Don't Miss!
- News
ಉಡುಪಿಯಲ್ಲಿ ಬಿಜೆಪಿಗೆ ಪ್ರತಿಸ್ಪರ್ಧಿಗಳೇ ಇಲ್ಲ: ಶಾಸಕ ಕೆ. ರಘುಪತಿ ಭಟ್ ಸಂದರ್ಶನ
- Sports
IND vs NZ 3rd T20: ಪ್ರಮುಖ ವೇಗಿಯನ್ನು ತಂಡದಿಂದ ಬಿಡುಗಡೆ ಮಾಡಿದ ಟೀಂ ಇಂಡಿಯಾ
- Automobiles
ಜನಪ್ರಿಯ ನಟನ ಮನೆಗೆ ಕಥೆ ಹೇಳಲು ಹೋಗಿ ಆತನ ದುಬಾರಿ ಕಾರ್ ಓಡಿಸಿಬಂದ ನಿರ್ದೇಶಕ...
- Technology
ಭಾರತದಲ್ಲಿ ಇನ್ಫಿನಿಕ್ಸ್ ಝೀರೋ ಬುಕ್ ಅಲ್ಟ್ರಾ ಲ್ಯಾಪ್ಟಾಪ್ ಲಾಂಚ್; ಏನೆಲ್ಲಾ ಫೀಚರ್ಸ್ ಇವೆ ಗೊತ್ತಾ!?
- Lifestyle
ಫೆ.1ಕ್ಕೆ ಜಯ ಏಕಾದಶಿ: ಈ ರೀತಿ ಮಾಡಿದರೆ ದಾರಿದ್ರ್ಯ ಹೋಗಿ ಸಂಪತ್ತು ವೃದ್ಧಿಸುವುದು
- Finance
Economic Survey: ಶೇ.6-6.8 ಜಿಡಿಪಿ ಬೆಳವಣಿಗೆ, 3 ವರ್ಷದಲ್ಲೇ ಮಂದಗತಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಅಮೀರ್ ಖಾನ್-ಕರಣ್ ರಾವ್ ಡಿವೋರ್ಸ್: ರಾಖಿ ಸಾವಂತ್ ಹೇಳಿದ್ದೇನು?
ಬಾಲಿವುಡ್ ನಟ ಅಮೀರ್ ಖಾನ್ ಮತ್ತು ಕಿರಣ್ ರಾವ್ ತಮ್ಮ 15 ವರ್ಷದ ದಾಂಪತ್ಯ ಜೀವನ ಅಂತ್ಯಗೊಳಿಸಿದ್ದಾರೆ. ಜುಲೈ 3 ರಂದು ಅಧಿಕೃತವಾಗಿ ಇಬ್ಬರು ಬೇರ್ಪಟ್ಟ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಳ್ಳುವ ಮೂಲಕ ಅಭಿಮಾನಿ ಬಳಗಕ್ಕೆ ಅಚ್ಚರಿ ಮೂಡಿಸಿದ್ದಾರೆ.
ವಿಚ್ಛೇದನ ಕುರಿತು ಜಂಟಿ ಹೇಳಿಕೆ ಬಿಡುಗಡೆ ಮಾಡಿದ ಅಮೀರ್ ಖಾನ್ ಮತ್ತು ಕಿರಣ್ ರಾವ್ ''ಈ 15 ವರ್ಷದಲ್ಲಿ ಈ ಜೀವಮಾನಕ್ಕಾಗುಷ್ಟು ಸುಂದರ ಅನುಭೂತಿಗಳನ್ನು ನಾವು ಪಡೆದುಕೊಂಡಿದ್ದೇವೆ. ಇಷ್ಟು ವರ್ಷಗಳು ನಾವು ಒಟ್ಟಿಗೆ ನಕ್ಕಿದ್ದೇವೆ, ಸಂಭ್ರಮಿಸಿದ್ದೇವೆ. ನಮ್ಮ ಸುಂದರ ಸಂಬಂಧವು ಕೇವಲ ಗೌರವ ಹಾಗೂ ನಂಬಿಕೆಗಳ ಆಧಾರದಲ್ಲಿ ನಿಂತಿತ್ತು. ನಾವು ಈಗ ನಮ್ಮ ಜೀವನದಲ್ಲಿ ಹೊಸ ಅಧ್ಯಾಯ ಪ್ರಾರಂಭಿಸಲು ಹೊರಟಿದ್ದೇವೆ. ನಾವು ಇನ್ನು ಮುಂದೆ ಪತಿ, ಪತ್ನಿ ಅಲ್ಲ ಆದರೆ ಮಗ ಅಜಾದ್ ರಾವ್ ಖಾನ್‌ಗೆ ಪೋಷಕರಾಗಿಯೇ ಇರಲಿದ್ದೇವೆ'' ಎಂದು ಪ್ರಕಟಿಸಿದರು.
