please Wait while comments are loading...