Don't Miss!
- Automobiles
ಭಾರತದಲ್ಲಿ ಆಕರ್ಷಕ ವಿನ್ಯಾಸದ 2023ರ ಬಿಎಂಡಬ್ಲ್ಯು X1 ಎಸ್ಯುವಿ ಬಿಡುಗಡೆ
- News
ನಾವು ಜಾಗರೂಕರಾಗಿದ್ದೇವೆ: ಅದಾನಿ ಗ್ರೂಪ್ ವಿರುದ್ಧದ ಆರೋಪಗಳ ಕುರಿತು ಉನ್ನತ ಬ್ಯಾಂಕ್ಗಳು ಹೇಳಿದ್ದೇನು?
- Sports
ಮತ್ತೊಮ್ಮೆ ನಮಗೆ ಆತನೇ ಬಲು ದೊಡ್ಡ ಕಂಟಕ: ಭಾರತೀಯ ಆಟಗಾರನ ಬಗ್ಗೆ ಆಸಿಸ್ ಕ್ರಿಕೆಟಿಗನ ಆತಂಕ!
- Finance
ಅದಾನಿ ಗ್ರೂಪ್ ವಿರುದ್ಧ ಆರೋಪ: 'ನಾವು ಜಾಗರೂಕರಾಗಿದ್ದೇವೆ' ಎಂದ ಭಾರತದ ಉನ್ನತ ಬ್ಯಾಂಕ್ಗಳು
- Technology
ಭಾರತದಲ್ಲಿ ಹೊಸ ಸಂಚಲನ ಸೃಷ್ಟಿಸಿದ ಫೈರ್ಬೋಲ್ಟ್ ಕಂಪೆನಿ!..ಪ್ರತಿಸ್ಫರ್ಧಿಗಳು ಕಂಗಾಲು!
- Lifestyle
ಬಿಪಿ ಸಮಸ್ಯೆಯೇ? ಪಿಜ್ಜಾ, ಮಜ್ಜಿಗೆ ಈ ಬಗೆಯ ಅಧಿಕ ಸೋಡಿಯಂ ಆಹಾರ ಸೇವಿಸಲೇಬೇಡಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಸೋಲಿನ ಸುಳಿಯಲ್ಲಿದ್ದ ಶಾರುಖ್ ಖಾನ್ ಕೈ ಹಿಡಿದ ಸೋಲಿಲ್ಲದ ಸರದಾರ
ದಶಕಗಳ ಕಾಲ ಬಾಲಿವುಡ್ ಅನ್ನು ಆಳಿದ ಶಾರುಖ್ ಖಾನ್ ಇತ್ತೀಚಿನ ಕೆಲ ವರ್ಷಗಳಲ್ಲಿ ಒಂದೊಳ್ಳೆ ಹಿಟ್ ಸಿನಿಮಾ ನೀಡಲಾಗದೆ ಒದ್ದಾಡುತ್ತಿದ್ದಾರೆ.