15
ವರ್ಷದ
ದಾಂಪತ್ಯ
ಅಂತ್ಯಗೊಳಿಸಿದ
ನಟ
ಅಮೀರ್
ಖಾನ್:
ವಿಚ್ಛೇಧನ
ಘೋಷಣೆ
ಇನ್ನು ಅಮೀರ್ ಖಾನ್ ಡಿವೋರ್ಸ್ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಾಖಿ ಸಾವಂತ್ ''ಕಿರಣ್ ರಾವ್ ಅವರನ್ನು ದೂರ ಮಾಡಬೇಡಿ'' ಎಂದು ವಿನಂತಿಸಿದ್ದಾರೆ. 'ಸಹಜವಾಗಿ ಯಾರಾದರೂ ಬೇರ್ಪಟ್ಟರೆ ನನಗೆ ದುಃಖವಾಗುತ್ತದೆ' ಎಂದು ಬೇಸರ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಹಾಸ್ಯ ಚಟಾಕಿ ಹಾರಿಸಿದ ರಾಖಿ ಸಾವಂತ್ ''ನಾನು ಇನ್ನು ಸಿಂಗಲ್ ಆಗಿದ್ದೇನೆ, ಅಮೀರ್ ಖಾನ್ ನನ್ನ ಬಗ್ಗೆ ಏನು ಯೋಚಿಸುತ್ತಾರೆ'' ಎಂದು ಪ್ರಶ್ನಿಸಿದರು.
ರಾಖಿ ಸಾವಂತ್ ವಿವಾದಾತ್ಮಕ ವಿವಾಹ
2018ರಲ್ಲಿ ಕಿರುತೆರೆ ಕಲಾವಿದ ದೀಪಕ್ ಕಲಲ್ ಜೊತೆ ವಿವಾಹವಾಗುವುದಾಗಿ ಘೋಷಿಸಿದ್ದರು. ಬಳಿಕ ಸ್ವಲ್ಪ ದಿನದ ನಂತರ ನಾವು ಮದುವೆ ಆಗುತ್ತಿಲ್ಲ ಎಂದು ಹೇಳಿಕೊಂಡರು.
'ಕಾನೂನಾತ್ಮಕವಾಗಿ
ನಾನು
ಅವರ
ಹೆಂಡತಿಯೋ
ಅಥವಾ
ಇಲ್ಲವೋ?':
ಪತಿ
ಬಗ್ಗೆ
ವರಸೆ
ಬದಲಿಸಿದ
ರಾಖಿ
2019ರಲ್ಲಿ ರಿತೇಶ್ ಎನ್ನುವ ಎನ್‌ಆರ್‌ಐ ಜೊತೆ ಮದುವೆ ಆಗಿದ್ದೇನೆ ಎಂದು ಕೆಲವು ಫೋಟೋಗಳನ್ನು ಬಹಿರಂಗಪಡಿಸಿದ್ದರು. ಆದರೆ, ಇದುವರೆಗೂ ಎನ್‌ಆರ್‌ಐ ಪತಿಯ ದರ್ಶನ ಕೊಡಿಸಿಲ್ಲ.
2005ರಲ್ಲಿ ಅಮೀರ್ ಖಾನ್-ಕಿರಣ್ ರಾವ್ ಮದುವೆ
Recommended Video
ಕಿರಣ್ ರಾವ್ ಹಾಗೂ ಅಮೀರ್ ಖಾನ್ 2000ರಲ್ಲಿ 'ಲಗಾನ್' ಸಿನಿಮಾದ ಸೆಟ್‌ನಲ್ಲಿ ಪರಸ್ಪರ ಭೇಟಿಯಾದರು. ಡಿಸೆಂಬರ್ 28, 2005ರಲ್ಲಿ ವಿವಾಹವಾದರು. ಇಬ್ಬರಿಗೂ ಅಜಾದ್ ರಾವ್ ಹೆಸರಿನ ಮಗನನ್ನು ದಂಪತಿಯು ಸರ್ರೋಗೆಸಿ ತಂತ್ರಜ್ಞಾನದ ಮೂಲಕ ಪಡೆದುಕೊಂಡಿದ್ದರು.