2013 ರಲ್ಲಿ ಬಿಡುಗಡೆ ಆಗಿದ್ದ 'ಚೆನ್ನೈ ಎಕ್ಸ್‌ಪ್ರೆಸ್' ಸಿನಿಮಾದ ನಂತರ ಒಂದು ಪರಿಪೂರ್ಣ ಹಿಟ್ ಸಿನಿಮಾ ನೀಡಲು ಸಾಧ್ಯವಾಗಿಲ್ಲ ಶಾರುಖ್ ಖಾನ್‌ಗೆ. ಆಲಿಯಾ ಭಟ್ ಜೊತೆ ನಟಿಸಿದ್ದ 'ಡಿಯರ್ ಜಿಂದಗಿ' ಸಿನಿಮಾ ವಿಮರ್ಶಕರ ಮೆಚ್ಚುಗೆ ಗಳಿಸಿತಾದರೂ ಹಿಟ್ ಎನಿಸಿಕೊಳ್ಳಲಿಲ್ಲ.
'ಫ್ಯಾನ್', 'ರಯೀಸ್' ಮೇಲೆ ದೊಡ್ಡ ನಿರೀಕ್ಷೆಯನ್ನು ಶಾರುಖ್ ಇಟ್ಟಿದ್ದರೂ ಆ ಸಿನಿಮಾಗಳು ಸಹ ಯಶಸ್ಸು ತಂದುಕೊಡಲಿಲ್ಲ. 'ಜಬ್ ಹ್ಯಾರಿ ಮೆಟ್ ಸೇಜಲ್, 'ಜೀರೋ, 'ಹ್ಯಾಪಿ ನ್ಯೂ ಇಯರ್' ಸಿನಿಮಾಗಳಂತೂ ಕಳಪೆ ಸಿನಿಮಾಗಳು ಎನಿಸಿಕೊಂಡವು. ಸೋಲಿನಿಂದ ಕಂಗೆಟ್ಟು ಮೂರು ವರ್ಷ ನಟನೆಯಿಂದ ದೂರ ಉಳಿದ ಶಾರುಖ್ ಖಾನ್ ಈಗ 'ಪಠಾಣ್' ಹೆಸರಿನ ಆಕ್ಷನ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಆ ಸಿನಿಮಾ ಹಿಟ್ ಆಗುತ್ತದೆಯೋ ಇಲ್ಲವೋ ನಂಬಿಕೆ ಇಲ್ಲ. ಆದರೆ ಈಗ ಸಹಿ ಮಾಡಿರುವ ಹೊಸ ಸಿನಿಮಾ ಅಂತೂ ಪಕ್ಕಾ ಹಿಟ್ ಆಗಲಿದೆ. ಶಾರುಖ್ ಖಾನ್ ಅನ್ನು ಸೋಲಿನ ಸುಳಿಯಿಂದ ಹೊರಗೆ ಕರೆತರಲಿದೆ. ಅದಕ್ಕೆ ಕಾರಣ ಆ ಸಿನಿಮಾದ ನಿರ್ದೇಶಕ.
ಹೌದು, ಶಾರುಖ್ ಖಾನ್ ಹೊಸ ಸಿನಿಮಾ ಒಂದಕ್ಕೆ ಸಹಿ ಮಾಡಿದ್ದು ಆ ಸಿನಿಮಾವನ್ನು ಸೋಲಿಲ್ಲದ ಸರದಾರ ರಾಜ್‌ಕುಮಾರ್ ಹಿರಾನಿ ನಿರ್ದೇಶನ ಮಾಡಲಿದ್ದಾರೆ. ರಾಜ್‌ಕುಮಾರ್ ಹಿರಾನಿ ಕೈಯಿಟ್ಟಿದ್ದಾರೆಂದರೆ ಸಿನಿಮಾ ಸೂಪರ್-ಡೂಪರ್ ಹಿಟ್ ಪಕ್ಕಾ ಎನ್ನುವುದು ಬಾಲಿವುಡ್‌ನ ಗಲ್ಲಿ-ಗಲ್ಲಿಗೂ ಗೊತ್ತು.

ರಾಜ್‌ಕುಮಾರ್ ಹಿರಾನಿಯ ಎಲ್ಲ ಸಿನಿಮಾ ಸೂಪರ್ ಹಿಟ್
'ಮುನ್ನಾಭಾಯಿ ಎಂಬಿಬಿಎಸ್', '3 ಇಡಿಯಟ್ಸ್', 'ಪಿಕೆ', 'ಸಂಜು' ಅಂಥಹಾ ಸೂಪರ್ ಹಿಟ್ ಸಿನಿಮಾಗಳನ್ನು ನಿರ್ದೇಶಿಸಿರುವ ರಾಜ್‌ಕುಮಾರ್ ಹಿರಾನಿ ಈವರೆಗೆ ಸೋಲನ್ನೇ ಕಂಡಿಲ್ಲ. ಅವರೀಗ ಮೊದಲನೇ ಬಾರಿಗೆ ಶಾರುಖ್ ಖಾನ್ ಜೊತೆ ಕೈಜೋಡಿಸಿದ್ದಾರೆ.

ನಾಯಕಿ ತಾಪ್ಸಿ ಪನ್ನು?
ಶಾರುಖ್ ಹಾಗೂ ರಾಜ್‌ಕುಮಾರ್ ಹಿರಾನಿ ಒಟ್ಟಿಗೆ ಸಿನಿಮಾ ಮಾಡಲಿದ್ದಾರೆ ಎಂಬ ಬಗ್ಗೆ ಅಲ್ಲಲ್ಲಿ ಗಾಳಿ ಸುದ್ದಿಗಳು ಹರಿದಾಡುತ್ತಿದ್ದವು. ಆದರೆ ಈಗ ಅದು ಖಾತ್ರಿಯಾಗಿದೆ. ರಾಜ್‌ಕುಮಾರ್ ಹಿರಾನಿ-ಶಾರುಖ್ ನಟಿಸುವ ಸಿನಿಮಾಕ್ಕೆ ತಾಪ್ಸಿ ಪನ್ನು ನಾಯಕಿ ಎಂಬ ಬಗ್ಗೆಯೂ ಸುದ್ದಿಗಳು ಹರಿದಾಡಿದ್ದವು. ಆದರೆ ತಾಪ್ಸಿ ಪನ್ನು ಕುರಿತ ಸುದ್ದಿ ಈ ಹಂತದಲ್ಲಿ ಖಾತ್ರಿಯಾಗಿಲ್ಲ.

ಹೀಗೆ ಹೇಳಿದ್ದಾರೆ ರಣಬೀರ್ ಕಪೂರ್
ರಾಜ್‌ಕುಮಾರ್ ಹಿರಾನಿ ನಿರ್ದೇಶನದ 'ಸಂಜು' ಸಿನಿಮಾದಲ್ಲಿ ನಟಿಸಿದ್ದ ರಣಬೀರ್ ಕಪೂರ್, ಶಾರುಖ್-ಹಿರಾನಿ ಕಾಂಬಿನೇಷನ್ ಬಗ್ಗೆ ಮಾತನಾಡಿ, ''ಅವರಿಬ್ಬರು ಒಂದಾಗುವ ಸಿನಿಮಾ ಬಾಲಿವುಡ್ ದಿಕ್ಕನ್ನೇ ಬದಲಾಯಿಸುತ್ತದೆ'' ಎಂದಿದ್ದಾರೆ. ''ಆ ಸಿನಿಮಾವು ಬಾಲಿವುಡ್‌ನ ಐತಿಹಾಸಿಕ ಹಿಟ್ ಸಿನಿಮಾ ಆಗಲಿದೆ'' ಎಂದಿದ್ದಾರೆ ರಣಬೀರ್ ಕಪೂರ್.

ಎರಡು ಕತೆ ಇಟ್ಟಿದ್ದ ಹಿರಾನಿ
ರಾಜ್‌ಕುಮಾರ್ ಹಿರಾನಿ ಶಾರುಖ್ ಮುಂದೆ ಎರಡು ಮಾದರಿಯ ಕತೆಗಳನ್ನಟ್ಟಿದ್ದರು. ಒಂದು 'ಮುನ್ನಾಭಾಯಿ' ಮಾದರಿಯ ತಮಾಷೆಯುಕ್ತ ಕತೆ ಮತ್ತೊಂದು ವಲಸೆ ಸಮಸ್ಯೆ ಬಗ್ಗೆ ಚರ್ಚೆ ಮಾಡುವ ಸಾಮಾಜಿಕ ಕೋನವುಳ್ಳ ಸಿನಿಮಾ. ಶಾರುಖ್ ಎರಡನೇ ಕತೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ.
Recommended Video

ಇದೇ ವರ್ಷಾಂತ್ಯದಲ್ಲಿ ಚಿತ್ರೀಕರಣ ಆರಂಭ
ಪ್ರಸ್ತುತ 'ಪಠಾಣ್' ಸಿನಿಮಾದಲ್ಲಿ ಶಾರುಖ್ ಖಾನ್ ನಿರತರಾಗಿದ್ದಾರೆ. ಅದರ ಬಳಿಕ ತಮಿಳಿನ ಅಟ್ಟಿಲಿ ನಿರ್ದೇಶನದ ಪ್ರೇಮಕತೆ ಸಿನಿಮಾದಲ್ಲಿ ನಟಿಸಲಿದ್ದಾರೆ. ಅಟ್ಟಿಲಿ ಸಿನಿಮಾವು ಇದೇ ವರ್ಷದಲ್ಲಿ ಮುಗಿಯಲಿದ್ದು, ಆ ಬಳಿಕ ರಾಜ್‌ಕುಮಾರ್ ಹಿರಾನಿ ಜೊತೆಗೆ ಸಿನಿಮಾ ಆರಂಭಿಸಲಿದ್ದಾರೆ ಶಾರುಖ್ ಖಾನ್.